ವ್ಯಕ್ತಿ ಪೂಜೆಗೆ ನಾನು ಸಿದ್ದನಿಲ್ಲ ಪಕ್ಷದ ಆಂತರಿಕ ಪೂಜೆಗೆ ನಾನು ಸಿದ್ದ: ಮಂಜುನಾಥ ಗೌಡ
Team Udayavani, Jul 26, 2022, 8:19 PM IST
ತೀರ್ಥಹಳ್ಳಿ : ಸ್ವಾತಂತ್ರ್ಯದ 75 ನೇ ವರ್ಷದ ಅಮೃತ ಮಹೋತ್ಸವದ ಸವಿ ನೆನಪಿನಲ್ಲಿ ಎಐಸಿಸಿ ಮತ್ತು ಕೆಪಿಸಿಸಿ ಸೂಚನೆಯಂತೆ ಪ್ರತಿ ಜಿಲ್ಲೆಯಲ್ಲೂ 75 ಕಿ.ಮೀ. ಪಾದಯಾತ್ರೆಯನ್ನು ಕಾಂಗ್ರೆಸ್ ಸಹಕಾರಿ ವಿಭಾಗದಿಂದ ಆಯೋಜಿಸಲಾಗಿದ್ದು, ಅದರಂತೆ ತಾಲೂಕಿನ ಹಾರೊಗೊಳಿಗೆಯಿಂದ ತೀರ್ಥಹಳ್ಳಿಯವರೆಗೆ ಪಾದಯಾತ್ರೆ ನೆಡೆಯಲಿದೆ. ಇದೊಂದು ತೀರ್ಥಹಳ್ಳಿಯಲ್ಲಿ ಐತಿಹಾಸಿಕ ಪಾದಯಾತ್ರೆಯಾಗಲಿದೆ ಎಂದು ಕಾಂಗ್ರೆಸ್ ನಾಯಕ ಆರ್ ಎಂ ಮಂಜುನಾಥ ಗೌಡ ಹೇಳಿದರು.
ಪಟ್ಟಣದ ಬೆಟ್ಟಮಕ್ಕಿಯಲ್ಲಿ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು ಕೆಪಿಸಿಸಿ ಸೂಚನೆಯಂತೆ ಪಾದಯಾತ್ರೆ ನೆಡೆಸಲು ತೀರ್ಮಾನಿಸಿದ್ದೇವೆ. ಕಾಂಗ್ರೆಸ್ ಪಕ್ಷದ ಹಿತ ದೃಷ್ಟಿಗಾಗಿ ಪಾದಯಾತ್ರೆ ಮಾಡೇ ಮಾಡುತ್ತೇವೆ. ವ್ಯಕ್ತಿ ಪೂಜೆಗೆ ನಾನು ಸಿದ್ಧನಿಲ್ಲ ಪಕ್ಷದ ಆಂತರಿಕ ಪೂಜೆಗೆ ನಾನು ಸಿದ್ದ. ಕಾಂಗ್ರೆಸ್ ಕಟ್ಟುವ ನಿಟ್ಟಿನಲ್ಲಿ ಈ ಪಾದಯಾತ್ರೆ ಕೈಗೊಂಡಿದ್ದೇವೆ. ಯಾವ ವ್ಯಕ್ತಿ ನನಗೆ ಗೌರವ ಕೊಡುವುದಿಲ್ಲವೋ ಅವರಿಗೆ ನಾನು ಕೂಡ ಗೌರವ ಕೊಡುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಪಕ್ಷದ ಮುಖಂಡರೆಲ್ಲರಿಗೂ ನಾನು ಪತ್ರ ಬರೆಯಲಿದ್ದೇನೆ. ಕಿಮ್ಮನೆ ರತ್ನಾಕರ್ ಅವರು ಕಾಂಗ್ರೆಸ್ ಪಕ್ಷದ ಹೆಸರು ಹಾಗೂ ಚಿಹ್ನೆ ಬಳಸಿಲ್ಲ ಎಂದಿದ್ದಾರೆ ಆದರೆ ನಾವು ಆ ರೀತಿ ಮಾಡಿಲ್ಲ ಎಂದು ಪತ್ರವನ್ನು ತೋರಿಸಿದರು.
ತೀರ್ಥಹಳ್ಳಿಯ ಸೊ ಕಾಲ್ಡ್ ಮಾಜಿ ಸಚಿವರು ಸೋಮವಾರ ಪತ್ರವೊಂದನ್ನು ಬರೆದಿದ್ದಾರೆ ಆ ರೀತಿ ಪತ್ರ ನನಗೂ ಸಹ ಬರೆಯಲು ಬರುತ್ತದೆ. ಆದರೆ ಆ ರೀತಿ ಮಾಡಿದರೆ ನನಗೂ ಅವರಿಗೂ ವ್ಯತ್ಯಾಸವಿಲ್ಲ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷದ ಪ್ರತಿಯೊಂದು ಕೆಲಸಕ್ಕೂ ನಾನಿದ್ದೇನೆ ಆದರೆ ಟಿಕೆಟ್ ಕೊಡಿ ಎಂದು ಕೇಳಿಲ್ಲ ಆದರೆ ನಾನೊಬ್ಬ ಆಕಾಂಕ್ಷಿ ಹೌದು ಎಂದರು.
ಕೇಂದ್ರ, ರಾಜ್ಯ, ಹಾಗೂ ತಾಲೂಕಿನಲ್ಲಿ ಬಿಜೆಪಿ ಪಕ್ಷವಿದ್ದರೂ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದರೆ ಅದಕ್ಕೆ ಕಾರ್ಯಕರ್ತರು ಕಾರಣ ಅವರಿಗೆ ನೋವಾಗುವ ರೀತಿ ಮಾಡಬಾರದು. ಕಾಂಗ್ರೆಸ್ ಪಕ್ಷದಲ್ಲಿ ನಾನೊಬ್ಬನೇ, 224 ಕ್ಷೇತ್ರದಲ್ಲೂ ನಾನೇ ಎಂದು ಹೇಳುವ ವ್ಯಕ್ತಿ ನಾನಲ್ಲ. ಯಾರು ಏನೇ ಹೇಳಿದರು ನಾನು ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ ಎಂದು ಮತ್ತು ಸೋಮವಾರ ಮಾಜಿ ಸಚಿವರ ನೇತೃತ್ವದಲ್ಲಿ ಪ್ರತಿಭಟನೆ ಹಾಗೂ ಸಭೆ ನೆಡೆದಿದೆ ಆದರೆ ನಮಗೆ ಅದಕ್ಕೆ ಅಹ್ವಾನ ನೀಡಿಲ್ಲ ಎಂದು ಆರ್ ಎಂ ಮಂಜುನಾಥ ಗೌಡ ತಿಳಿಸಿದರು.
ಡಿಕೆಶಿ – ಸಿದ್ದರಾಮಯ್ಯ ನಡುವೆ ನೆಡೆಯುತ್ತಿರುವ ಸಮರದ ಹಾಗೆ ತೀರ್ಥಹಳ್ಳಿಯಲ್ಲೂ ನೆಡೆಯುತ್ತಿದೆಯಾ ಎಂಬ ಪತ್ರಕರ್ತರ ಪ್ರೆಶ್ನೆಗೆ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಹಾಗೆ ಏನಿಲ್ಲ ಅವರಿಬ್ಬರೂ ಹೊಂದಾಣಿಕೆಯಿಂದಲೇ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ನಾನು ಎಂಬ ಅಹಂಕಾರ ಪಕ್ಷದಲ್ಲಿ ಬರಬಾರದು :
ಕಸ್ತೂರಿ ರಂಗನ್ ವರದಿ, ಬಗರ್ ಹುಕುಂ, ಶರಾವತಿ ಹೋರಾಟ ಸೇರಿ ಹಲವು ಹೋರಾಟಗಳಲ್ಲಿ ಪಕ್ಷಾತೀತವಾಗಿ ನಾನು ಹೋರಾಟ ಮಾಡಿದ್ದೇನೆ. ಆದರೆ ನಾನು ಎಲ್ಲಿಯೂ ನಾನು ನಾನು ಎಂದು ಹೇಳಿಕೊಂಡಿಲ್ಲ ಎಂದು ಟಾಂಗ್ ಕೊಟ್ಟರು.
ಈ ಸಂದರ್ಭದಲ್ಲಿ ಡಾ. ಸುಂದರೇಶ್, ಹಾರೊಗೊಳಿಗೆ ಪದ್ಭಾನಾಬ್, ಶಿವಕುಮಾರ್, ವೈ ಎಚ್ ನಾಗರಾಜ್, ಕಡಿದಾಳ್ ತಾರಾನಾಥ್, ಅಮಿರ್ ಹಂಜ, ಬಿ ಆರ್ ಪಿ ರಮೇಶ್, ಶಬನಮ್, ಕೃಷಮೂರ್ತಿ ಭಟ್, ಗೀತಾ ರಮೇಶ್, ಅಸಾದಿ, ಸುಶೀಲ ಶೆಟ್ಟಿ, ದತ್ತಣ್ಣ, ಮಂಜುಳಾ ನಾಗೇಂದ್ರ, ರಾಮ ಶೆಟ್ಟಿ, ರಾಘವೇಂದ್ರ, ಕರಿಮನೆ ಮಧುಕರ್ ಕುರುವಳ್ಳಿ ನಾಗರಾಜ್, ರಫಿ ಬೆಟ್ಟಮಕ್ಕಿ, ಮಂಜುನಾಥ್ ಶೆಟ್ಟಿ, ರಾಘವೇಂದ್ರ ಶೆಟ್ಟಿ, ವಿಕ್ರಂ ಶೆಟ್ಟಿ, ಯಡೂರ್ ಚೇತನ್, ಅಶ್ವತ್ ಗೌಡ ಕೊಂಡ್ಲುರ್, ಸಂದರ್ಶ ಮೇಗರವಳ್ಳಿ, ರಾಮ ಸೇರಿ ಹಲವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.