ಅವಧಿ ಮುಗಿದರೂ ಕಾಮಗಾರಿ ಅಪೂರ್ಣ
ತಗ್ಗು-ದಿನ್ನೆಗಳ ರಸ್ತೆಯಲ್ಲಿ ಸಂಚಾರ ದುಸ್ತರ ;ಈ ಭಾಗ ಮರೆತರೇ ಸಚಿವರು-ಶಾಸಕರು?
Team Udayavani, Jul 26, 2022, 3:41 PM IST
ನವಲಗುಂದ: ಲೋಕೋಪಯೋಗಿ ಇಲಾಖೆ ವತಿಯಿಂದ 2021-22ನೇ ಸಾಲಿನಲ್ಲಿ ತಾಲೂಕಿನಲ್ಲಿ ಕೈಗೊಂಡ ಕಾಮಗಾರಿಗಳು ಅವಧಿ ಮುಗಿದರೂ ಇನ್ನೂ ಪೂರ್ಣಗೊಂಡಿಲ್ಲ.
ಯಮನೂರ ಹಾಳಕುಸುಗಲ್ಲ ರಸ್ತೆ ಸುಧಾರಣೆಗೆ 2 ಕೋಟಿ ರೂ., ರೋಣ ಕ್ರಾಸ್‌ದಿಂದ ದಾಟನಾಳ ಗ್ರಾಮದ ರಸ್ತೆಗೆ 2 ಕೋಟಿ ರೂ., ಹೆಬ್ಟಾಳದಿಂದ ಹಂಚಿನಾಳ ರಸ್ತೆಗೆ 1 ಕೋಟಿ ರೂ. ಸೇರಿ ಒಟ್ಟು 5 ಕೋಟಿ ರೂ. ಗ್ರಾಮೀಣ ಮುಖ್ಯರಸ್ತೆಗಳ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಗ್ರಾಮೀಣ ರಸ್ತೆಗಳಿಗೆ ಕೋಟಿಗಟ್ಟಲೇ ಅನುದಾನ ಬಂದರೂ ಕಾಮಗಾರಿ ಅವಧಿಯೊಳಗೆ ಮುಗಿದಿಲ್ಲ.
ರಸ್ತೆ ಸರಿ ಇದ್ದ ಗ್ರಾಮಗಳಿಗೆ ಬಸ್ ಸಂಚಾರ ಸುಗಮವಾಗಿದ್ದರೆ, ರಸ್ತೆಗಳು ಕೆಟ್ಟಿರುವ ಗ್ರಾಮಗಳಿಗೆ ಬಸ್ ಸಂಚಾರ ವಿರಳವಾಗಿದೆ. ಮಕ್ಕಳು ಶಾಲೆ ಕಲಿಯಲು ಪಟ್ಟಣಕ್ಕೆ ಹೋಗಲು ತೀವ್ರ ತೊಂದರೆಯಾಗಿದೆ. ರೈತರು, ಮಹಿಳೆಯರು, ವೃದ್ಧರಾದಿಯಾಗಿ ಪ್ರಯಾಣಿಸಲು ತೊಂದರೆ ಅನುಭವಿಸುವಂತಾಗಿದೆ.
ಮಳೆ ಇರುವುದರಿಂದ ಕಾಮಗಾರಿ ಆಗಿರುವುದಿಲ್ಲ. ಗುತ್ತಿಗೆದಾರರು ಅವಧಿ ವಿಸ್ತರಣೆ ಪತ್ರ ತೆಗೆದುಕೊಂಡು ಕೆಲಸವನ್ನು ಮುಂದುವರಿಸುತ್ತಾರೆ. –ಎಸ್.ಎನ್.ಸಿದ್ದಾಪುರ, ಎಇಇ, ಲೋಕೋಪಯೋಗಿ ಇಲಾಖೆ
ಯಮನೂರ, ಪಡೇಸೂರ, ಹಾಳಕುಸಗಲ್ಲ ರಸ್ತೆ ಕಾಮಗಾರಿಗೆ ಎಷ್ಟು ಬಾರಿ ಅನುದಾನ ಹಾಕಲಾಗಿದೆ. ಕಾಮಗಾರಿ ಮಾಡಿ ಮುಗಿಸುವುದರೊಳಗೆ ರಸ್ತೆ ಡಾಂಬರ್ ಕಿತ್ತು ಹೋಗಿರುತ್ತದೆ. ಈ ಭಾಗದ ಸಾರ್ವಜನಿಕರು ಮಾತ್ರ ತೊಂದರೆ ಅನುಭವಿಸುತ್ತಿರುವುದು ತಪ್ಪಿಲ್ಲ. –ರಮೇಶ ನವಲಗುಂದ, ಪಡೇಸೂರ ಗ್ರಾಮದ ರೈತ
ನಾಗನೂರ, ಸೊಟಕನಾಳ, ಅರಹಟ್ಟಿ, ಕಡದಳ್ಳಿ, ಕೊಂಗವಾಡ, ತಡಹಾಳ ರಸ್ತೆಗಳಲ್ಲಿ ಮಳೆಗಾಲದಲ್ಲಿ ನಡೆದುಕೊಂಡು ಹೋಗುವುದೇ ದುಸ್ತರವಾಗಿದೆ. ವಾಹನಗಳು ಹೋಗಲು ರಸ್ತೆ ಇಲ್ಲದಂತಾಗಿದೆ. ದೊಡ್ಡ ದೊಡ್ಡ ತಗ್ಗುಗಳಿಂದ ಸಂಚಾರ ದುಸ್ತರವಾಗಿದೆ. ಕ್ಷೇತ್ರದ ಶಾಸಕರು, ಸಚಿವರು ಈ ಭಾಗ ಮರೆತಿದ್ದಾರೆ. –ಮುತ್ತು ಕಿರೇಸೂರ, ಸೊಟಕನಾಳ ಗ್ರಾಮಸ್ಥ
-ಪುಂಡಲೀಕ ಮುಧೋಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.