ಬೆಂಗಳೂರು – ಕಣ್ಣೂರು ರೈಲು ಕಲ್ಲಿಕೋಟೆಗೆ ವಿಸ್ತರಣೆ: ವಿರೋಧ
ಮಂಗಳೂರಿಗೆ ಸರಾಸರಿ 350; ಕಣ್ಣೂರಿಗೆ 50 ಮಂದಿ!
Team Udayavani, Jul 27, 2022, 6:15 AM IST
ಮಂಗಳೂರು: ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ (ನಂ. 16511) ರೈಲನ್ನು ಕಲ್ಲಿಕೋಟೆಗೆ ವಿಸ್ತರಿಸುವ ಪ್ರಸ್ತಾವಕ್ಕೆ ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿ ವಿರೋಧ ವ್ಯಕ್ತಪಡಿಸಿದೆ.
ಇತ್ತೀಚೆಗಿನ ಐಆರ್‌ಟಿಟಿಸಿ ಸಭೆ ಯಲ್ಲಿ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ರೈಲನ್ನು ಕಲ್ಲಿಕೋಟೆಗೆ ವಿಸ್ತ ರಿಸುವ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿ ಸಲಾಗಿದೆ. ಮಂಗಳೂರು ಭಾಗದ ಜನರಿಗೆ ಇದು ಉಪ ಯುಕ್ತ ರೈಲು ಆಗಿದೆ. ಪ್ರಬಲ ಆಗ್ರಹದ ಬಳಿಕ 2007ರಲ್ಲಿ ಬೆಂಗಳೂರು- ಮಂಗಳೂರು ರೈಲು ಆಗಿ ಇದು ಆರಂಭಗೊಂಡಿತ್ತು. ವರ್ಷದ ಬಳಿಕ ವಿರೋಧ ವಿದ್ದರೂ ಕಣ್ಣೂರಿಗೆ ವಿಸ್ತರಿ ಸಲಾಗಿತ್ತು ಎಂದು ಸಮಿತಿ ತಿಳಿಸಿದೆ.
ಗರಿಷ್ಠ ಪ್ರಯಾಣಿಕರು ಮಂಗಳೂರಿಗೆ
ಈ ರೈಲಿನಲ್ಲಿ ಮಂಗಳೂರು ಭಾಗ ದಿಂದ ಬೆಂಗಳೂರು- ಮಂಗಳೂರು ನಡುವೆ ಗರಿಷ್ಠ ಸಂಖ್ಯೆಯ ಜನ ಪ್ರಯಾ ಣಿಸುತ್ತಿದ್ದಾರೆ. ಮಾಹಿತಿ ಹಕ್ಕಿನಡಿ ಪಡೆದುಕೊಂಡ ಮಾಹಿತಿ ಯಂತೆ 2021ರ ಎಪ್ರಿಲ್ ನಿಂದ 2022ರ ಮೇ 15ರ ವರೆಗೆ ದಿನ ವೊಂದಕ್ಕೆ ಬೆಂಗಳೂರು- ಮಂಗಳೂರು ಮಧ್ಯೆ ಸರಾಸರಿ 350 ಮಂದಿ ಪ್ರಯಾಣಿಸಿದ್ದರು. ಅದರೆ ಬೆಂಗಳೂರಿನಿಂದ ಕಣ್ಣೂರಿಗೆ ದಿನವೊಂದಕ್ಕೆ ಪ್ರಯಾಣಿಸಿರುವವರ ಸಂಖ್ಯೆ ಸರಾಸರಿ 50 ಮಂದಿ ಮಾತ್ರ. ಪ್ರಸ್ತುತ ಯಶವಂತಪುರದಿಂದ ಕಣ್ಣೂರಿಗೆ ಪಾಲಕ್ಕಾಡ್ ಮೂಲಕ ನೇರ ರೈಲು (16527/28) ಸಂಚರಿಸುತ್ತಿದೆ ಎಂದು ಸಮಿತಿ ರೈಲ್ವೇ ಮಂಡಳಿಗೆ ಮನವಿ ಸಲ್ಲಿಸಿ ಗಮನ ಸೆಳೆದಿದೆ.
ಬೆಂಗಳೂರು-ಕಣ್ಣೂರು ಎಕ್ಸ್ ಪ್ರಸ್ಸನ್ನು ಕಣ್ಣೂರಿಗೆ ವಿಸ್ತರಿಸುವುದರಿಂದ ಪ್ರಸ್ತುತ ಇರುವ ಟಿಕೆಟ್ ಮುಂಗಡ ಕಾದಿರಿಸುವಿಕೆಯ ಮೇಲೂ ಪರಿಣಾಮ ಬೀರಲಿದ್ದು, ಮಂಗಳೂರು ಭಾಗದ ಜನರಿಗೆ ಲಭ್ಯ ಸೀಟುಗಳ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಲಿದೆ. ಆದ್ದರಿಂದ ಈ ಎಲ್ಲ ಅಂಶಗಳನ್ನು ಪರಿಗಣಿಸಿ ಈ ರೈಲನ್ನು ಕಲ್ಲಿಕೋಟೆಗೆ ವಿಸ್ತರಿಸುವ ಪ್ರಸ್ತಾವವನ್ನು ಕೈಬಿಡಬೇಕು ಎಂದು ಸಮಿತಿ ಆಗ್ರಹಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bunts Hostel, ಕರಂಗಲ್ಪಾಡಿ ಜಂಕ್ಷನ್: ಶಾಶ್ವತ ಡಿವೈಡರ್ ನಿರ್ಮಾಣ ಕಾಮಗಾರಿ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Mudbidri: ರಸ್ತೆಯಲ್ಲೆಲ್ಲ ಹೊಂಡಗಳು ಸಾರ್ ಹೊಂಡಗಳು!
Mangaluru: ಬೇಕು ಇಂದೋರ್ ಮಾದರಿ;ದೇಶದ ನಂ.1 ಸ್ವಚ್ಛ ನಗರ ಇಲ್ಲಿಗೆ ಹೇಗೆ ಅನ್ವಯವಾಗುತ್ತದೆ?
MUST WATCH
ಹೊಸ ಸೇರ್ಪಡೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Bunts Hostel, ಕರಂಗಲ್ಪಾಡಿ ಜಂಕ್ಷನ್: ಶಾಶ್ವತ ಡಿವೈಡರ್ ನಿರ್ಮಾಣ ಕಾಮಗಾರಿ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.