ವಿಳಾಸ ಹುಡುಕಲು ದೇಸಿ ಮ್ಯಾಪ್: ಮ್ಯಾಪ್ ಮೈ ಇಂಡಿಯಾದಿಂದ ಹೊಸ ಸ್ಟ್ರೀಟ್ ವ್ಯೂ
Team Udayavani, Jul 29, 2022, 1:25 PM IST
ಸದ್ಯ ದೇಶದಲ್ಲಿ ನಿಗದಿತ ಸ್ಥಳಕ್ಕೆ ತಲುಪಲು ಗೂಗಲ್ ಮ್ಯಾಪ್ ಅನ್ನು ಬಳಕೆ ಮಾಡಲಾಗುತ್ತಿದೆ. ಅದಕ್ಕೆ ಪ್ರತಿಸ್ಪರ್ಧಿಯಾಗಿ ಮ್ಯಾಪ್ ಮೈ ಇಂಡಿಯಾ ಹೊಸ ಸೇವೆ ಆರಂಭ ಮಾಡಿದೆ. ಮ್ಯಾಪಲ್ಸ್ ರಿಯಲ್ ವ್ಯೂ ಎಂಬ ಹೆಸರಿನ ಈ ವ್ಯವಸ್ಥೆ ನಿಗದಿತ ರಸ್ತೆಯ 360 ಡಿಗ್ರಿ ವೀಕ್ಷಣೆ ವ್ಯವಸ್ಥೆ ಒದಗಿಸುತ್ತದೆ. ಗೂಗಲ್ ಮ್ಯಾಪ್‌ನ ಸ್ಟ್ರೀಟ್ ವ್ಯೂ ಕೂಡ ಹೊಸ ರೀತಿಯಲ್ಲಿ ಲಭಿಸುತ್ತಿದೆ.
ಯಾವ ಸಂಸ್ಥೆ ಇದು?
ಮ್ಯಾಪ್‌ಮೈ ಇಂಡಿಯಾ ಎನ್ನುವುದು 1995ರಲ್ಲಿ ಸ್ಥಾಪನೆಯಾಗಿರುವ ಸಂಸ್ಥೆ ಇದು. ರಾಕೇಶ್ ವರ್ಮಾ ಮತ್ತು ರಶ್ಮಿ ವರ್ಮಾ ಅದನ್ನು ಆರಂಭಿಸಿದ್ದರು. ಅದು ನಿಗದ ರಸ್ತೆ ಅಥವಾ ಸ್ಥಳದ 360 ಡಿಗ್ರಿ ವೀಕ್ಷಣೆ ಮಾಡಲು ಸಾಧ್ಯವಾಗುವಂಥ ಹೊಸ ವ್ಯವಸ್ಥೆ ಅಭಿವೃದ್ಧಿಪಡಿಸಿದೆ ಮತ್ತು ಬುಧವಾರದಿಂದಲೇ ಅದು ಲಭ್ಯವಾಗಿದೆ. ಅದರ ಹೆಗ್ಗಳಿಕೆ ಏನೆಂದರೆ 3ಡಿ ಮೆಟಾವರ್ಸ್ ವ್ಯವಸ್ಥೆಯಲ್ಲಿಯೂ ಕೂಡ ಲಭ್ಯವಾಗಲಿದೆ.
ಜನಪ್ರಿಯ ಸ್ಥಳಗಳು
ಸ್ಥಳೀಯವಾಗಿ ಜನಪ್ರಿಯವಾಗಿರುವ ಸ್ಥಳಗಳು, ವಿಳಾಸಗಳನ್ನು ಪತ್ತೆ ಹಚ್ಚಲು ಇದು ನೆರವಾಗಲಿದೆ. ಕಂಪನಿಯ ಸಿಇಒ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ರೋಹನ್ ವರ್ಮಾ ಹೇಳಿಕೊಂಡ ಪ್ರಕಾರ ಸ್ಥಳೀಯ ನಗರಗಳು, ರಸ್ತೆಗಳು, ವಿಳಾಸ ಪತ್ತೆ ಹಚ್ಚಲು ವಿದೇಶಿ ಮ್ಯಾಪ್ ಸೇವಾದಾರರ ಬದಲು ದೇಶಿಯ ತಂತ್ರಜ್ಞಾನದಿಂದ ಕೂಡಿದ ವ್ಯವಸ್ಥೆ ಬಳಕೆ ಮಾಡಬೇಕು ಎಂದಿದ್ದಾರೆ.
ಇಸ್ರೋ ತಂತ್ರಜ್ಞಾನ
ಮ್ಯಾಪಲ್ಸ್ ರಿಯಲ್ ವ್ಯೂ ನೀಡಿದ ಹೇಳಿಕೆ ಪ್ರಕಾರ ಇಸ್ರೋದ ಉಪಗ್ರಹ ಚಿಕ್ರ ಮತ್ತು ಭೂಪರಿವೀಕ್ಷಣೆ ಮಾಹಿತಿ ಆಧಾರದಲ್ಲಿ 2ಡಿ ಮ್ಯಾಪ್ ಸೇವೆ ನೀಡಲಾಗುತ್ತದೆ. ಮ್ಯಾಪಲ್ಸ್ ಆ್ಯಪ್ ಅನ್ನು ಆ್ಯಂಡ್ರಾಯ್ಡ ಅಥವಾ ಐಒಎಸ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬೇಕು. 2017ರಲ್ಲೇ ಈ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಲಾಗಿತ್ತು ಎಂದು ಕಂಪನಿ ಹೇಳಿಕೊಂಡಿದೆ.
ಮಾಹಿತಿ ವಿನಿಮಯಕ್ಕೆ ಅವಕಾಶ
ರಸ್ತೆಗಳು ಮತ್ತು ವಿಳಾಸಗಳ ಬಗ್ಗೆ ಮ್ಯಾಪ್‌ನಲ್ಲಿ ಮಾಹಿತಿ ವಿನಿಯಮಕ್ಕೆ ಅವಕಾಶ ಇದೆ. ಕಾಂಪ್ಲೆಕ್ಸ್‌ಗಳು, ಬೀಚ್‌ಗಳು, ಪ್ರಮುಖ ಕೇಂದ್ರಗಳು, ವಸತಿ ಪ್ರದೇಶಗಳನ್ನು ಅದರಲ್ಲಿ ಸೇರ್ಪಡೆಗೊಳಿಸಲಾಗಿದೆ.
ಎಲ್ಲಿ ಉಪಯೋಗ?
ಪ್ರವಾಸೋದ್ಯಮ, ರಿಯಲ್ ಎಸ್ಟೇಟ್, ಗೇಮಿಂಗ್, ರಕ್ಷಣೆ, ಕಾನೂನು ಮತ್ತು ಸುವ್ಯವಸ್ಥೆ ಜಾರಿ ವ್ಯವಸ್ಥೆ, ವರ್ಚುವಲ್ ರಿಯಾಲಿಟಿ
ಬೆಂಗಳೂರಿಗೂ ಬರಲಿದೆ
ಮೊದಲ ಹಂತದಲ್ಲಿ ಬೆಂಗಳೂರು ಸೇರಿದಂತೆ ದೇಶದ 14 ನಗರಗಳಲ್ಲಿ ಇದು ಜಾರಿಯಾಗಲಿದೆ. ಅಹ್ಮದಾಬಾದ್, ಅಜ್ಮೀರ್, ಚಂಡೀಗಡ, ಚೆನ್ನೈ, ದೆಹಲಿ ಎನ್‌ಸಿಆರ್, ಗೋವಾ, ಗ್ರೇಟರ್ ಮುಂಬೈ, ಹೈದರಾಬಾದ್, ಜೈಪುರ್, ಜೋಧ್‌ಪುರ್, ನಾಶಿಕ್, ಪುಣೆಗಳಲ್ಲಿ ಈ ತಂತ್ರಜ್ಞಾನ ಜನಬಳಕೆಗೆ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.