ಯುವ ನ್ಯಾಯವಾದಿಗಳು ಕಠಿಣ ಪರಿಶ್ರಮ ಪಡಬೇಕು: ನ್ಯಾಯಮೂರ್ತಿ ಸಚೀನ ಮಗದುಮ್ಮ
Team Udayavani, Jul 30, 2022, 7:49 PM IST
ಚಿಕ್ಕೋಡಿ: ಕಠಿಣ ಪರಿಶ್ರಮದೊಂದಿಗೆ ಹಿರಿಯ ನ್ಯಾಯವಾದಿಗಳ ಸಹಕಾರ ಮತ್ತು ಮಾರ್ಗದರ್ಶನ ಇಂದಿನ ಯುವ ನ್ಯಾಯವಾದಿಗಳ ಬೆಳವಣಿಗೆ ಸಾಧಿಸಲು ಸಾಧ್ಯವಾಗುತ್ತದೆ. ಹಿರಿಯ ನ್ಯಾಯವಾದಿಗಳ ಸಹಕಾರದಿಂದಲೇ ನಾನು ಉನ್ನತ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಬೆಂಗಳೂರು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸಚೀನ ಮಗದುಮ್ಮ ಹೇಳಿದರು.
ಇಲ್ಲಿನ ನ್ಯಾಯವಾದಿಗಳ ಸಂಘ ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ವಕೀಲ ವೃತ್ತಿಯಲ್ಲಿ ಕಲಿಕೆ ಎನ್ನುವುದು ನಿರಂತರವಾಗಿರಬೇಕು. ಎಷ್ಟೇ ಬೆಳವಣಿಗೆ ಕಂಡರೂ ಸಹ ಹೊಸ ಹೊಸ ವಿಚಾರಗಳನ್ನು ಕಲಿಯಬೇಕು ಎನ್ನುವ ಮನೋಭಾವ ಯುವ ನ್ಯಾಯವಾದಿಗಳಿಗೆ ಬರಬೇಕು ಎಂದರು.
ನಾನು ಚಿಕ್ಕೋಡಿ ನಗರದಲ್ಲಿ ಹುಟ್ಟಿ ಬೆಳೆದು ಚಿಕ್ಕೋಡಿ ನ್ಯಾಯಾಲಯದಲ್ಲಿ ಎರಡು ವರ್ಷ ವಕೀಲ ವೃತ್ತಿ ಆರಂಭಿಸಿ ಈಗ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾದರೂ ಚಿಕ್ಕೋಡಿ ನ್ಯಾಯಾಲಯದಲ್ಲಿ ವೃತ್ತಿ ಆರಂಭಿಸಿರುವ ಅನುಭವ ಮರೆಯಲು ಸಾಧ್ಯವಾಗುದಿಲ್ಲ. ಚಿಕ್ಕೋಡಿ ಹಿರಿಯ ನ್ಯಾಯವಾದಿಗಳು ಕೊಡುವ ಗೌರವ ಅಪಾರವಾಗಿದೆ. ಗ್ರಂಥಾಲಯದಲ್ಲಿ ಇರುವ ಹೊಸ ಹೊಸ ಪುಸ್ತಕಗಳನ್ನು ಓದಲಿಕ್ಕೆ ಹುರುದುಂಬಿಸಿರುವ ನೆನಪು ಸದಾ ಇರುತ್ತದೆ ಎಂದರು.
ಸಂವಿಧಾನ ಬರೆದ ಡಾ, ಬಿ.ಆರ್.ಅಂಬೇಡ್ಕರ ವಾದ ಮಂಡಿಸಿರುವ ಚಿಕ್ಕೋಡಿ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಆರಂಭಿಸಿರುವ ನ್ಯಾಯವಾದಿಗಳು ಪುಣ್ಯ ಮಾಡಿದ್ದಾರೆ ಎಂದ ಅವರು, ಹುಟ್ಟೂರಲ್ಲಿ ಎಲ್ಲರೂ ಪ್ರೀತಿಯಿಂದ ಸತ್ಕಾರ ಮಾಡಿರುವುದು ನನಗೆ ಖುಷಿ ತರಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ನಾಗೇಶ ಕಿವಡ ಮಾತನಾಡಿ, ಚಿಕ್ಕೋಡಿ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಆರಂಭಿಸಿದ ನ್ಯಾಯಮೂರ್ತಿ ಸಚೀನ ಅವರು ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿರುವುದು ಚಿಕ್ಕೋಡಿ ಭಾಗದ ಜನರಿಗೆ ಖುಷಿ ತರಿಸಿದೆ. ಸಚೀನ ಮಗದುಮ್ಮ ಅವರ ಸಹಕಾರ ಮತ್ತು ಮಾರ್ಗದರ್ಶನ ಚಿಕ್ಕೋಡಿ ನ್ಯಾಯವಾದಿಗಳ ಸಂಘದ ಮೇಲಿರಲಿ ಎಂದರು.
ಚರಮೂರ್ತಿಮಠದ ಸಂಪಾದನ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.
ವೇದಿಕೆ ಮೇಲೆ ಏಳನೆ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ಎಲ್.ಚವ್ಹಾಣ, ನ್ಯಾಯಾದೀಶಾದ ಟಿ.ಶ್ರೀಕಾಂತ, ಚಿದಾನಂದ ಬಡಿಗೇರ, ಅಶೋಕ ಆರ್.ಎಚ್, ನಾಗೇಶ ಪಾಟೀಲ, ಸರ್ಕಾರಿ ವಕೀಲ ಆರ್.ಐ.ಖೋತ, ನ್ಯಾಯವಾದಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಎಲ್.ವ್ಹಿ.ಬೋರನ್ನವರ, ಉಪಾಧ್ಯಕ್ಷ ಬಿ.ಪಿ.ದೇಶಿಂಗೆ, ಬಿ.ಎನ್.ಪಾಟೀಲ, ಬಿ.ಆರ್.ಯಾದವ, ರವಿ ಹುದ್ದಾರ, ಎಸ್.ಟಿ.ಮುನ್ನೋಳ್ಳಿ, ಪ್ರಕಾಶ ಅನ್ವೇಕರ, ಎಸ್.ಪಿ.ಉತ್ತೂರೆ, ಆರ್,ಎನ್,ಬಾಕಳೆ, ಎಚ್.ಎಸ್.ನಸಲಾಪೂರೆ ಮುಂತಾದವರು ಇದ್ದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯರು ಕಲ್ಮೇಶ ಕಿವಡ ಸ್ವಾಗತಿಸಿದರು. ಸತೀಶ ಕುಲಕರ್ಣಿ ನಿರೂಪಿಸಿದರು. ಮಹೇಶ ಮಠಪತಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.