ತೀವ್ರತರಹದ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ


Team Udayavani, Jul 31, 2022, 12:55 PM IST

4

ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಜೂನ್‌ ನಿಂದ ಅಕ್ಟೋಬರ್‌ ವರೆಗೆ ಮಳೆಯಾಗುವುದರಿಂದ ಭಾರೀ ಮಳೆ ಬಂದಾಗ ಮಳೆ ನೀರು ಮಲಿನಗೊಂಡಿರುವ ನೀರಿನೊಂದಿಗೆ ಸೇರಿ ಆ ನೀರು ಕುಡಿಯುವ ನೀರಿಗೆ ಸೇರಿ ಕಲುಷಿತಗೊಂಡು ಕರುಳುಬೇನೆ, ಅತಿಸಾರ ಭೇದಿ, ಆಮಶಂಕೆ, ಟೈಫಾಯ್ಡ, ಕಾಮಾಲೆಗಳಂತಹ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿರುತ್ತವೆ. ಪ್ರಕೃತಿ ವಿಕೋಪದಂತಹ ನೈಸರ್ಗಿಕ ಬದಲಾವಣೆಯನ್ನು ಹೊರತುಪಡಿಸಿ, ಹೆಚ್ಚಿನ ಸಂದರ್ಭಗಳಲ್ಲಿ ಮಾನವನ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ಶುದ್ಧ ನೀರು ಕಲುಷಿತಗೊಂಡು ಕಾಯಿಲೆಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಡಿ ಸಾವುಗಳುಂಟಾಗುತ್ತವೆ. ಈ ಸಮಯದಲ್ಲಿ ಅತಿಸಾರ (diarrhoea) ರೋಗವು ಮಕ್ಕಳಲ್ಲಿ ಕಂಡುಬರುವ ಪ್ರಮುಖ ಕಾಯಿಲೆಯಾಗಿದೆ. ಅತಿಸಾರ ರೋಗದಿಂದ ದೇಶದಲ್ಲಿ ಪ್ರತೀ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳು ಸಾಯುತ್ತಿರುವ ಬಗ್ಗೆ ವರದಿಗಳು ಇವೆ.

ಅತಿಸಾರ ಕಾಯಿಲೆಗೆ ಸರಳ ಪರಿಣಾಮಕಾರಿ ಚಿಕಿತ್ಸೆ ಲಭ್ಯತೆಯ ಹೊರತಾಗಿಯೂ ಸಾವುಗಳು ಉಂಟಾಗುವುದನ್ನು ತಡೆಗಟ್ಟಲು ಪ್ರತೀ ವರ್ಷ ಜುಲೈ-ಆಗಸ್ಟ್‌ ತಿಂಗಳಿನಲ್ಲಿ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ (IDCF) ಆಚರಿಸಲಾಗುತ್ತದೆ. ಈ ಹದಿನೈದು ದಿನಗಳಲ್ಲಿ ಆರೋಗ್ಯ ಕಾರ್ಯಕರ್ತರು, ಶಿಕ್ಷಕರು ಆಶಾ ಕಾರ್ಯಕರ್ತರುಗಳಿಗೆ ರೋಗ ನಿಯಂತ್ರಣದ ಬಗ್ಗೆ ಮಾಹಿತಿ ಹಾಗೂ ರೋಗ ನಿಯಂತ್ರಣಕ್ಕೆ ಆರೋಗ್ಯ ವ್ಯವಸ್ಥೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗುವುದು.

ಈ ವರ್ಷ ಅಗಸ್ಟ್‌ ತಿಂಗಳ ಒಂದನೇ ತಾರಿಕಿನಿಂದ ಹದಿನೈದು ತಾರೀಕಿನವರೆಗೆ ಭೇದಿ ನಿಯಂತ್ರಣ ಪಾಕ್ಷಿಕವನ್ನು ಆಚರಿಸಲಾಗುತ್ತದೆ.

ಕುಡಿಯುವ ನೀರು ಶುದ್ಧೀಕರಣ ಕುಡಿಯುವ ನೀರನ್ನು ಸಾಮಾನ್ಯವಾಗಿ ಕ್ಲೋರಿನ್‌ ಮಾತ್ರೆಗಳು, ಕ್ಲೋರಿನ್‌ ಗ್ಯಾಸ್‌, ಕ್ಲೋರಿನ್‌ ದ್ರಾವಣ ಅಥವಾ ಬ್ಲೀಚಿಂಗ್‌ ಪೌಡರ್‌ ಹಾಕುವುದರ ಮೂಲಕ ನೀರಿನಲ್ಲಿರುವ ಸಾಮಾನ್ಯವಾದ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಾಶ ಮಾಡಿ ಕುಡಿಯಲು ಯೋಗ್ಯ ಮಾಡಬಹುದು.

ಬಾವಿಗೆ ಕ್ಲೋರಿನೇಶನ್‌ ವಿಧಾನ ಉತ್ತಮ ಶ್ರೇಣಿಯ ಬ್ಲೀಚಿಂಗ್‌ ಪೌಡರ್‌ ನಲ್ಲಿ ಸುಮಾರು ಶೇ. 33 ಕ್ಲೋರಿನ್‌ ಇರುತ್ತದೆ. ಸಾಮಾನ್ಯವಾಗಿ 1,000 ಲೀ. ನೀರಿಗೆ 2.5ಗ್ರಾಂ.ನಷ್ಟು ಉತ್ತಮ ಶ್ರೇಣಿಯ ಬ್ಲೀಚಿಂಗ್‌ ಪೌಡರ್‌ ಬೇಕಾಗುತ್ತದೆ. ವೃತ್ತಾಕಾರದ ಬಾವಿಯಲ್ಲಿರುವ ನೀರಿನ ಪ್ರಮಾಣವನ್ನು ಕೆಳಗಿನ ಸೂತ್ರದಿಂದ ಕಂಡು ಹಿಡಿಯಬಹುದು.

3.14 x d2 x h x 1000* 4

ಹಾಗೆಯೇ ವೃತ್ತಾಕಾರವಾಗಿರುವ ಬಾವಿಯ ನೀರಿಗೆ ಅಗತ್ಯವಾಗುವ ಬ್ಲೀಚಿಂಗ್‌ ಪೌಡರ್‌ನ್ನು ಈ ಸೂತ್ರದಿಂದ ಪಡೆಯಬಹುದು.

9.4 x d2 x H* 4

D = ಸುತ್ತಳತೆ, H = ನೀರಿನ ಆಳ ಉದಾಹರಣೆಗೆ 2 ಮೀಟರ್‌ ಸುತ್ತಳತೆಯಿರುವ ಬಾವಿಯಲ್ಲಿ 6 ಮೀಟರ್‌ನಷ್ಟು ನೀರಿದ್ದರೆ ಬೇಕಾಗುವ ಬ್ಲೀಚಿಂಗ್‌ ಪುಡಿ.

9.4 x 2 x 2 x 6= 56.4 ಗ್ರಾಮ್‌ಗಳು* 4

ನೀರನ್ನು ಶುದ್ಧೀಕರಿಸಲು ಅಗತ್ಯವಾಗುವಷ್ಟು, ಬ್ಲೀಚಿಂಗ್‌ ಪೌಡರನ್ನು 1 ಬಕೆಟ್‌ನಲ್ಲಿ (100 ಗ್ರಾಮ್‌ಗೆ ಮೀರದಂತೆ) ಹಾಕಿ ತೆಳುವಾದ ಪೇಸ್ಟ್‌ ಆಗುವಂತೆ ನೀರಿನಲ್ಲಿ ಕಲಸಬೇಕು. ಅನಂತರ ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಮುಕ್ಕಾಲು ಬಕೆಟ್‌ ತುಂಬ ನೀರು ತುಂಬಬೇಕು. ಈ ಮಿಶ್ರಣವನ್ನು ಚೆನ್ನಾಗಿ ಕಲುಕಿ. ಸುಣ್ಣದ ಕಣಗಳು ತಳದಲ್ಲಿ ತಂಗುವಂತೆ 5ರಿಂದ 10 ನಿಮಿಷ ಬಿಡಬೇಕು. ಅನಂತರ ಮೇಲೆ ನಿಂತ ತಿಳಿಯಾದ ಕ್ಲೋರಿನ್‌ಯುಕ್ತ ದ್ರಾವಣವನ್ನು ಬೇರೆ ಬಕೆಟ್‌ಗೆ ರವಾನಿಸಿ, ತಳದಲ್ಲಿರುವ ಸುಣ್ಣದ ಹರಳುಗಳನ್ನು ಚೆಲ್ಲಬೇಕು. ಅನಂತರ ಕ್ಲೋರಿನ್‌ಯುಕ್ತ ದ್ರಾವಣವಿರುವ ಬಕೆಟ್‌ ನೀರನ್ನು ಶುದ್ಧೀಕರಣ ಮಾಡಬೇಕಿದ್ದ ಬಾವಿ ನೀರಿಗೆ ಸೇರುವಂತೆ ಮಾಡಬೇಕು. ಹೀಗೆ ಕ್ಲೋರಿನೇಶನ್‌ ಮಾಡಿದ 60 ನಿಮಿಷಗಳ ಅನಂತರ ನೀರನ್ನು ಬಳಸಬಹುದು. ಸರಿಯಾದ ಕ್ರಮದಲ್ಲಿ ಸರಿಯಾದ ಪ್ರಮಾಣದಲ್ಲಿ ಬ್ಲೀಚಿಂಗ್‌ ಪೌಡರ್‌ ಹಾಕಿ ಕ್ಲೋರಿನೇಶನ್‌ ಮಾಡುವುದರಿಂದ ನೀರಿನಲ್ಲಿರಬಹುದಾದ ಹೆಚ್ಚಿನ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಿದ್ದರೂ ಈ ಕ್ರಿಯೆ ಕೆಲವು ವೈರಸ್‌ಗಳನ್ನು, ಕೆಲವು ರೋಗಕಾರಕ ಕಣಗಳ (spores) ಮೇಲೆಹೆಚ್ಚು ಪರಿಣಾಮಕಾರಿಯಲ್ಲ. ಆದ್ದರಿಂದ ನೀರನ್ನು ಕ್ಲೋರಿನೇಶನ್‌ ಅನಂತರವೂ 10ರಿಂದ 20 ನಿಮಿಷ ಕುದಿಸಿ ಆರಿಸಿ ಕುಡಿದರೆ ಉತ್ತಮ.

ನದಿ, ಡ್ಯಾಮ್‌ಗಳ ಮೂಲದಿಂದ ಸಾರ್ವಜನಿಕರಿಗೆ ನೀರು ಸರಬರಾಜು ವ್ಯವಸ್ಥೆಯ ನೀರಿನ ವೈಜ್ಞಾನಿಕವಾಗಿ ಶುದ್ಧೀಕರಣ, ಪದೇ ಪದೆ ನೀರಿನ ಗುಣಮಟ್ಟ ಪರೀಕ್ಷೆ, ಸಾಗಾಟ ಪೈಪ್‌ಲೈನ್‌ ವ್ಯವಸ್ಥೆಗಳ ಸುರಕ್ಷತೆಯನ್ನು ಅಧಿಕಾರಿಗಳು ಹೆಚ್ಚು ಒತ್ತು ನೀಡಿ ಪದೇ ಪದೇ ಪರಿಶೀಲನೆಗೆ ಒಳಪಡಿಸುವುದು ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಅತೀ ಅಗತ್ಯವಾಗಿದೆ.

ಒ.ಆರ್‌.ಎಸ್‌. ದ್ರಾವಣ ತಯಾರಿ ಮೊದಲು ಕೈಗಳನ್ನು ಚೆನ್ನಾಗಿ ತೊಳೆದು ಶುದ್ಧ ಪಾತ್ರೆಯಲ್ಲಿ 1 ಲೀ. ಶುದ್ಧ ಕುಡಿಯುವ ನೀರನ್ನು (ಕುದಿಸಿ ಆರಿಸಿದ ನೀರು) ತೆಗೆದು ಕೊಂಡು ಒಂದು ಒ.ಆರ್‌.ಎಸ್‌ ಪ್ಯಾಕೆಟ್‌ನ ಎಲ್ಲ ಪೌಡರನ್ನು ಆ ನೀರಿನಲ್ಲಿ ಬೆರೆಸಿ ನೀರನ್ನು ಸ್ವಚ್ಛ ಚಮಚದಿಂದ ಕಲಕಿ ಪಾತ್ರೆಯನ್ನು ಮುಚ್ಚಿಡಿ. ಈ ರೀತಿ ತಯಾರಿಸಿದ ಒ.ಆರ್‌. ಎಸ್‌. ದ್ರಾವಣವನ್ನು ಮಕ್ಕಳಿಗೆ ಪದೇ ಪದೆ ನೀಡಿ. – 2 ತಿಂಗಳವರೆಗೆ – 5 ಚಮಚ ದ್ರಾವಣ. 2 ತಿಂಗಳಿಂದ – 2 ವರ್ಷಗಳವರೆಗೆ – 1/4 – 1/2 ಕಪ್‌ ದ್ರಾವಣ 2 ವರ್ಷಕ್ಕೆ ಮೇಲ್ಪಟ್ಟ ಮಕ್ಕಳಿಗೆ -1/2 – 1 ಕಪ್‌. ಮಗುವು ತಿಳಿಯಾದ, ಸಾಕಷ್ಟು ಪ್ರಮಾಣದಲ್ಲಿ ಮೂತ್ರ ಮಾಡುವವರೆಗೂ ಒ.ಆರ್‌. ಎಸ್‌ ದ್ರಾವಣ ನೀಡಿ. ಹೆಚ್ಚು ಕುಡಿಯುವ ಮಗುವಿಗೆ ಹೆಚ್ಚು ಕುಡಿಸಬೇಕು. ಮಗು ನಿಶ್ಶಕ್ತವಾಗಿದ್ದರೆ ಚಮಚದಿಂದ ಕುಡಿಸಬೇಕು. ಇದರ ಜತೆಗೆ ಗಂಜಿ, ಮಜ್ಜಿಗೆ, ಎಳನೀರು, ಶುದ್ಧ ಕುಡಿಯುವ ನೀರು ಸಹ ಕೊಡಬೇಕು. 24 ಗಂಟೆಗಳ ಬಳಿಕವೂ ಮಗುವಿಗೆ ಒ.ಆರ್‌. ಎಸ್‌. ನೀಡಬೇಕಾಗಿದ್ದರೆ, ಹೊಸದಾಗಿ ತಯಾರಿಸಿ ಕೊಡಬೇಕು. ಒ.ಆರ್‌.ಎಸ್‌. ದ್ರಾವಣ ಒಮ್ಮೆ ತಯಾರು ಮಾಡಿದರೆ 24 ಗಂಟೆಗಳ ಅನಂತರ ಬಳಸಬಾರದು. ಎದೆ ಹಾಲನ್ನು ಮುಂದುವರಿಸುತ್ತ, ಪೂರಕವಾಗಿ ದ್ರವ ಪದಾರ್ಥಗಳನ್ನು ಸಹ ನೀಡಬೇಕು. ಮನೆಯ, ಪರಿಸರದ ನೈರ್ಮಲ್ಯವನ್ನು ಶುಚಿಯಾಗಿಟ್ಟುಕೊಳ್ಳಿ, ಮಲ ಮೂತ್ರ ವಿಸರ್ಜನೆಗೆ ಶೌಚಾಲಯಗಳನ್ನೇ ಉಪಯೋಗಿಸಬೇಕು. ಅತಿಸಾರ ಬೇಧಿಯಿಂದ ಚೇತರಿಸಿಕೊಂಡ ಮಕ್ಕಳಿಗೆ ದಿನಾ ನೀಡುವ ಅಹಾರಕ್ಕಿಂತ ಕಾಲು ಭಾಗ ಹೆಚ್ಚುವರಿಯಾಗಿ ನೀಡಬೇಕು.

ನೀರಿನ ಮಾಲಿನ್ಯವನ್ನು ತಡೆಗಟ್ಟುವ ವಿಧಾನಗಳು

„ ನೀರನ್ನು ಯಾವಾಗಲೂ ಕುದಿಸಿ ಆರಿಸಿ ಕುಡಿಯುವುದು.

„ ಕುಡಿಯುವ ನೀರಿನ ಮೂಲದಿಂದ ಕನಿಷ್ಠ 60 ಅಡಿ ಅಂತರದಲ್ಲಿ ಯಾವುದೇ ತ್ಯಾಜ್ಯ ನೀರು, ತ್ಯಾಜ್ಯ ವಸ್ತು, ಲ್ಯಾಟ್ರಿನ್‌ ಪಿಟ್‌ ಇರದಂತೆ ಮಾಡಿಕೊಳ್ಳುವುದು.

„ ಸಾರ್ವಜನಿಕರು ಕುಡಿಯುವ ನೀರಿನ ಮೂಲಗಳನ್ನು ಕಾಲ ಕಾಲಕ್ಕೆ ಪರೀಕ್ಷಿಸಿ ಕ್ಲೋರಿನ್‌/ ಬ್ಲೀಚಿಂಗ್‌ ಪೌಡರ್‌ ಹಾಕುವುದು.

„ ಕುಡಿಯುವ ನೀರಿನ ಬಾವಿಗೆ, ಬ್ಯಾಂಕ್‌ಗಳಿಗೆ ಕಸಕಡ್ಡಿ, ಪ್ರಾಣಿಪಕ್ಷಿಗಳ ತ್ಯಾಜ್ಯ ಗಳು ಬೀಳದಂತೆ ನೋಡಿಕೊಳ್ಳುವುದು.

„ ಕುಡಿಯುವ ನೀರಿನ ಮೂಲಗಳಲ್ಲಿ ದನ, ಕರುಗಳ ಸ್ನಾನ, ಮಲ ಮೂತ್ರ ವಿಸರ್ಜನೆ, ಸ್ನಾನ, ವಾಹನ ಸ್ವಚ್ಛಗೊಳಿಸುವುದು ಬಹಿಷ್ಕರಿಸಬೇಕು.

ಕುಡಿಯುವ ನೀರು ಸಾಮಾನ್ಯವಾಗಿ ಕಲುಷಿತಗೊಳ್ಳುವ ವಿಧಾನಗಳೆಂದರೆ :

„ ಕಲುಷಿತ ನೀರು ಕುಡಿಯುವ ನೀರಿನ ಮೂಲದಲ್ಲಿ ಸಂಗ್ರಹವಾಗಿ ಕುಡಿಯುವ ನೀರಿನೊಂದಿಗೆ ಸೇರುವುದರಿಂದ.

„ ಮನೆಯ ಲ್ಯಾಟ್ರಿನ್‌ ಪಿಟ್‌ ಕುಡಿಯುವ ನೀರಿನ ಬಾವಿ ಅಥವಾ ಇತರ ಮೂಲಗಳ ಅತೀ ಸಮೀಪದಲ್ಲಿರುವುದು.

„ ಕುಡಿಯುವ ನೀರಿನ ಮೂಲದ ಹತ್ತಿರ ತ್ಯಾಜ್ಯ ವಸ್ತುಗಳನ್ನು ಸಂಗ್ರಹಣೆ ಮಾಡುವುದರಿಂದ.

„ ನೀರು ಸರಬರಾಜು ಪೈಪುಗಳ ಜೋಡಣೆ ಕೆಟ್ಟು ಹೋಗಿ / ಒಡೆದು ಹೋಗಿ ಸುತ್ತಲಿನ ಕಲುಷಿತ ನೀರು ಪೈಪುಗಳಲ್ಲಿ ಸೇರಿಕೊಂಡಾಗ.

„ ಕುಡಿಯುವ ನೀರಿನ ಮೂಲಗಳಲ್ಲಿ ಬಟ್ಟೆ ಒಗೆಯುವುದು, ಮಲ ವಿಸರ್ಜನೆ ಮಾಡುವುದು, ಸ್ನಾನ ಮಾಡುವುದು, ಪ್ರಾಣಿಗಳನ್ನು, ವಾಹನಗಳನ್ನು ತೊಳೆಯುವುದು.

„ ಕೊಳವೆ ಬಾವಿಯ ಸುತ್ತಲೂ ಒಂದು ಮೀಟರ್‌ ಒಳಗೆ ನೀರು ನಿಂತು ಕಲುಷಿತಗೊಂಡಾಗ

„ ಮಲಿನಗೊಂಡ ಪಾತ್ರೆಗಳಲ್ಲಿ ನೀರನ್ನು ಸಂಗ್ರಹಿಸಿದರೆ, ಕಲುಷಿತ ಕೈಯಿಂದ ನೀರನ್ನು ಮುಟ್ಟಿದಾಗ

„ ನಗರ ಪ್ರದೇಶಗಳಲ್ಲಿ ಡ್ಯಾಮ್‌ಗಳಿಂದ, ನದಿಗಳಿಂದ ನೀರನ್ನು ಸಾರ್ವಜನಿಕರಿಗೆ ಸರಬರಾಜು ಮಾಡುವ ಮೊದಲು ನೀರು ಶುದ್ಧೀಕರಣ ಕ್ರಮಗಳನ್ನು ವೈಜ್ಞಾನಿಕವಾಗಿ ಮಾಡದೇ ಇದ್ದಾಗ.

ಈ ಯಾವುದೇ ರೀತಿಯಲ್ಲಿ ಕುಡಿಯುವ ನೀರು ಕಲುಷಿತಗೊಂಡಾಗ, ಅಂತಹ ನೀರನ್ನು ನೇರವಾಗಿ ಬಳಕೆ ಮಾಡಿದಾಗ ನೀರಿನಿಂದ ಹರಡುವ ಕಾಯಿಲೆಗಳು (ಕರುಳುಬೇನೆ, ಅತಿಸಾರ ಭೇದಿ, ಆಮಶಂಕೆ, ಟೈಫಾಯ್ಡ ಮತ್ತು ಪ್ಯಾರಾಟೈಫಾಯ್ಡ, ಕಾಮಾಲೆ, ಹೊಟ್ಟೆ ಹುಳುಗಳು ಜನಸಮುದಾಯದಲ್ಲಿ ಕಾಣಿಸಿಕೊಳ್ಳಬಹುದು.

ಮಕ್ಕಳಲ್ಲಿ ಅತಿಸಾರ ಭೇದಿ ಉಂಟಾದಾಗ ಮನೆಮಟ್ಟದಲ್ಲಿ ನೀಡಬೇಕಾದ ಚಿಕಿತ್ಸೆ: ಮೊದಲಿಗೆ ಹೆಚ್ಚಿನ ದ್ರವ ಪದಾರ್ಥ (ಗಂಜಿ, ಮಜ್ಜಿಗೆ, ಎಳನೀರು) ನೀಡಿ. ಪ್ರತೀ ಸಾರಿ ಭೇದಿ ಆದ ಅನಂತರ ಅಂತಹ ದ್ರಾವಣ / ಒ.ಆರ್‌.ಎಸ್‌. 2 ವರ್ಷಗಳವರೆಗಿನ ಮಕ್ಕಳಿಗೆ 50-100 ಎಂ.ಎಲ್‌ (1/4 – 1/2 ಕಪ್‌ ದ್ರಾವಣ) 2 ವರ್ಷ ಅಥವಾ ಹೆಚ್ಚು ವಯಸ್ಸಾದ ಮಗುವಿಗೆ 100-200 ಎಂಎಲ್‌ (1/2 – 1 ಕಪ್‌ ದ್ರಾವಣ) ಮಗು 6 ತಿಂಗಳಿಗಿಂತ ಕಡಿಮೆಯಿದ್ದರೆ, ಅಂತಹ ದ್ರಾವಣ /ಒ.ಆರ್‌.ಎಸ್‌ ಮತ್ತು ಶುದ್ಧ ನೀರನ್ನು ತಾಯಿ ಹಾಲು ಉಣಿಸುವುದರೊಂದಿಗೆ ಕೊಡಬೇಕು. ಮಗು 6 ತಿಂಗಳಿಗಿಂತ ಹೆಚ್ಚಿನದಾಗಿದ್ದರೆ, ತಾಯಿ ಹಾಲಿನ ಜತೆಗೆ ಓ.ಆರ್‌.ಎಸ್‌. ಹಾಗೂ ಮಜ್ಜಿಗೆ, ನಿಂಬೆರಸ, ಅನ್ನ ಅಥವಾ ಬೇಳೆ ಆಧಾರಿತ ದ್ರವ, ತರಕಾರಿ ರಸ, ಎಳನೀರು ಅಥವಾ ಶುದ್ಧ ಕುಡಿಯುವ ನೀರು ಇವುಗಳನ್ನು ನೀಡಬಹುದು. ಮಗುವಿಗೆ ಕೇವಲ ಎದೆ ಹಾಲನ್ನು ಮಾತ್ರ ನೀಡುತ್ತಿದ್ದರೆ ಪದೇ ಪದೇ ಮತ್ತು ಹೆಚ್ಚಿನ ಸಮಯದವರೆಗೆ ಹಾಲುಣಿಸಲು ತಾಯಿಗೆ ತಿಳಿಸಬೇಕು. ಲೋಟದಿಂದ ಪದೇ ಪದೇ ಸಣ್ಣ ಪ್ರಮಾಣದಲ್ಲಿ ಕುಡಿಸಬೇಕು. ಮಗುವಿಗೆ ವಾಂತಿಯಾದರೆ 10 ನಿಮಿಷ ತಡೆದು ಅನಂತರ ನಿಧಾನವಾಗಿ ಗುಟುಕು ಗುಟುಕಾಗಿ ಕುಡಿಸುವುದನ್ನು ಮುಂದುವರೆಸಬೇಕು. ಭೇದಿ ನಿಲ್ಲುವ ತನಕ ಹೆಚ್ಚು ದ್ರವ ಪದಾರ್ಥಗಳನ್ನು ಕೊಡುವುದನ್ನು ಮುಂದುವರೆಸಬೇಕು. ಸ್ವಲ್ಪ ನಿರ್ಜಲೀಕರಣ ಇದ್ದಾಗ, ತೀವ್ರತರ ನಿರ್ಜಲೀಕರಣ (dehydration)ಇದ್ದಾಗ ವೈದ್ಯರ ಸಲಹೆಯಂತೆ ಒ.ಆರ್‌.ಎಸ್‌ ದ್ರವ ಚಿಕಿತ್ಸೆ ನೀಡಬೇಕಾಗುತ್ತದೆ.

-ಡಾ| ಸಂಜಯ್‌ ಕಿಣಿ, ಸಹಾಯಕ ಪ್ರಾಧ್ಯಾಪಕರು,

-ಡಾ| ಅಶ್ವಿ‌ನಿ ಕುಮಾರ, ಗೋಪಾಡಿ ಪ್ರೊಫೆಸರ್‌ ಮತ್ತು ಮುಖ್ಯಸ್ಥರು,

ಕಮ್ಯನಿಟಿ ಮೆಡಿಸಿನ್‌ ವಿಭಾಗ,

ಕೆಎಂಸಿ ಮಣಿಪಾಲ

ಟಾಪ್ ನ್ಯೂಸ್

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

1-gopal

Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Mental health: ತಾಯಂದಿರ ಮಾನಸಿಕ ಆರೋಗ್ಯ

1

Dentistry: ನಿಮ್ಮ ಆತ್ಮವಿಶ್ವಾಸದ ನಗುಮುಖಕ್ಕೆ ಡೆಂಟಲ್‌ ಇಂಪ್ಲಾಂಟ್‌

7

fasting- ಆತ್ಮದ ಶಕ್ತಿ; ಆಧುನಿಕ ಪ್ರಾಚೀನ ಹಾಗೂ ಪರಿಕಲ್ಪನೆಯ ಸಂಯೋಗ

4

Health: ಮೊಣಕಾಲಿನ ಅಸ್ಥಿಸಂಧಿವಾತ; ಸಾಮಾನ್ಯ ಸಮಸ್ಯೆಯನ್ನು ಮಾಡಿಕೊಳ್ಳುವುದು

1

Tobacco Cessation Centre: ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ತಂಬಾಕು ವರ್ಜನ ಕೇಂದ್ರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-wqqwewq

Australia ಗೆಲುವಿಗೆ ಕಮಿನ್ಸ್‌  ನೆರವು: ಪಾಕಿಸ್ಥಾನ 203; ಆಸೀಸ್‌  8 ವಿಕೆಟಿಗೆ 204

crime

Trasi: ಕಾರು ಢಿಕ್ಕಿಯಾಗಿ ಗಾಯ; ಪ್ರಕರಣ ದಾಖಲು

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.