ಮೋದಿ ಆರ್ಥಿಕತೆ ನಿರ್ವಹಣೆಯನ್ನು ಟೀಕಾಕಾರರೂ ಒಪ್ಪಿಕೊಂಡಿದ್ದಾರೆ : ಬಿಜೆಪಿ
ವಿದೇಶಿ ಸಾಲ ಕೂಡ ತುಲನಾತ್ಮಕವಾಗಿ ಕಡಿಮೆಯಾಗಿದೆ: ಸೈಯದ್ ಜಾಫರ್ ಇಸ್ಲಾಂ
Team Udayavani, Jul 31, 2022, 3:22 PM IST
ನವದೆಹಲಿ: ”ಆರ್ಥಿಕತೆಯನ್ನು ನಿಭಾಯಿಸಲು ನರೇಂದ್ರ ಮೋದಿ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಸರಿಯಾಗಿವೆ, ಟೀಕಾಕಾರರೂ ಸಹ ಅದನ್ನು ಒಪ್ಪಿಕೊಂಡಿದ್ದಾರೆ’ ಎಂದು ಬಿಜೆಪಿ ಭಾನುವಾರ ಹೇಳಿದೆ.
ಬಿಜೆಪಿ ವಕ್ತಾರ ಸೈಯದ್ ಜಾಫರ್ ಇಸ್ಲಾಂ, ”ಸರ್ಕಾರದ ವಿಮರ್ಶಕರು ಕೂಡ ಅದರ ನೀತಿಗಳಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ” ಎಂದರು.
ಶ್ರೀಲಂಕಾ ಮತ್ತು ಪಾಕಿಸ್ತಾನಕ್ಕೆ ಬಂದಂತಹ ಸಮಸ್ಯೆಗಳನ್ನು ಭಾರತ ಎದುರಿಸುತ್ತಿಲ್ಲ ಎಂದು ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ ಒಂದು ದಿನದ ನಂತರ ಸೈಯದ್ ಅವರು ಈ ಹೇಳಿಕೆ ನೀಡಿದ್ದು, ”ಭಾರತ ಸಾಕಷ್ಟು ಫಾರೆಕ್ಸ್ ಮೀಸಲು ಹೊಂದಿದೆ ಮತ್ತು ಅದರ ವಿದೇಶಿ ಸಾಲ ಕೂಡ ತುಲನಾತ್ಮಕವಾಗಿ ಕಡಿಮೆಯಾಗಿದೆ” ಎಂದರು.
”ಪ್ರಪಂಚವು ಹಣದುಬ್ಬರ ಮತ್ತು ಇತರ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವಾಗ ಭಾರತದ ಆರ್ಥಿಕತೆಯು ಟ್ರ್ಯಾಕ್ನಲ್ಲಿದೆ ವೇಗದಲ್ಲಿ ಸಾಗುತ್ತಿದೆ ಎಂದು ಜಗತ್ತು ಒಪ್ಪಿಕೊಂಡಿದೆ. ಭಾರತದ ಆರ್ಥಿಕತೆಯು ಪ್ರಬಲವಾಗಿದೆ. ನಮ್ಮನ್ನು ಟೀಕಿಸುವವರೂ ಅದನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ” ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.