ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿ: ಬಿಇಒ ಅಕ್ಕಿ
Team Udayavani, Jul 31, 2022, 5:30 PM IST
ಬೀದರ: ಕೋವಿಡ್‌ನಿಂದ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಕೊರತೆ ಕಂಡುಬಂದಿದೆ. ಔಪ ಚಾರಿಕ ಶಿಕ್ಷಣದಲ್ಲಿ ಉಂಟಾಗಿರುವ ಅಡೆತಡೆ ನಿವಾರಿಸುವ ಸಲುವಾಗಿ ಶಿಕ್ಷಣ ಇಲಾಖೆ ವಿದ್ಯಾಪ್ರವೇಶ, ಕಲಿಕಾ ಚೇತರಿಕೆ ಉಪಕ್ರಮ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ. ಇವುಗಳ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಶ್ರಮಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸಂತಬಾಯಿ ಅಕ್ಕಿ ಹೇಳಿದರು.
ಕೋಳಾರ (ಕೆ) ವಲಯದ ಗುರುಬಸವ ಪ್ರಾಥಮಿಕ-ಪ್ರೌಢ ಶಾಲೆಯಲ್ಲಿ ಆಯೋಜಿ ಸಿದ್ದ ಶೈಕ್ಷಣಿಕ ಚಿಂತನ-ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಇಲಾಖೆ ಕಾರ್ಯ ಯೋಜನೆಗಳು ಫಲಪ್ರದವಾ ಗಬೇಕಾದರೆ ಶಿಕ್ಷಕರ ಯೋಗದಾನ ಮುಖ್ಯ. ಶಿಕ್ಷಣ ಇಲಾಖೆ ಹಮ್ಮಿಕೊಳ್ಳುವ ಶೈಕ್ಷಣಿಕ ಚಿಂತನ- ಮಂಥನಗಳಿಂದ ಜ್ಞಾನವೃದ್ಧಿಯಾಗುವುದು ಎಂದರು.
ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾ ಧಿಕಾರಿ ಡಾ| ವಿಜಯಕುಮಾರ ಬೆಳಮಗಿ ಮಾತನಾಡಿ, ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ಕರೆತಂದು ಅವರಿಗೆಲ್ಲ ಗುಣಾತ್ಮಕ ಶಿಕ್ಷಣ ನೀಡುವುದು, ಕಲಿಕಾ ಹಾಳೆ ಬಳಸಿಕೊಂಡು ನಿರ್ದಿಷ್ಟ ಸಾಮರ್ಥ್ಯ ಪಡೆಯುವಂತೆ ನೋಡಿಕೊಳ್ಳುವುದು ಅವಶ್ಯ. ಈ ದಿಶೆಯಲ್ಲಿ ಅಧಿಕಾರಿಗಳು, ಶಿಕ್ಷಕರು, ಸಮಾಜದ ಭಾಗಿದಾರರು ಕೈಜೋಡಿ ಸಬೇಕು. ಸರ್ಕಾರದ ವಿವಿಧ ಯೋಜನೆ ಶಾಲಾ ಹಂತದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿ ಸಬೇಕು ಎಂದರು.
ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜು ಸಾಗರ, ಸಿದ್ರಾಮ ಹಿಂದೊಡ್ಡಿ, ಸುಮತಿ ರುದ್ರ, ಸೈಬಣ್ಣ ನಾಲವಾರ ಶೈಕ್ಷಣಿಕ ಚಿಂತನೆ ಹಂಚಿಕೊಂಡರು. ಈ ವೇಳೆ ಪ್ರಮುಖರಾದ ದತ್ತು ಸ್ವಾಮಿ, ಡೇವಿಡ್, ಮಂಜುನಾಥ ಬಿರಾದಾರ, ತಾನಾಜಿ ಕಾರಬಾರಿ, ಸೈಬಣ್ಣ ನಾಲವಾರ, ಗೌತಮ ವರ್ಮಾ, ನಿರ್ಮಲಾ ಚಂದನಹಳ್ಳಿ, ರೇಣುಕಾದೇವಿ, ಗೀತಾ, ನಿರ್ಮಲಾ ಬೆಲ್ದಾರ, ಸುನಂದಾ ಪಾಟೀಲ, ಅರ್ಜುನ ವರ್ಮಾ, ಚಂದ್ರಕಲಾ ಬೊರೆ, ರೋಹಿತ ಮೈಂದೆ, ದೀಲಿತ ಸಾವಳೆ, ಹಣಮಂತ ಮಂದಕನಳ್ಳಿ, ಸೋಮನಾಥ, ಶಶಿಕಲಾ ಇದ್ದರು. ನಿರ್ಗಮಿತ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸುನೀಲಕುಮಾರ ಗಾಯಕವಾಡ ಅವರನ್ನು ಬೀಳ್ಕೊಡಲಾಯಿತು. ಡಾ| ರಘುನಾಥ ಪ್ರಾಸ್ತಾವಿಕ ಮಾತನಾಡಿ ದರು. ರವಿ ಶಂಭು ಅಧ್ಯಕ್ಷತೆ ವಹಿಸಿದ್ದರು. ನಾಗಶೆಟ್ಟಿ ಗಾದಗಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.