ಸಿದ್ದಾಪುರ: ಅಭಿವೃದ್ಧಿ ಕಾಣದ ಸೋಣಿ ರಸ್ತೆ
ಅನಾರೋಗ್ಯಕ್ಕೀಡಾದರೆ ಆಸ್ಪತ್ರೆಗೆ ಹೊತ್ತುಕೊಂಡೇ ಸಾಗಬೇಕಾದ ಪರಿಸ್ಥಿತಿ
Team Udayavani, Aug 1, 2022, 12:51 PM IST
ಸಿದ್ದಾಪುರ: ಸಿದ್ದಾಪುರ ಗ್ರಾ.ಪಂ.ಗೆ ಸಾಕಷ್ಟು ಆದಾಯಗಳು ಇದ್ದರೂ ಅದನ್ನು ಸರಿಯಾಗಿ ಬಳಕೆ ಮಾಡದೆ, ಆಡಳಿತ ಒಂದಲ್ಲೊಂದು ಕಾರ ಣಕ್ಕೆ ಸುದ್ದಿಯಾಗುತ್ತಿದೆ. ಗ್ರಾಮದಲ್ಲಿ ಅಭಿವೃದ್ಧಿಗಳು ಮರೀಚಿಕೆಯಾಗುತ್ತಿವೆ. ಗ್ರಾಮದ ಒಳಹೊಕ್ಕರೆ ಜನರ ಬದುಕಿನ ನೈಜ ಸ್ಥಿತಿ ಏನೆಂದು ತಿಳಿಯುತ್ತದೆ. ರಸ್ತೆಗಳೇ ಇಲ್ಲದೆ ಸೋಣಿ ಎಂಬ ಪ್ರದೇಶದಲ್ಲಿ ಅನಾರೋಗ್ಯಕ್ಕೀಡಾದರೆ ಅವರನ್ನು ಆಸ್ಪತ್ರೆಗೆ ಹೊತ್ತುಕೊಂಡೇ ಸಾಗಬೇಕಾದ ಪರಿಸ್ಥಿತಿಯಲ್ಲಿದೆ.
ಅರ್ಧಂಬರ್ಧ, ಕಳಪೆ ಕಾಮಗಾರಿಗಳು, ಆಡಳಿತದ ಅವ್ಯವಸ್ಥೆಗೆ ಹಿಡಿದ ಕೈಕನ್ನಡಿಯಾಗಿವೆ. ಉದಾಹಣೆಯಾಗಿ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಸೋಣಿ ಭಾಗದ ಜನರು ನಾಗರಿಕ ಸೌಲಭ್ಯಗಳಿಂದ ವಂಚಿತರಾಗಿ ನರಕ ಸದೃಶ ಬದುಕು ಸಾಗಿಸುತ್ತಿದ್ದಾರೆ.
ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಸೋಣಿ ಎಂಬ ಪ್ರದೇಶವು ಕಾಡು ಪ್ರದೇಶಗಳನ್ನು ಒಳಗೊಂಡ ಪ್ರದೇಶವಾಗಿದೆ. ಇಲ್ಲಿ ಹೆಚ್ಚು ಪರಿ ಶಿಷ್ಟ ಜಾತಿಯ ಜನರು ವಾಸವಾಗಿದ್ದಾರೆ. ಇಲ್ಲಿಯ ರಸ್ತೆಗಳು ಮಳೆ ನೀರಿಗೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ಪಂಚಾಯತ್ ಇದರ ಬಗ್ಗೆ ಗಮನ ಹರಿಸದ ಪರಿಣಾಮ ಸಾರ್ವಜನಿಕರು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಪರದಾಡುವಂತಾಗಿದೆ.
ಮನವಿಗೆ ಸ್ಪಂದನೆ ಇಲ್ಲ
ರೋಗಿಗಳನ್ನು ಮತ್ತು ಹಿರಿಯ ನಾಗರಿಕರನ್ನು ಕರೆದೊಯ್ಯಲು ರಸ್ತೆಗಳೇ ಇಲ್ಲ. ಚುನಾವಣೆ ಹತ್ತಿರವಾದಾಗ ಪ್ರತ್ಯಕ್ಷರಾಗುವ ಜನಪ್ರತಿನಿಧಿಗಳು ಗೆದ್ದ ಅನಂತರ ಇಲ್ಲಿಯ ಜನರ ಸಮಸ್ಯೆ ಆಲಿಸಲು ಬರುವುದೇ ಇಲ್ಲ. ಹಲವು ಬಾರಿ ಸ್ಥಳೀಯಾಡಳಿತದಿಂದ ಶಾಸಕರ ತನಕ ಮನವಿ ನೀಡಿದ್ದರಾದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಪಂ. ಅನುದಾನ ಸಾಲಲ್ಲ: ಮಳೆ ಹೆಚ್ಚಾಗಿರುದರಿಂದ ರಸ್ತೆ ಹಾಳಾಗಿದೆ. ಪಂಚಾಯತ್ ಅನುದಾನ ರಸ್ತೆ ಅಭಿವೃದ್ಧಿಗೆ ಸಾಕಾಗುವುದಿಲ್ಲ. ಈ ಭಾಗದಲ್ಲಿ 26ಕ್ಕೂ ಹೆಚ್ಚು ಎಸ್‌ಟಿ ಜನಾಂಗದ ಮನೆಗಳಿವೆ. ಅನುದಾನ ಬಿಡುಗಡೆಯಾಗಿಲ್ಲ. –ಗೋಪಾಲ ಶೆಟ್ಟಿ ಕ್ವಾಡ್ಗಿ ಸದಸ್ಯರು, ಗ್ರಾ.ಪಂ. ಸಿದ್ದಾಪುರ
-ಸತೀಶ ಆಚಾರ್ ಉಳ್ಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Today World Fisheries Day: ಸಮಸ್ಯೆ ಗೂಡಾಗಿರುವ ಕರಾವಳಿಯ ಪ್ರಮುಖ ಆರ್ಥಿಕತೆ
Road Mishap: ಇನ್ನೋವಾ ಕಾರಿಗೆ ಇನ್ಸುಲೇಟರ್ ಲಾರಿ ಢಿಕ್ಕಿ; ನಾಲ್ವರು ಗಂಭೀರ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.