ನರೇಗಾ ಯೋಜನೆ: ಚಕ್ಕೋತ, ನೀಲಿ ದ್ರಾಕ್ಷಿ ಬೆಳೆಯಲು ನೆರವು


Team Udayavani, Aug 1, 2022, 4:37 PM IST

ನರೇಗಾ ಯೋಜನೆ: ಚಕ್ಕೋತ, ನೀಲಿ ದ್ರಾಕ್ಷಿ ಬೆಳೆಯಲು ನೆರವು

ದೇವನಹಳ್ಳಿ: ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಒಂದಾದ ದೇವನಹಳ್ಳಿ ಚಕ್ಕೋತ, ಬೆಂಗಳೂರು ನೀಲಿದ್ರಾಕ್ಷಿ ಬೆಳೆ  ಯುವವರಿಗೆ ನರೇಗಾ ಯೋಜನೆಯಡಿ ಸೌಲಭ್ಯ ನೀಡಿ ಉತ್ತೇಜಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಬಯಲುಸೀಮೆಯ ಪ್ರದೇಶವಾಗಿದ್ದು, ಯಾವುದೇ ನದಿ ಪ್ರದೇಶ, ನಾಲೆಗಳು ಇಲ್ಲದಿದ್ದರೂ ಇರುವ ಅಲ್ಪ ಸ್ವಲ್ಪದ ಬೋರ್‌ ವೆಲ್‌ ನೀರಿನಲ್ಲಿಯೇ ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ದೇವನಹಳ್ಳಿ ತಾಲೂಕಿನಲ್ಲಂತೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭಗೊಂಡ ನಂತರ, ಕೃಷಿ ಜಮೀನಿನಲ್ಲಿ ಬಡಾವಣೆಗಳ ನಿರ್ಮಾಣ, ಕೆಐಎಡಿಬಿ ಇತರೆ ಉದ್ದೇಶಗಳಿಗೆ ಭೂಸ್ವಾಧೀನ ಪ್ರಕ್ರಿಯೆಗಳು ಆಗುತ್ತಿರುವುದರಿಂದ ಕೃಷಿ, ತೋಟಗಾರಿಕೆ ಚಟುವಟಿಕೆಗಳು ಕ್ರಮೇಣ ಕಡಿಮೆಯಾಗುತ್ತಿದೆ. ಬೆಂಗಳೂರುಇತರೆ ಕಡೆಗಳಿಗೆ ಹೂವು, ತರಕಾರಿ, ಹಣ್ಣು ಹಂಪಲುಪೂರೈಸಲಾಗುತ್ತಿತ್ತು. ಅದೆಲ್ಲವೂ ಕಡಿಮೆ ಆಗುತ್ತ ಬಂದಿದೆ.

ದೇವನಹಳ್ಳಿ ಚಕ್ಕೋತ ಪ್ರಸಿದ್ಧ: ಬೆಂಗಳೂರು, ಇತರೆ ಜಿಲ್ಲೆಗಳಿಂದ ಬರುವ ಜನರು, ವಿದೇಶಕ್ಕೆ ಹೋಗುವವರು ದೇವನಹಳ್ಳಿ ಚಕ್ಕೋತವನ್ನು ಹುಡುಕಿ ತೆಗೆದುಕೊಂಡು ಹೋಗುತ್ತಾರೆ. ರೊಟಾಸಿಯಾ ಸಸ್ಯ ಪ್ರಭೇ ದಕ್ಕೆ ಸೇರಿದ ನಿಂಬೆ ಜಾತಿಯ ಚಕ್ಕೋತ, ದೇವನ ಹಳ್ಳಿಯಲ್ಲಿ ಅತೀ ಹೆಚ್ಚು ಬೆಳೆಯ ಲಾಗುತ್ತಿದೆ.

ಅರ್ಧ ಎಕರೆಯಲ್ಲಿ ಚಕ್ಕೋತ ಬೆಳೆ ಸಿರಿ:

ಇದಕ್ಕೆ ನರೇಗಾದಡಿಕೂಲಿ ವೆಚ್ಚ23,466 ರೂ., ಸಾಮಗ್ರಿ ವೆಚ್ಚ 8,345 ರೂ. ನೀಡ ಲಾಗುತ್ತಿದೆ. 76 ಮಾನವ ದಿನಗಳನ್ನು ಸೃಜಿಸಲಾಗುತ್ತಿದೆ. ಮನೆಗಳ ಹಿತ್ತಲಿನಲ್ಲಿ 5-6 ಗಿಡ ಬೆಳೆಯಲಾಗುತ್ತಿದ್ದು, ಅಳಿವಿನ ಅಂಚಿನಲ್ಲಿರುವಚಕ್ಕೋತವನ್ನು ಉಳಿಸಲು ತೋಟಗಳಲ್ಲಿ ಬೆಳೆಯಬೇಕಾದರೆ ನರೇಗಾ ಮೂಲಕ ಕೂಲಿ, ಸಾಮಗ್ರಿ ವೆಚ್ಚವನ್ನು ನೀಡಲಾಗುತ್ತಿದೆ. ನರೇಗಾದಿಂದ ನೆರವು ನೀಡಬೇಕೆಂದರೆ ಕನಿಷ್ಠ ಅರ್ಧ ಎಕರೆಯಲ್ಲಿ ಚಕ್ಕೋತ ಗಿಡಗಳನ್ನು ಬೆಳೆಸಬೇಕಿದೆ.

ಬೆಳೆ ಉತ್ತೇಜಿಸುವ ಉದ್ದೇಶ: ಜಿಲ್ಲೆಯ ಪ್ರಮುಖ ಬೆಳೆಗಳಾದ ಬೆಂಗಳೂರು ನೀಲಿದ್ರಾಕ್ಷಿ, ದೇವನಹಳ್ಳಿ ಚಕ್ಕೋತ ಬೆಳೆಯುವವರಿಗೆ ನರೇಗಾ ಯೋಜನೆಯಡಿ ಸೌಲಭ್ಯ ನೀಡಿ ಉತ್ತೇಜಿಸಲು ಇಲಾಖೆ ಮುಂದಾಗಿದೆ.

ನರೇಗಾ ಯೋಜನೆ ಈಗಾಗಲೇ ರೈತರಿಗೆ ವರದಾನವಾಗಿದೆ. ಜಿಲ್ಲೆಯ ಹಲವು ರೈತರು ಈ ಯೋಜನೆಯಡಿ ನಾನಾ ತೋಟಗಾರಿಕೆ ಬೆಳೆ ಬೆಳೆದು ಲಾಭಗಳಿಸುತ್ತಿದ್ದಾರೆ. ಅದರಂತೆ ಈ ನೆಲದ ವಿಶಿಷ್ಟ ಬೆಳೆಗಳಿಗೂ ಅದನ್ನುವಿಸ್ತರಿಸಿದರೆ ತಳಿ ಸಂರಕ್ಷಣೆ ಜತೆಗೆ ಅದರ ಉತ್ಪನ್ನ ಇನ್ನಷ್ಟು ವೃದ್ಧಿಸಿ ಎಲ್ಲೆಡೆ ದೊರೆಯುವಂತೆ ಮಾಡುವ ಉದ್ದೇಶ ಇದರಲ್ಲಿ ಇದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಟ್ಯಾಗ್‌ ಹೊಂದಿರುವ ದ್ರಾಕ್ಷಿ ನೇರವಾಗಿ ತಿನ್ನಲು, ಜಾಮ್‌ ತಯಾರಿಸಲು ಬಳಸಲಾಗುತ್ತಿದೆ. ಜಿಲ್ಲೆಯಲ್ಲಿ ಸಾವಿರಹೆಕ್ಟೆರ್‌ನಲ್ಲಿ ನೀಲಿ ದ್ರಾಕ್ಷಿ ಬೆಳೆಯುತ್ತಿದ್ದು, ನರೇಗಾದಲ್ಲಿ 1ಎಕರೆಗೆ ಕೂಲಿವೆಚ್ಚ, ಸಾಮಗ್ರಿ ವೆಚ್ಚ ಸೇರಿ 1,12,280ರೂ. ನೀಡಿ, 237 ಮಾನವ ದಿನಗಳಿಗೂ ಅವಕಾಶ ನೀಡಲಿದೆ.

ಮಾರುಕಟ್ಟೆ ಅವಶ್ಯಕ: ಬೆಂಗಳೂರು ನೀಲಿದ್ರಾಕ್ಷಿಗೆ ಇದ್ದಷ್ಟು ಚಕ್ಕೋತಾಗೆ ಮಾರುಕಟ್ಟೆ ಲಭ್ಯವಾಗದಿರುವುದು, ಉಪ ಉತ್ಪನ್ನಗಳಿಗೆ ಹೆಚ್ಚು ಗಮನ ಹರಿಸದೆ ಇರುವುದು ಬೆಳೆ ವಿಸ್ತರಣೆಯಾಗದಿರಲು ಕಾರಣವಾಗಿದೆ. ತೋಟಗಳಲ್ಲಿ ಬೆಳೆದರೆ ಮಾರುಕಟ್ಟೆ ಸಮಸ್ಯೆ ಉಂಟಾಗಬಹುದೆಂಬ ಆತಂಕ ರೈತರಲ್ಲಿ ಮನೆ ಮಾಡಿದೆ.

ಬೆಂಗಳೂರು ಸುತ್ತಮುತ್ತಲಿನ ಭೌಗೋಳಿಕ ಬೆಳೆ  (ಜಿಯಾಗ್ರಾಫಿಕಲ್‌ ಇಂಡಿಕೇಶನ್‌)ಗಳಿಗೆ ಉತ್ತೇಜನ ನೀಡುವ ಸಲುವಾಗಿ ತೋಟಗಾರಿಕಾ ಇಲಾಖೆಯಿಂದ ನರೇಗಾ ಯೋಜನೆಯಡಿ ಸಹಾಯಧನ ನೀಡಲಾಗುತ್ತಿದೆ. ಆ ಮೂಲಕ ಜಿಐ ಉತ್ಪನ್ನಗಳನ್ನು ಮತ್ತಷ್ಟು ಮಾರುಕಟ್ಟೆಗೆ ತರಲು ಯೋಚಿಸಲಾಗುತ್ತಿದೆ. ತಾಲೂಕಿನಲ್ಲಿ ಅತಿ  ಹೆಚ್ಚು ದ್ರಾಕ್ಷಿ ಬೆಳೆಯುವವರಿದ್ದು, ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ದ್ರಾಕ್ಷಿ ರಸ ತಯಾರಿಕಾ ಘಟಕ ಪ್ರಾರಂಭವಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ತೋಟಗಾರಿಕೆ ಇಲಾಖೆಯಿಂದ ಜಿಐ ಹೊಂದಿರುವ ಚಕ್ಕೋತ ಮತ್ತು ಬೆಂಗಳೂರು ನೀಲಿದ್ರಾಕ್ಷಿ ಬೆಳೆಯಲುನರೇಗಾ ಯೋಜನೆಯಲ್ಲಿ ಕೂಲಿವೆಚ್ಚ,ಸಾಮಗ್ರಿವೆಚ್ಚ ನೀಡಲಾಗುತ್ತಿದೆ. ಜಿಲ್ಲೆಯರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು.ಗುಣವಂತ, ತೋಟಗಾರಿಕಾ ಜಿಲ್ಲಾ ಉಪನಿರ್ದೇಶಕ

ಟಾಪ್ ನ್ಯೂಸ್

Surya—jagadmbika-Pal-(JPC)

Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ

3-udupi

Udupi: ವಕ್ಫ್ ಬೋರ್ಡ್ ಭೂ ಕಬಳಿಕೆ  ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ

Session:ನ.25- ಡಿ.20- ಸಂಸತ್‌ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?

Session:ನ.25- ಡಿ.20- ಸಂಸತ್‌ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?

County Championship: Umpires objected to Shakib Hasan’s bowling style

County Championship: ಶಕಿಬ್‌ ಹಸನ್‌ ಬೌಲಿಂಗ್‌ ಶೈಲಿ ಬಗ್ಗೆ ಅಂಪೈರ್‌ ಗಳ ಆಕ್ಷೇಪ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

13

Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ ʼಕಂಗುವʼ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

9-bng

Channapatna: ಸಾಲಕ್ಕೆ ಹೆದರಿ ದಂಪತಿ ನೇಣಿಗೆ ಶರಣು

7

Arrested: ಪಾಕ್‌ ಪ್ರಜೆಗಳಿಗೆ ಸಹಕಾರ; ಪೊಲೀಸರಿಂದ ಕಿಂಗ್‌ಪಿನ್‌ ಸೆರೆ

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Surya—jagadmbika-Pal-(JPC)

Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ

3-udupi

Udupi: ವಕ್ಫ್ ಬೋರ್ಡ್ ಭೂ ಕಬಳಿಕೆ  ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ

Session:ನ.25- ಡಿ.20- ಸಂಸತ್‌ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?

Session:ನ.25- ಡಿ.20- ಸಂಸತ್‌ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?

13

Malpe ಫಿಶರೀಸ್‌ ಕಾಲೇಜು: ದುರ್ವಾಸನೆಯಲ್ಲೇ ಪಾಠ

12

Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.