ಸೌಲಭ್ಯವಿಲ್ಲದೇ ಸೊರಗಿದ ಕ್ರೀಡಾಂಗಣ
Team Udayavani, Aug 1, 2022, 6:18 PM IST
ಮದ್ದೂರು: ಪಟ್ಟಣದ ಹೃದಯ ಭಾಗದಲ್ಲಿರುವ ತಾಲೂಕು ಕ್ರೀಡಾಂಗಣ ಸೌಲಭ್ಯವಿಲ್ಲದೇ ಸೊರಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಒಳಪಡುವ ತಾಲೂಕು ಕ್ರೀಡಾಂಗಣ ಮಳೆಗಾಲದಲ್ಲಿ ಕೆರೆಯಂತಾಗುತ್ತಿದೆ.
ಕ್ರೀಡಾಪಟುಗಳು ಸೇರಿದಂತೆ ಬೆಳಗ್ಗೆ ಮತ್ತು ಸಂಜೆವಾಯು ವಿಹಾರಕ್ಕೆಂದು ಆಗಮಿಸುವ ನೂರಾರು ಜನರಿಗೆ ತೊಡಕ್ಕುಂಟಾಗಿದ್ದು ಇದುವರೆವಿಗೂ ಸಂಬಂಧಿಸಿದ ಅಧಿಕಾರಿಗಳು ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿಲ್ಲ.
ಆಧುನೀಕರಣವಿಲ್ಲ: ಇತ್ತೀಚಿನ ವರ್ಷಗಳಲ್ಲಿ ಆಧುನೀಕರಣ ಸೇರಿದಂತೆ ಇತರೆ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಗ್ರಾಮೀಣ ಕ್ರೀಡಾಪಟುಗಳು ಹಾಗೂ ಸ್ಥಳೀಯ ಪ್ರತಿಭೆಗಳ ಉತ್ತೇಜಿಸಲು ತಾಲೂಕು ಕೇಂದ್ರಗಳಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಕ್ರೀಡಾಂಗಣಗಳುಅಭಿವೃದ್ಧಿಗೆ ಚುನಾಯಿತ ಪ್ರತಿನಿಧಿಗಳು ಕಂಡೂ ಕಾಣದಂತಿದ್ದಾರೆ. ಇನ್ನು ಜಿಲ್ಲಾಡಳಿತ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೂ ಕಾರಣವಾಗಿದೆ.
ನಿರ್ವಹಣೆ ಮಾಡಿಲ್ಲ: ಕುಡಿಯುವ ನೀರು, ಶೌಚಾಲಯ, ವಿದ್ಯುತ್ ವ್ಯವಸ್ಥೆ, ವಾಹನನಿಲ್ದಾಣ, ವಿಶ್ರಾಂತಿ ಕೊಠಡಿ, ಆಸನದ ವ್ಯವಸ್ಥೆಸೇರಿ ಇತರೆ ಇಲ್ಲಗಳ ದೊಡ್ಡ ಪಟ್ಟಿಯೇ ಇಲ್ಲಿದ್ದುನಿರ್ವಹಣೆಯಂತೂ ಹೇಳ ತೀರದಾಗಿದೆ.
ಸಂಕಷ್ಟ: ರಾಷ್ಟ್ರೀಯ ಹಬ್ಬಗಳೂ ಸೇರಿದಂತೆ ಕೆಲ ಸಂಘಟನೆಗಳು ಆಯೋಜಿಸುವ ಕ್ರೀಡಾಸಂಬಂಧಿ ಕಾರ್ಯಕ್ರಮಗಳ ವೇಳೆ ವೇದಿಕೆ,ಆಸನ, ಮೇಜು, ಖುರ್ಚಿ, ಶಾಮಿಯಾನ, ಕುಡಿ ಯುವ ನೀರು ಇನ್ನಿತರೆ ವ್ಯವಸ್ಥೆಗಳನ್ನು ಆಯೋ ಜಕರೇ ಸ್ವತಃ ಕಲ್ಪಿಸಿಕೊಳ್ಳುವ ಅನಿವಾರ್ಯತೆಇದೆ. ಇದರಿಂದಾಗಿ ಆಯೋಜಕರ ಸಂಕಷ್ಟ ಕೇಳುವವರೇ ಇಲ್ಲವಾಗಿದ್ದಾರೆ.
ನಿರ್ಲಕ್ಷ್ಯ:ಇತ್ತೀಚಿನ ದಿನಗಳಲ್ಲಿ ಬೃಹತ್ ಪ್ರಮಾಣದ ಆರೋಗ್ಯ ಶಿಬಿರ, ಕ್ರೀಡಾಕೂಟ,ಸಾಂಸ್ಕೃತಿಕ ಕಾರ್ಯಕ್ರಮ, ರಾಜಕೀಯ ಪಕ್ಷಗಳವಿವಿಧ ಕಾರ್ಯಕ್ರಮಗಳಿಗೆ ಸರ್ಕಾರಿ ಕ್ರೀಡಾಂಗಣ ಬಳಕೆಯಾಗುತ್ತಿದೆ. ಆದರೆ, ಮೂಲ ಉದ್ದೇಶವೇ ಹೊರತಾಗಿ ಕ್ರೀಡಾ ಚಟುವಟಿಕೆಗಳಿಂದದೂರವೇ ಉಳಿಯುವ ಸ್ಥಿತಿಯಿದೆ. ಕ್ರೀಡಾಂಗಣದ ಉತ್ತರ ಭಾಗದಿಂದ ಪೂರ್ವೋತ್ತರವಾಗಿ ಅಳವಡಿಸಿರುವ ಕಲ್ಲು ಹಾಸಿನ ಆಸನಗಳಅಳವಡಿಕೆ ಕಿತ್ತು ಮೇಲೆದ್ದಿವೆ. ವಿಷ ಜಂತುಗಳು,ಗಿಡ-ಗಂಟಿಗಳು ಬೆಳೆಯುತ್ತಿವೆ. ಇನ್ನು ಮೂಲ ಕಲ್ಲು ಹಾಸು ಕಿತ್ತು ಬಂದಿದ್ದರೂ ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಯಾವೊಬ್ಬರೂ ಗಮನಹರಿಸಿಲ್ಲ.
ಸ್ಥಳೀಯ ಕ್ರೀಡಾಪಟುಗಳ ಹಿತ ದೃಷ್ಟಿಯಿಂದಮಂಡ್ಯ ಜಿಪಂ ವತಿಯಿಂದ ನಿರ್ಮಾಣಗೊಂಡನೀರಿನ (ತೊಂಬೆ) ಸ್ಥಾವರಕ್ಕೆ ಈವರೆಗೂ ನೀರುಪೂರೈಕೆಗೆ ಪೈಪ್‌ಲೈನ್ ಅಳವಡಿಸಿಲ್ಲ. ಈ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮದ್ದೂರು ಕ್ರೀಡಾಂಗಣದ ಪ್ರಸ್ತುತ ಸ್ಥಿತಿ ಹೇಗಿದೆ? :
ಒಳಾಂಗಣ ಕ್ರೀಡಾಂಗಣದ ಅವ್ಯವಸ್ಥೆ ಹೇಳ ತೀರದಾಗಿದ್ದು ಮಳೆ, ಗಾಳಿಗೆ ಶಿಥಿಲವಾಗಿರುವ ಸೂರು ಮಳೆ ನೀರು ಸೋರಿ ಕಿತ್ತು ನಿಂತಿರುವ ಮೇಲ್ಚಾವಣಿ ಮತ್ತು ವುಡ್ ಕೋರ್ಟ್ ಇಲ್ಲಿನ ಅವ್ಯವಸ್ಥೆಗಳಿಗೆ ಉದಾಹರಣೆ. ಕ್ರೀಡಾಂಗಣ ಹಲವು ಅದ್ವಾನಗಳಿಂದ ಕೂಡಿದ್ದು ಹಳ್ಳ ಕೊಳ್ಳಗಳಿಂದ ಆವೃತವಾಗಿದ್ದರೂ ದುರಸ್ತಿಗೆ ಮುಂದಾಗದಿರುವುದು ಶೋಚನೀಯ. ಕೆಲ ದೇಹದಾರ್ಢ್ಯ ಪರಿಕರಗಳು ನಿರ್ವಹಣೆಕೊರತೆಯಿಂದ ತುಕ್ಕು ಹಿಡಿದಿವೆ. ಬದಲಿ ಯಂತ್ರಗಳ ಅಳವಡಿಕೆಗೆ ಕ್ರಮವಹಿಸಿಲ್ಲ. ಈ ಕುರಿತು ಜಿಪಂಹಾಗೂ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ವರ್ಗದ ಗಮನ ಸೆಳೆದರೂ ಈವರೆಗೂ ಯಾವುದೇ ಕ್ರಮಕ್ಕೆ ಮುಂದಾಗದಿರುವುದರಿಂದ ಕ್ರೀಡಾಸಕ್ತರಲ್ಲಿ ಬೇಸರ ತರಿಸಿದೆ.
ಮಂಡ್ಯ ಜಿಲ್ಲೆಯವರೇ ಆದ ಕೆ.ಸಿ.ನಾರಾಯಣಗೌಡರು ಯುವ ಜನ ಸೇವಾ ಮತ್ತು ಕ್ರೀಡಾಇಲಾಖೆಯ ಸಂಪುಟ ದರ್ಜೆಸಚಿವರಾಗಿದ್ದಾರೆ. ಮಂಡ್ಯ ಸೇರಿದಂತೆತಾಲೂಕಿನ ವಿವಿಧ ಕ್ರೀಡಾಂಗಣಗಳಉನ್ನತೀಕರಣಕ್ಕೆ ಕ್ರಮವಹಿಸಿದ್ದಾರೆ.ಸಂಬಂಧಿಸಿದ ಅಧಿಕಾರಿಗಳು ಅಗತ್ಯಕ್ರಮ ಕೈಗೊಳ್ಳಬೇಕಿದೆ. -ಮ.ನ.ಪ್ರಸನ್ನಕುಮಾರ್, ಮದ್ದೂರು ಪುರಸಭೆ ಸದಸ್ಯರು
ಮದ್ದೂರು ಸರ್ಕಾರಿ ಕ್ರೀಡಾಂಗಣ ಅಭಿವೃದ್ಧಿ ಸಂಬಂಧ ಈಗಾಗಲೇ ಸಂಬಂಧಿಸಿದ ಮೇಲಧಿಕಾರಿಗಳೊಟ್ಟಿಗೆ ಪತ್ರ ವ್ಯವಹಾರ ನಡೆಸಲಾಗಿದೆ. ಮುಂದಿನ ಅನುದಾನದಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಇನ್ನು ಈಗಾಗಲೇನೀತಿ ನಿಬಂಧನೆಗಳ ಕುರಿತಾಗಿ ನಾಮಫಲಕ ಅಳವಡಿಸಿ ಮುಂಜಾಗ್ರತೆ ವಹಿಸಲಾಗಿದೆ. – ಜಿ.ಓಂಪ್ರಕಾಶ್,ಸಹಾಯಕ ನಿರ್ದೇಶಕ, ಯುವಜನ ಸೇವೆಮತ್ತು ಕ್ರೀಡಾ ಇಲಾಖೆ, ಮಂಡ್ಯ
– ಎಸ್.ಪುಟ್ಟರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ
Power Scarcity: ಕೊರತೆ ನೀಗಿಸಲು ದೀರ್ಘಾವಧಿ ವಿದ್ಯುತ್ ಖರೀದಿಗೆ ನಿರ್ಧಾರ: ಜಾರ್ಜ್
Fraud Case: ಐಶ್ವರ್ಯಗೌಡ ವಂಚನೆ; ಸಂತಸ್ತರಿಗೆ ನ್ಯಾಯದ ಭರವಸೆ ನೀಡಿದ ಎಚ್‌ಡಿಕೆ
Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.