ರಾಜನ ಮೇಲೆ ಆಕ್ರಮಣ ಸಹಜ…: ಕಿಚ್ಚ ಸುದೀಪ್ ಖಡಕ್ ಮಾತು
Team Udayavani, Aug 2, 2022, 10:35 AM IST
ಸುದೀಪ್ ನಟನೆಯ “ವಿಕ್ರಾಂತ್ ರೋಣ’ ಬಿಡುಗಡೆಯಾಗಿ ಹಿಟ್‌ಲಿಸ್ಟ್ ಸೇರಿದೆ. ಸ್ಟಾರ್ ನಟರಾಗಿ ಸುದೀಪ್ ಹೊಸ ಜಾನರ್‌ನಲ್ಲಿ ವಿಭಿನ್ನ ಪ್ರಯೋಗ ಮಾಡಿದ್ದಾರೆ ಎಂಬ ಪ್ರಶಂಸೆಯ ಮಾತು ಒಂದು ಕಡೆಯಾದರೆ, ಮಾಸ್ ಅಭಿಮಾನಿಗಳ ಪ್ರಕಾರ, ಚಿತ್ರದಲ್ಲಿ ಸುದೀಪ್ ಇನ್ನೊಂದಿಷ್ಟು ಮಾಸ್ ಆಗಿ ಕಾಣಿಸಿಕೊಳ್ಳಬೇಕಿತ್ತೆಂಬ ಆಸೆ…. ಅದೇನೇ ಆದರೂ ಸಿನಿಮಾಕ್ಕೆ ಎಲ್ಲಾ ರಾಜ್ಯಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸುದೀಪ್ “ವಿಕ್ರಾಂತ್ ರೋಣ’ ಸಿನಿಮಾದ ಕುರಿತ ಹಲವು ವಿಚಾರ ಗಳನ್ನು ಮಾತನಾಡಿದ್ದಾರೆ
ವಿಕ್ರಾಂತ್ ರೋಣ ರಿಲೀಸ್ ಆಗಿದೆ. ಈ ಸಂದರ್ಭದಲ್ಲಿ ಏನು ಹೇಳುತ್ತೀರಿ?
ನನ್ನ ಸಿನಿ ಕೆರಿಯರ್ ನಲ್ಲಿ ತುಂಬಾ ಖುಷಿಕೊಟ್ಟ ಸಿನಿಮಾ. ಇದು ನನ್ನ ಕನಸಿನ ಸಿನಿಮಾ. ಹಾಗಾಗಿ, ಬಜೆಟ್ ಬಗ್ಗೆ ಚಿಂತೆ ಮಾಡದೇ ಕೋಟಿಗಟ್ಟಲೇ ಸುರಿದಿದ್ದೇವೆ. ಇಷ್ಟು ವರ್ಷಗಳಲ್ಲಿ ರಾಜ್‌ಮೌಳಿ ಯಾವತ್ತೂ ನನ್ನ ಸಿನಿಮಾ ನೋಡಿ ಟ್ವೀಟ್ ಮಾಡಿಲ್ಲ. ಆದರೆ, ಈ ಸಿನಿಮಾಕ್ಕೆ ಮಾಡಿದ್ದಾರೆ.
ಚಿತ್ರದ ಕಲೆಕ್ಷನ್ ಸದ್ದು ಮಾಡುತ್ತಿದೆ?
ಇವತ್ತು ದಿನದಿಂದ ದಿನಕ್ಕೆ ಸಿನಿಮಾದ ಕಲೆಕ್ಷನ್ ಏರಿಕೆಯಾಗುತ್ತಿದೆ. ಪರಭಾಷೆಗಳಲ್ಲೂ ಅದ್ಭುತವಾದ ರೆಸ್ಪಾನ್ಸ್ ಇದೆ. ನಿರ್ಮಾಪಕ ಜಾಕ್ ಮಂಜು ನಿರ್ಮಾಪಕರಾಗಿ ಖುಷಿಯಾಗಿದ್ದಾರೆ. ಪ್ರತಿ ರಾಜ್ಯಗಳಿಂದಲೂ ನಾವು ನಿರೀಕ್ಷಿಸಿದಕ್ಕಿಂತಲೂ ಹೆಚ್ಚು ಕಲೆಕ್ಷನ್ ಬರುತ್ತಿದೆ.
ಹೊಸಬರಿಗೂ “ವಿಕ್ರಾಂತ್ ರೋಣ’ದಲ್ಲಿ ಸ್ಕ್ರೀನ್ ಸ್ಪೇಸ್ ಕೊಟ್ಟಿದ್ದೀರಿ?
ತುಂಬಾ ನಿಸ್ವಾರ್ಥವಾಗಿ, ಪ್ರಾಮಾಣಿಕವಾಗಿ ಮಾಡಿರುವ ಸಿನಿಮಾವಿದು. ಅನಾವಶ್ಯಕವಾಗಿ ನಾನಿಲ್ಲಿ ಆವರಿಸಿಕೊಂಡಿಲ್ಲ. ಪ್ರತಿಯೊಬ್ಬ ನಟರಿಗೂ ಅವರದ್ದೇ ಆದ ಸ್ಕ್ರೀನ್ ಸ್ಪೆಸ್ ಇಲ್ಲಿ ಸಿಕ್ಕಿದೆ. ನಾನು ಸ್ಕ್ರಿಪ್ಟ್ಗೆ ಏನು ನ್ಯಾಯ ಸಲ್ಲಿಸಬೇಕಿತ್ತೋ, ಅದನ್ನು ಸಲ್ಲಿಸಿದ್ದೇನೆ. ಸುಖಾಸುಮ್ಮನೆ ಯಾವುದನ್ನೂ ಸೇರಿಸಿಲ್ಲ.
ಕಮರ್ಷಿಯಲ್ ಅಂಶಗಳು ಇನ್ನೂ ಬೇಕಿತ್ತೆಂಬ ಮಾತು ಕೆಲವು ಅಭಿಮಾನಿಗಳಿಂದ ಕೇಳಿಬರುತ್ತಿದೆಯಲ್ಲ?
ನಾನು ಕಮರ್ಷಿಯಲ್, ಮಾಸ್ ಹೀರೋ ಎಂದುಕೊಂಡು ಅನಾವಶ್ಯಕವಾಗಿ ಫೈಟ್, ಅಭಿ ಮಾನಿಗಳಿಗಾಗಿ ಮಾಸ್ ಡೈಲಾಗ್ ಸೇರಿಸಿಲ್ಲ. ಹಾಗೇನಾದರೂ ಮಾಡಿದ್ದರೆ ಇಡೀ ಸ್ಕ್ರಿಪ್ಟ್ ಕೆಡುತ್ತಿತ್ತು. ನಾನಿನ್ನು ರಿಟೈರ್ಡ್ ಆಗಿಲ್ಲ, ಕಮರ್ಷಿಯಲ್ ಸಿನಿಮಾಗಳನ್ನು ಯಾವತ್ತೂ ಬೇಕಾದ್ರೂ ಮಾಡಬಹು.
“ವಿಕ್ರಾಂತ್ ರೋಣ’ ಹೊಸ ಪ್ರಯೋಗದ ಬಗ್ಗೆ ಹೇಳಿ?
ನನ್ನ 26 ವರ್ಷದ ಕೆರಿಯರ್‌ನಲ್ಲಿ ನಾನು ಯಾವತ್ತೂ ಒಂದೇ ತೆರನಾದ ಸಿನಿಮಾ ಮಾಡಿಕೊಂಡು ಬಂದಿಲ್ಲ. ಔಟ್ ಅಂಡ್ ಔಟ್ ಮಾಸ್ ಕಮರ್ಷಿಯಲ್ ಜೊತೆಗೆ ವಿಭಿನ್ನವಾದ, ಹೊಸ ಪ್ರಯೋಗವನ್ನು ಮಾಡುತ್ತಲೇ ಬಂದಿದ್ದೇನೆ. ಒಂದೇ ತೆರನಾದ ಸಿನಿಮಾಗಳನ್ನು ಮಾಡುತ್ತಾ ಇದ್ದರೆ ನಾವು ಯಾವತ್ತೂ ಬೆಳೆಯೋದು, ಯಾವತ್ತೂ ಹೊಸತನಕ್ಕೆ, ಪ್ರಯೋಗಕ್ಕೆ ಒಡ್ಡಿಕೊಳ್ಳೋದು ಹೇಳಿ… ನನಗೆ ಈ ಸಿನಿಮಾ ಮಾಡಿರುವ ಬಗ್ಗೆ ಹೆಮ್ಮೆ ಇದೆ.
ಸಿನಿಮಾದ ದೊಡ್ಡ ಗೆಲುವಿಗೆ ಪೈರಸಿ ಹೊಡೆತವಲ್ಲವೇ?
ಪೈರಸಿಯಿಂದ ಅಥವಾ ಯಾರೋ ನೆಗೆಟಿವ್ ಮಾಡುವುದರಿಂದ ಒಂದು ಸಿನಿಮಾ ಸೋಲುತ್ತೆ ಅನ್ನೋದನ್ನು ನಾನು ನಂಬೋದಿಲ್ಲ. ಸಿನಿಮಾಕ್ಕೆ ಗೆಲ್ಲುವ ತಾಕತ್ತಿದ್ದರೆ ಅದು ಗೆದ್ದೇ ಗೆಲ್ಲುತ್ತದೆ. ಸಿನಿಮಾ ಚೆನ್ನಾಗಿಲ್ಲದೇ ಹೋದರೆ ಎಷ್ಟೇ ಬೂಸ್ಟ್ ಮಾಡಿದರೂ ಅದು ಗೆಲ್ಲೋದಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಓಡುತ್ತಿರುವ ನೆಗೆಟಿವ್ ಕಾಮೆಂಟ್‌ಗಳ ಬಗ್ಗೆ?
ಯಾವತ್ತೂ ಮೊದಲು ಆಕ್ರಮಣವಾಗೋದು ರಾಜನ ಮೇಲೆನೇ. ಹಾಗಾಗಿ, ಒಂದಷ್ಟು ಮಂದಿ ಏನೇನೋ ನೆಗೆಟಿವ್ ಮಾಡಿ “ಆಕ್ರಮಣ’ ಮಾಡುತ್ತಿದ್ದಾರೆ. ಆದರೆ, ಜನ ಇವತ್ತು ಈ ಸಿನಿಮಾ ಪರ ನಿಂತಿದ್ದಾರೆ. ನನ್ನ ಈ ಹಿಂದಿನ ಸಿನಮಾಗಳಿಗೆ ಈ ತರಹದ ಟ್ವೀಟ್, ಬೆಂಬಲ ನೋಡಿಲ್ಲ. “ಈಗ’ ನಂತರ ಜನ ಎರಡ್ಮೂರು ಬಾರಿ ನೋಡುತ್ತಿರುವ ಸಿನಿಮಾವಿದು ವೈಯಕ್ತಿಕವಾಗಿ ಪತ್ರ ಬರೆದು ಬೆಂಬಲ ಸೂಚಿಸಿದ್ದಾರೆ. ಇಷ್ಟೆಲ್ಲಾ ಪ್ರೀತಿ ಸಿಗುವಾಗ ನಾನು ನೆಗೆಟಿವ್ ಬಗ್ಗೆ ಯಾಕೆ ಚಿಂತೆ ಮಾಡಬೇಕು
ವಿಕ್ರಾಂತ್ ರೋಣದ ಗೆಲುವನ್ನು ಹೇಗೆ ವಿಶ್ಲೇಷಿಸುತ್ತೀರಿ?
ಏನಾದರೂ ಒಳ್ಳೆಯದು ಮಾಡಬೇಕೆಂದು ಪ್ರಕೃತಿ ನಿರ್ಧರಿಸಿದಾಗ ಅದರ ವಿರುದ್ಧ ಯಾರು ಏನು ಮಾಡಿದರೂ ಫಲಿಸೋದಿಲ್ಲ. ಇವತ್ತು “ವಿಕ್ರಾಂತ್ ರೋಣ’ನಿಗೆ ಸಿಗುತ್ತಿರುವ ಪ್ರೀತಿ ನೋಡಿ ಖುಷಿಯಾಗುತ್ತಿದೆ. ಕಮರ್ಷಿಯಲ್ ಆಗಿಯೂ ಚಿತ್ರ ಗೆದ್ದಿದೆ. ಜೊತೆಗೆ ಪ್ರೇಕ್ಷಕರು ಕೂಡಾ ಸಿನಿಮಾವನ್ನು ಅಪ್ಪಿಕೊಂಡಿದ್ದಾರೆ. ಇಡೀ ನಮ್ಮ ತಂಡ ಈ ಗೆಲುವಿನಿಂದ ತುಂಬಾ ಖುಷಿಯಾಗಿದೆ.
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಹೊಸ ಸೇರ್ಪಡೆ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.