ಝವಾಹಿರಿ ಹತ್ಯೆ ಬಳಿಕ “ಈ ಮೋಸ್ಟ್ ವಾಂಟೆಡ್ ಉಗ್ರ” ಅಲ್ ಖೈದಾ ನೂತನ ಮುಖ್ಯಸ್ಥನಾಗಲಿದ್ದಾನೆ?
ಆಲ್ ಖೈದಾ ಉಗ್ರಗಾಮಿ ಸಂಘಟನೆಯ ನೂತನ ಮುಖ್ಯಸ್ಥನಾಗುವ ಸಾಧ್ಯತೆ ಇದ್ದಿರುವುದಾಗಿ ಹಲವಾರು ವರದಿ ತಿಳಿಸಿದೆ.
Team Udayavani, Aug 2, 2022, 4:51 PM IST
ಕಾಬೂಲ್: ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನಾಪಡೆ ರಹಸ್ಯ ಕಾರ್ಯಾಚರಣೆ ಮೂಲಕ ಅಲ್ ಖೈದಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಐಮನ್ ಅಲ್ ಝವಾಹಿರಿಯನ್ನು ಹತ್ಯೆಗೈದಿದೆ. ಝವಾಹಿರಿ ಹತ್ಯೆಯಿಂದಾಗಿ ಅಮೆರಿಕದ 9/11 ದಾಳಿಯಲ್ಲಿ ಸಾವನ್ನಪ್ಪಿರುವ 3,000 ಕುಟುಂಬ ಸದಸ್ಯರಿಗೆ ನ್ಯಾಯ ಒದಗಿಸಿಕೊಟ್ಟಂತಾಗಿದೆ ಎಂದು ಅಧ್ಯಕ್ಷ ಜೋ ಬೈಡೆನ್ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:ರಕ್ಷಿಸುವ ಪ್ರಯತ್ನ ವಿಫಲ; ಗಂಜಿ ಬೇಯಿಸುತ್ತಿದ್ದ ದೊಡ್ಡ ಪಾತ್ರೆಯೊಳಗೆ ಬಿದ್ದು ವ್ಯಕ್ತಿ ಸಾವು
ಪಾಕಿಸ್ತಾನದ ಅಬೋಟಾಬಾದ್ ನಲ್ಲಿ ಅಮೆರಿಕ ಸೇನಾಪಡೆ 2011ರಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಒಸಾಮಾ ಬಿನ್ ಲಾಡೆನ್ ನನ್ನು ಹತ್ಯೆಗೈದ ನಂತರ ಝವಾಹಿರಿ ಅಲ್ ಖೈದಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥನಾಗಿ ನೇಮಕಗೊಂಡಿದ್ದ. ಇದೀಗ ಝವಾಹಿರಿ ಹತ್ಯೆಯಾಗಿದ್ದು, ಅಲ್ ಖೈದಾ ಸಂಘಟನೆಯ ಹೊಣೆ ಯಾರಿಗೆ ವಹಿಸಬಹುದು ಎಂಬ ಬಗ್ಗೆ ಊಹಾಪೋಹ ಹರಿದಾಡತೊಡಗಿರುವುದಾಗಿ ವರದಿ ವಿವರಿಸಿದೆ.
ಐಮನ್ ಝವಾಹಿರಿ ಹತ್ಯೆಯಿಂದ ತೆರವಾದ ಸ್ಥಾನಕ್ಕೆ ಅಲ್ ಖೈದಾ ಯಾರನ್ನ ನೇಮಕ ಮಾಡಲಿದೆ ಎಂಬ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಆದರೆ ಈಜಿಪ್ಟ್ ನ ಮಾಜಿ ಕರ್ನಲ್ ಸೈಫ್ ಅಲ್ ಅಡೆಲ್ ಆಲ್ ಖೈದಾ ಉಗ್ರಗಾಮಿ ಸಂಘಟನೆಯ ನೂತನ ಮುಖ್ಯಸ್ಥನಾಗುವ ಸಾಧ್ಯತೆ ಇದ್ದಿರುವುದಾಗಿ ಹಲವಾರು ವರದಿ ತಿಳಿಸಿದೆ.
ಯಾರೀತ ಸೈಫ್ ಅಲ್ ಅಡೆಲ್?
ಮಧ್ಯಏಷ್ಯಾದ ವರದಿಗಳ ಪ್ರಕಾರ, ಅಡೆಲ್ ಬಹುತೇಕ ಅಲ್ ಖೈದಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥನಾಗಬಹುದು ಎಂದು ಹೇಳಿವೆ. ಅಮೆರಿಕದ ಗುಪ್ತಚರ ಇಲಾಖೆಯ ಮಾಹಿತಿಯಂತೆ, ಈಜಿಪ್ಟ್ ನ ಮಾಜಿ ಸೇನಾಧಿಕಾರಿ ಅಲ್ ಖೈದಾ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಸದಸ್ಯರಲ್ಲಿ ಒಬ್ಬನಾಗಿದ್ದಾನೆ. ಇದಕ್ಕೂ ಮೊದಲು ಸೈಫ್ ಮುಕ್ತಾಬ್ ಅಲ್ ಖಿಡಮತ್ (ಎಂಎಕೆ) ಭಯೋತ್ಪಾದಕ ಸಂಘಟನೆಯಲ್ಲಿದ್ದ.
1980ರಲ್ಲಿ ಒಸಾಮಾ ಬಿನ್ ಲಾಡೆನ್ ಈ ಎಂಎಕೆ ಭಯೋತ್ಪಾದಕ ಸಂಘಟನೆಯನ್ನು ಹುಟ್ಟುಹಾಕಿದ್ದ. ಇದರ ಮುಖ್ಯ ಉದ್ದೇಶವೇ ಜಗತ್ತಿನಾದ್ಯಂತ ಹಣಕಾಸು ನೀಡುವ ಮತ್ತು ಉಗ್ರರನ್ನು ನೇಮಕ ಮಾಡುವುದಾಗಿತ್ತು. 80ರ ದಶಕದಲ್ಲಿ ಲಾಡೆನ್ ರಷ್ಯಾ ಸೈನಿಕರ ವಿರುದ್ಧ ಹೋರಾಡಲು ಅಫ್ಘಾನಿಸ್ತಾನಕ್ಕೆ ಸಾವಿರಾರು ಉಗ್ರರನ್ನು ಕಳುಹಿಸಿದ್ದ. ನಂತರ ಈ ಉಗ್ರಗಾಮಿ ಸಂಘಟನೆ ಇಬ್ಭಾಗವಾಗಿ ಹೋಗಿದ್ದು, ಒಸಾಮಾ ಬಿನ್ ಲಾಡೆನ್ ಅಲ್ ಖೈದಾವನ್ನು ಸ್ಥಾಪಿಸಿದ್ದ.
ಈ ಹಿಂದೆ ಅಡೆಲ್ ಒಸಾಮಾ ಬಿನ್ ಲಾಡೆನ್ ನ ಭದ್ರತಾ ಮುಖ್ಯಸ್ಥನಾಗಿದ್ದ. 2001ರ ಬಳಿಕ ಅಡೆಲ್ ಎಫ್ ಬಿಐನ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿ ಸೇರ್ಪಡೆಯಾಗಿದ್ದ. 1998ರಲ್ಲಿ ಕೀನ್ಯಾ ಮತ್ತು ತಾಂಜನಿಯಾದಲ್ಲಿ ಅಮೆರಿಕದ ರಾಯಭಾರ ಕಚೇರಿ ಮೇಲೆ ಬಾಂಬ್ ದಾಳಿ ನಡೆಸಿದ್ದ ಘಟನೆಯಲ್ಲಿ ಅಡೆಲ್ ಶಾಮೀಲಾಗಿದ್ದ.
ಉಗ್ರ ಅಡೆಲ್ ತಲೆಗೆ ಎಫ್ ಬಿಐ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿತ್ತು. ಇತ್ತೀಚೆಗೆ ಅಡೆಲ್ ಇರಾನ್ ನಲ್ಲಿ ಬಿರುಸಿನ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದಾಗಿ ವರದಿ ತಿಳಿಸಿದೆ. ಅಷ್ಟೇ ಅಲ್ಲ ಸಿರಿಯಾದಲ್ಲಿರುವ ಭಯೋತ್ಪಾದಕ ಗುಂಪುಗಳಿಗೆ ಟೆಲಿಗ್ರಾಮ್ ಮೂಲಕ ನಿರ್ದೇಶನ ನೀಡುತ್ತಿದ್ದಾನೆ ಎಂದು ವರದಿ ತಿಳಿಸಿದೆ.
1993ರಲ್ಲಿ ಸೋಮಾಲಿಯಾದ ಮೊಗಾದಿಶುವಿನಲ್ಲಿ ಅಮೆರಿಕದ ಸೇನಾ ಪಡೆ ಮತ್ತು ಹೆಲಿಕಾಪ್ಟರ್ ಮೇಲೆ ಹೊಂಚುದಾಳಿ ನಡೆಸಿ 18 ಅಮೆರಿಕ ಸೈನಿಕರನ್ನು ಹತ್ಯೆಗೈದ ಘಟನೆ ನಂತರ ಅಡೆಲ್ ನನ್ನು ಅಮೆರಿಕ ಪಡೆ ಬೇಟೆಯಾಡಲು ಹವಣಿಸುತ್ತಿರುವುದಾಗಿ ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.