ಯು.ಕೆ. ಬಡ್ಡಿ ದರ ಹೆಚ್ಚಳ: 27 ವರ್ಷಗಳಲ್ಲೇ ಗರಿಷ್ಠ
Team Udayavani, Aug 4, 2022, 7:41 PM IST
ಲಂಡನ್/ಮುಂಬೈ: ಹಣದುಬ್ಬರದಿಂದ ತತ್ತರಿಸುತ್ತಿರುವ ಯುನೈಟೆಡ್ ಕಿಂಗ್ಡಮ್ನಲ್ಲಿ ಬಡ್ಡಿದರವನ್ನು ಶೇ.0.5 ಏರಿಕೆ ಮಾಡಲಾಗಿದೆ. ಬ್ಯಾಂಕ್ ಆಫ್ ಇಂಗ್ಲೆಂಡ್ ಈ ನಿರ್ಧಾರ ಕೈಗೊಂಡಿದೆ. 27 ವರ್ಷಗಳ ಬಳಿಕ ಅಂದರೆ 1995ರ ಬಳಿಕ ಗರಿಷ್ಠ ಪ್ರಮಾಣದಲ್ಲಿ ಬಡ್ಡಿದರ ಏರಿಕೆ ಮಾಡಲಾಗಿದೆ.
ಬ್ಯಾಂಕ್ನ ವಿತ್ತೀಯ ನೀತಿ ನಿರೂಪಣಾ ಸಮಿತಿ 8-1ರ ಅಂತರದಲ್ಲಿ ದರ ಏರಿಕೆಯ ತೀರ್ಮಾನ ಕೈಗೊಂಡಿದೆ. ದರ ಏರಿಕೆಯ ಬಳಿಕ ಬಡ್ಡಿಯ ಪ್ರಮಾಣ ಶೇ.1.75 ಆಗಿದೆ. ಇದರ ಹೊರತಾಗಿಯೂ ಹಣದುಬ್ಬರ ಪ್ರಮಾಣ ಶೇ.13ನ್ನು ಮೀರಿಸುವ ಸಾಧ್ಯತೆಗಳಿವೆ. ಕೆಲ ದಿನಗಳ ಹಿಂದಷ್ಟೇ ಅಮೆರಿಕದ ಫೆಡರಲ್ ರಿಸರ್ವ್ ಕೂಡ ಬಡ್ಡಿ ದರದಲ್ಲಿ ಹೆಚ್ಚಳ ಮಾಡಿತ್ತು.
ಈ ನಡುವೆ ಆರ್ಬಿಐನ ವಿತ್ತೀಯ ನೀತಿ ಪರಿಶೀಲನಾ ಸಮಿತಿ ಕೂಡ ಬುಧವಾರದಿಂದ ಸಭೆ ನಡೆಸುತ್ತಿದ್ದು, ಶುಕ್ರವಾರ ಮುಕ್ತಾಯಗೊಳ್ಳಲಿದೆ. ದೇಶದಲ್ಲಿ ಕೂಡ ಶೇ.0.4 ಬಡ್ಡಿ ದರ (40 ಬೇಸಿಸ್ ಪಾಯಿಂಟ್ಸ್) ಹೆಚ್ಚಳವಾಗುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.