ವಿಭಜಕ ಶಕ್ತಿಗಳಿಂದಾಗಿ ಅಜಂಗಢ ಯುವಕರು ಗುರುತನ್ನು ಮರೆಮಾಚಬೇಕಾಯಿತು: ಯೋಗಿ
Team Udayavani, Aug 4, 2022, 9:34 PM IST
ಅಜಂಗಢ : ”ಸಂಕುಚಿತ ಮನಸ್ಸಿನ ವಿಭಜಕ ಶಕ್ತಿಗಳಿಂದಾಗಿ ಅಜಂಗಢ ಯುವಕರು ತಮ್ಮ ಗುರುತನ್ನು ಮರೆಮಾಚಬೇಕಾಯಿತು” ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಲೋಕಸಭಾ ಉಪಚುನಾವಣೆಯಲ್ಲಿ ಗೆದ್ದ ನಂತರ ಯೋಗಿ ಆದಿತ್ಯನಾಥ್ ಮೊದಲ ಬಾರಿಗೆ ಅಜಂಗಢದಲ್ಲಿ ಸುಮಾರು 145 ಕೋಟಿ ರೂಪಾಯಿಗಳ 50 ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.
ಈ ಹಿಂದೆ ಜಿಲ್ಲೆಗೆ ಭಯೋತ್ಪಾದಕ ಟ್ಯಾಗ್ ಲಗತ್ತಿಸಿದ ಸ್ಪಷ್ಟ ಉಲ್ಲೇಖವಿತ್ತು. 2008 ರ ಅಹಮದಾಬಾದ್ ಸರಣಿ ಸ್ಫೋಟ ಮತ್ತು ದೆಹಲಿಯ ಬಾಟ್ಲಾ ಹೌಸ್ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿರುವ ಕೆಲವು ಆರೋಪಿಗಳು ಈ ಪ್ರದೇಶದಿಂದ ಬಂದವರಾಗಿದ್ದರು.
”ರಾಜಕೀಯ ಸಂಕುಚಿತ ಮನೋಭಾವದಿಂದಾಗಿ ಪ್ರತಿಭೆಗಳು ರಾಷ್ಟ್ರೀಯ ರಂಗದಲ್ಲಿ ವಿಭಜಕ ಶಕ್ತಿಗಳಿಗೆ ಬಲಿಯಾದರು. ಇದು ಅಜಂಗಢದ ಯುವಕರಲ್ಲಿ ಗುರುತಿನ ಬಿಕ್ಕಟ್ಟನ್ನು ಸೃಷ್ಟಿಸಿದೆ” ಎಂದರು.
“ಐದು ವರ್ಷಗಳ ಹಿಂದೆ, ಅಜಂಗಢದ ಯುವಕರು ರಾಜ್ಯದಿಂದ ಹೊರಗೆ ಹೋದಾಗ ತಮ್ಮ ಗುರುತನ್ನು ಮರೆಮಾಡಬೇಕಾಗಿತ್ತು. ಕಾರಣವೇನೆಂದರೆ, ಅವರು ತಮ್ಮ ಗುರುತನ್ನು ಬಹಿರಂಗಪಡಿಸಿದರೆ, ಅವರಿಗೆ ಹೋಟೆಲ್‌ಗಳು ಮತ್ತು ಧರ್ಮಶಾಲಾಗಳಲ್ಲಿ ಉಳಿಯಲು ಕೊಠಡಿ ಸಿಗುತ್ತಿರ ಲಿಲ್ಲ, ಬಾಡಿಗೆಗೆ ಕೊಠಡಿ ನೀಡಲು ಯಾರೂ ಸಿದ್ಧರಿರಲಿಲ್ಲ. ಅವರೆಲ್ಲ ಏನನ್ನು ಅನುಭವಿಸಿರಬಹುದು ಎಂದು ಯೋಚಿಸಿ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಿದ ನಂತರ ಜನರ ಗ್ರಹಿಕೆ ಬದಲಾಗಿದೆ ಎಂದರು.
“ಅಜಂಗಢದ ಜನರೇ, ನೀವು ಬಿಜೆಪಿ ಶಾಸಕರು ಮತ್ತು ಸಂಸದರನ್ನು ಹೊಂದಿಲ್ಲದಿದ್ದರೂ ಸಹ, ಸರಕಾರವು ಇಲ್ಲಿ ಅಭಿವೃದ್ಧಿಯನ್ನು ಖಚಿತಪಡಿಸಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಅಜಂಗಢದ ಜನರನ್ನು ಲಕ್ನೋ ಮತ್ತು ದೆಹಲಿಯೊಂದಿಗೆ ಸಂಪರ್ಕಿಸಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Rajasthan: ಚುನಾವಣ ಅಧಿಕಾರಿ ಮೇಲೆ ಹಲ್ಲೆ; ಪ್ರತಿಭಟನೆ ನಡುವೆ ನರೇಶ್ ಮೀನಾ ಬಂಧನ!
Constitution: ಪ್ರಧಾನಿ ಸಂವಿಧಾನ ಓದಿಲ್ಲ, ಇದಕ್ಕೆ ನಾನು ಗ್ಯಾರಂಟಿ: ರಾಹುಲ್
Kerala:ಧರ್ಮ ಆಧಾರಿತ ವಾಟ್ಸಾಪ್ ಗ್ರೂಪ್ ರಚನೆ ಆರೋಪ; ಇಬ್ಬರು ಐಎಎಸ್ ಅಧಿಕಾರಿಗಳ ಅಮಾನತು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.