ಗೊರವನಹಳ್ಳಿ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಹಬ್ಬದ ಸಂಭ್ರಮ
Team Udayavani, Aug 5, 2022, 12:33 PM IST
ಕೊರಟಗೆರೆ: ಗೊರವನಹಳ್ಳಿಯ ಶ್ರೀಮಹಾಲಕ್ಷ್ಮೀ ಸನ್ನಿಧಾನ ಸಿರಿದೇವಿಗೆ ಮೀಸಲಾದ ಕರುನಾಡಿನ ಏಕೈಕ ಧಾರ್ಮಿಕ ಕ್ಷೇತ್ರ. ಶ್ರಾವಣಮಾಸದ ಮೊದಲನೇ ಶುಭ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಮಹಾಲಕ್ಷ್ಮೀ ಪುಣ್ಯಕ್ಷೇತ್ರದಲ್ಲಿ ಸಡಗರ ಸಂಭ್ರಮ ಮನೆಮಾಡಿದೆ. 25 ವರ್ಷಗಳ ನಂತರ ಸತತ ಎರಡನೇ ಸಲ ತೀತಾ ಜಲಾಶಯದ ಕೋಡಿಯ ವೈಭೋಗ ಮಹಾಲಕ್ಷ್ಮೀ ಭಕ್ತರು ಮತ್ತು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತೀದೆ.
ಕಲ್ಪತರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊವರನಹಳ್ಳಿ ಶ್ರೀಮಹಾಲಕ್ಷ್ಮೀ ಸನ್ನಿಧಾನಕ್ಕೆ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಭಾರತ ದೇಶ ಮತ್ತು ಕರ್ನಾಟಕ ರಾಜ್ಯದ ವಿವಿಧ ಕಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಗೊರವನಹಳ್ಳಿ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ನಿಂದ ಪುಣ್ಯಕ್ಷೇತ್ರಕ್ಕೆ ಬರುವ ಭಕ್ತರಿಗೆ ಸಕಲ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.
ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಗೊರವನಹಳ್ಳಿಯ ಸಿರಿದೇವಿಯ ಸನ್ನಿಧಾನದಲ್ಲಿ ಶುಕ್ರವಾರ ಮುಂಜಾನೆಯಿಂದ ಸಂಜೆಯವರೆಗೆ ದೇವಿಗೆ ಪಂಚಾಮೃತ ಅಭಿಷೇಕ, ಮಹಾ ಮಂಗಳಾರತಿ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮ ಜರುಗಲಿವೆ. ಗುರುವಾರದಿಂದಲೇ ದೇವಾಲಯ ಮತ್ತು ದೇವಿಗೆ ವಿಶೇಷವಾಗಿ ಹೂವಿನ ಅಲಂಕಾರದ ವ್ಯವಸ್ಥೆ ಮಾಡಲಾಗಿದೆ. ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಪ್ರಸಾದ ವಿನಿಯೋಗ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ.
ಇದನ್ನೂ ಓದಿ:ಇತಿಹಾಸ ಪ್ರಸಿದ್ಧವಾಗಿದ್ದ ಗ್ರಾಮದಲ್ಲಿ ಹಲವು ಸಮಸ್ಯೆ; ಮಳಲಿಗೆ ಮರಳಲಿ ಗತವೈಭವ
ಶ್ರಾವಣ ಮಾಸದ ಮೊದಲನೇ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬ ಆಚರಣೆ ಮಾಡುವ ಭಕ್ತರು ಮೊದಲು ಗಣಪತಿ ಮತ್ತು ಗಂಗಾಪೂಜೆಯ ನಂತರ ಮಹಾಲಕ್ಷ್ಮೀ ಕಳಸಕ್ಕೆ ಹಲಸು, ಅರಳಿ, ಆಲ, ಹತ್ತಿಯ ಚಿಗುರು ಮತ್ತು ಹೊಂಬಾಳೆ-ಕಮಲದ ಹೂವಿನ ಪೂಜಾ ವ್ರತ ಮಾಡಿ ನಂತರ ಗೊರವನಹಳ್ಳಿ ಕ್ಷೇತ್ರದ ಮಹಾಲಕ್ಷೀ ದರ್ಶನ ಪಡೆದರೇ ಭಕ್ತರ ಇಷ್ಟಾರ್ಥಗಳು ನೇರವೇರುತ್ತವೆ ಎಂಬುದು ಮಹಾಲಕ್ಷ್ಮೀ ದೇವಿಯ ಭಕ್ತರ ಮತ್ತು ಕಲಿಯುಗದ ದೇವತೆ ಕಮಲಮ್ಮನವರ ನಂಬಿಕೆಯಾಗಿದೆ.
ಭಕ್ತರ ಸೆಳೆಯುವ ಪುಣ್ಯಕ್ಷೇತ್ರದ ಮಹಿಮೆ
ಮಹಾಲಕ್ಷ್ಮೀ ದೇವಾಲಯದ ಬಲಭಾಗದಲ್ಲಿ ತೀತಾ ಜಲಾಶಯ ಹಾಗೂ ಶ್ರೀಲಕ್ಷ್ಮೀ ಮೂಡಿಬಂದ ಅಬ್ಬಯ್ಯನ ಕೆರೆಯಿದೆ. ಎಡಭಾಗದಲ್ಲಿ ನಾಗಪ್ಪನ ಹುತ್ತ ಮತ್ತು ಕಲಿಯುಗದ ದೇವತೆ ಕಮಲಮ್ಮ ಅಜ್ಜಿಯ ದಿವ್ಯ ಬೃಂದಾನವನವಿದೆ. ದೇವಾಲಯದ ಹಿಂಭಾಗದಲ್ಲಿ ಆದಿಶಕ್ತಿ ಮಾರಮ್ಮ ದೇವಾಲಯ ಹಾಗೂ ದಕ್ಷಿಣದಲ್ಲಿ ಓಣಿನಾಗನ ಶಿಲೆ ಮತ್ತು ದೇವಿಯ ಕಮಲ ಪಾದವಿದೆ. ತೀತಾ ಜಲಾಶಯದ ಸಮೀಪದ ಹುಣಸೆ ಮರದಲ್ಲಿ ಗಣಪತಿ ಶಿಲೆಯು ಕಾಣಸಿಗಲಿದೆ.
ಪ್ರವಾಸಿಗರ ಸೆಳೆಯುವ ತೀತಾ ಜಲಾಶಯ
ಜಯಮಂಗಲಿ ನದಿಗೆ ತಡೆಯಾಗಿ ನಿರ್ಮಾಣವಾಗಿರುವ ತೀತಾ ಜಲಾಶಯವು ಕೊರಟಗೆರೆ ಕ್ಷೇತ್ರದ ರೈತರ ಜೀವನಾಡಿ. 25 ವರ್ಷಗಳ ನಂತರ ಸತತ ಎರಡನೇ ಸಲ ತೀತಾ ಜಲಾಶಯ ಕೋಡಿಬಿದ್ದು ಗ್ರಾಮೀಣ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಮಹಾಲಕ್ಷ್ಮೀ ದೇವಿಯ ದರ್ಶನಕ್ಕೆ ಬರುವ ಭಕ್ತರು ತೀತಾ ಜಲಾಶಯಕ್ಕೆ ಭೇಟಿ ನೀಡಿ ಪ್ರಕೃತಿಯ ಸೊಬಗು ಸವಿಯುತ್ತಾರೆ. ತುಮಕೂರು ಜಿಲ್ಲೆಯ ಏಕೈಕ ತೀತಾ ಜಲಾಶಯವು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಗೊರವನಹಳ್ಳಿ ಮಹಾಲಕ್ಷ್ಮೀಗೆ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ. ಶ್ರಾವಣ ಮಾಸದ ಶುಭ ಶುಕ್ರವಾರ ಮಹಾಲಕ್ಷ್ಮೀ ದೇವಿಗೆ ಹೂವಿನ ಅಲಂಕಾರ ಮತ್ತು ಹೋಮ ಹವನ ಏರ್ಪಡಿಸಲಾಗಿದೆ. ಮಹಾಲಕ್ಷ್ಮೀ ಟ್ರಸ್ಟ್ನಿಂದ ದೇವಾಲಯಕ್ಕೆ ಬರುವ ಭಕ್ತರಿಗೆ ಸಕಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎನ್ನುತ್ತಾರೆ ಪ್ರಧಾನ ಅರ್ಚಕ ಸುಬ್ರಮಣ್ಯ ಶರ್ಮ
ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯಕ್ಕೆ ದೀಪಾಲಂಕಾರ ಮತ್ತು ದೇವಿಯ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ. ಹಿರಿಯ ನಾಗರೀಕರು ಮತ್ತು ವಿಶೇಷ ಚೇತನರಿಗೆ ವಿಶೇಷ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಮಹಾಲಕ್ಷ್ಮೀ ಟ್ರಸ್ಟ್ ಆಡಳಿತ ಮಂಡಳಿಯಿಂದ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆಯ ಜೊತೆಯಲ್ಲಿ ಸಕಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮಹಾಲಕ್ಷ್ಮೀ ಟ್ರಸ್ಟ್ ಅಧ್ಯಕ್ಷ ವಾಸುದೇವ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.