ಅಪಾಯದ ಮಟ್ಟ ಮೀರಿದ ಡೋಣಿ ನದಿ, ಬೊಮ್ಮನಜೋಗಿ ಕೆರೆ: ಮುಳುಗಡೆ ಭೀತಿಯಲ್ಲಿ ಗ್ರಾಮಗಳು
Team Udayavani, Aug 5, 2022, 3:01 PM IST
ವಿಜಯಪುರ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಜಿಲ್ಲೆಯಲ್ಲಿ ನದಿ-ಹಳ್ಳಗಳು, ತುಂಬಿ ಹರಿಯುತ್ತಿವೆ. ಡೋಣಿನದಿ ಪ್ರವಾಹಕ್ಕೆ ತೀರದ ಗ್ರಾಮ ಸಾರವಾಡ, ಬೊಮ್ಮನಜೋಗಿ ಕೆರೆ ತುಂಬಿ ಅಪಾಯದ ಮಟ್ಟ ಮೀರಿರುವ ಕಾರಣ ಬೂದಿಹಾಳ ಗ್ರಾಮಗಳು ಮುಳುಗಡೆ ಭೀತಿ ಎದುರಿಸುತ್ತಿವೆ.
ನಿರಂತರ ಮಳೆಗೆ ಡೋಣಿನದಿಯಲ್ಲಿ ಪ್ರವಾಹ ಸೃಷ್ಟಿಯಾಗಿದೆ. ವಿಜಯಪುರ ಜಿಲ್ಲೆಯ ರಾಜ್ಯ ಹೆದ್ದಾರಿ 34 ರ ಮೇಲೆ ಡೋಣಿ ನದಿ ನೀರು ಹರಿಯುತ್ತಿದ್ದು, ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮ ಮುಳುಗಡೆ ಭೀತಿ ಎದುರಿಸುತ್ತಿದೆ. ಸಾರವಾಡ ಮಾರ್ಗದ ವಿಜಯಪುರ- ಬಾಗಲಕೋಟ ಧಾರವಾಡ, ಬೆಳಗಾವಿ ಜಿಲ್ಲೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ಮೇಲೆ ಡೋಣಿ ನದಿ ನೀರು ಪ್ರವಾಹವಾಗಿ ಹರಿಯುತ್ತಿದೆ. ಸೇತುವೆ ಮೇಲೆ ಹರಿಯುವ ನೀರಲ್ಲೇ ವಾಹನ ಸಂಚಾರ ಮುಂದುವರೆದಿದೆ. ಮಳೆ ನೀರು ಹೆಚ್ಚಾದರೆ ಈ ಮಾರ್ಗದ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಇದೇ ಕಾರಣಕ್ಕೆ ಸೇತುವೆಗೆ ಅನತಿ ದೂರದಲ್ಲೇ ಇರುವ ಸಾರವಾಡ ಗ್ರಾಮಕ್ಕೆ ನೀರು ನುಗ್ಗುವ ಭೀತಿ ಎದುರಾಗಿದೆ. ಪರಿಣಾಮ ಗ್ರಾಮಸ್ಥರು ಆತಂಕದಿಂದ ನದಿ ತೀರದಲ್ಲಿ ಜಮಾಯಿಸಿದ್ದಾರೆ. ಬಬಲೇಶ್ವರ ತಹಶೀಲ್ದಾರ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.
ಇದಲ್ಲದೆ ಡೋಣಿ ನದಿ ಪ್ರವಾಹದ ಪರಿಣಾಮ ನದಿ ತೀರದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಬೆಳೆ ಜಲಾವೃತವಾಗಿದೆ. ಸೂರ್ಯಕಾಂತಿ, ಮೆಕ್ಕೆಜೋಳ, ತೊಗರಿ ಬೆಳೆಗಳಿಗೆ ಹಾನಿಯಾಗಿವೆ. ಪ್ರತಿ ಎಕರೆ ಬೆಳೆ ಬೆಳೆಯಲು 10-15 ಸಾವಿರ ರೂ. ಖರ್ಚು ಮಾಡಿರುವ ರೈತರು, ಡೋಣಿನದಿ ಪ್ರವಾಹದಿಂದಾಗಿ ಬೆಳೆ ಹಾನಿಯಿಂದ ಕಂಗಾಲಾಗಿದ್ದಾರೆ.
ಮತ್ತೊಂದೆಡ ಇದೇ ನದಿ ತಾಳಿಕೋಟೆ ಬಳಿ ಕೆಳ ಹಂತದ ಸೇತುವೆ ಮೇಲೆ ಪ್ರವಾಹದ ನೀರು ಭೋರ್ಗರೆಯುತ್ತಿದ್ದು, ಪ್ರವಾಹ ಲೆಕ್ಕಿಸದೇ ವಾಹನ, ಜನ ಸಂಚಾರ ಮುಂದುವರೆದಿದೆ.
ಇದನ್ನೂ ಓದಿ:ಭೀಮಾತೀರದ ಕೊಂಕಣಗಾಂವದಲ್ಲಿ ವಿಮಲಾಬಾಯಿ ವಿಚಾರಣೆ; ಭಾರಿ ಭದ್ರತೆ
ಸಿಂದಗಿ ತಾಲೂಕಿನ ಬೊಮ್ಮನಜೋಗಿ ಕೆರೆ ಸಂಪೂರ್ಣ ಭರ್ತಿಯಾಗಿದ್ದು, ಕೋಡಿ ಬೀಳುವ ಅಪಾಯದ ಮಟ್ಟ ಮೀರಿದ್ದು, ಕೆರೆ ಒಡೆಯುವ ಮಟ್ಟಕ್ಕೆ ಬಂದಿದೆ. ಒಂದೊಮ್ಮೆ ಕೆರೆ ಒಡೆದಲ್ಲಿ ಕೆಳಭಾಗದಲ್ಲಿರುವ ಬೂದಿಹಾಳ ಗ್ರಾಮಕ್ಕೆ ನೀರು ನುಗ್ಗುವ ಸಾಧ್ಯತೆ ಇದ್ದು, ಜನರಿಗೆ ಅಗತ್ಯ ಮುನ್ನೆಚ್ಚರಿಕೆ ನೀಡಲಾಗಿದೆ. ಸಿಂದಗಿ ತಾಲೂಕ ಆಡಳಿತ ಈ ಬಗ್ಗೆ ನಿಗಾ ಇರಿಸಿದೆ.
ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದ್ದು, ಗ್ರಾಮದೇವತೆ ಸಂಗಮನಾಥ ದೇವಾಲಯ ಜಲಾವೃತವಾಗಿದೆ. ಇದೇ ಹಳ್ಳಕ್ಕೆ ನಿರ್ಮಿಸಿರುವ ಚೆಕಡ್ಯಾಂ ತುಂಬಿ ಜಲಪಾತದ ಮಾದರಿಯಲ್ಲಿ ವಿಹಂಗಮ ನೋಟ ಸೃಷ್ಟಿಸಿದೆ. ಈ ಮಾರ್ಗದಲ್ಲಿ ಸಂಚರಿಸುವವರು ಜಲಪಾತದ ಮುಂದೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.