![kambala2](https://www.udayavani.com/wp-content/uploads/2025/02/kambala2-1-415x249.jpg)
![kambala2](https://www.udayavani.com/wp-content/uploads/2025/02/kambala2-1-415x249.jpg)
Team Udayavani, Aug 5, 2022, 3:34 PM IST
ಬೆಳಗಾವಿ: ಮೂರ್‍ನಾಲ್ಕು ದಿನಗಳ ಅವಧಿಯಲ್ಲಿ ನಗರದಲ್ಲಿ ಲಾರಿ ಹಾಯ್ದು ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಕ್ಕೆ ಕೊನೆಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು, ಬೆಳಗ್ಗೆ 8ರಿಂದ 11 ಗಂಟೆಯವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 8 ಗಂಟೆವರೆಗೆ ಭಾರೀ ವಾಹನಗಳ ನಗರ ಪ್ರವೇಶಕ್ಕೆ ನಿಷೇಧ ಹೇರಿದೆ.
ನಗರದ ಫೋರ್ಟ್ ರಸ್ತೆಯಲ್ಲಿ ಆ. 1ರಂದು ಲಾರಿ ಹಾಯ್ದು ಬಾಲಕಿ ಮೃತಪಟ್ಟಿದ್ದು, ಈ ಘಟನೆ ಮಾಸುವ ಮುನ್ನವೇ ಆ. 3ರಂದು ಕ್ಯಾಂಪ್ ಪ್ರದೇಶದಲ್ಲಿ ಲಾರಿ ಡಿಕ್ಕಿ ಹೊಡೆದು ಶಾಲೆಗೆ ಹೊರಟಿದ್ದ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಇದರಿಂದ ಉದ್ರಿಕ್ತ ಸಾರ್ವಜನಿಕರು ಕಲ್ಲು ತೂರಾಟ ನಡೆಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಶಾಲಾ ಅವಧಿಯಲ್ಲಿ ಭಾರೀ ವಾಹನಗಳನ್ನು ನಿಷೇಧಿಸುವಂತೆ ಅನೇಕ ವರ್ಷಗಳಿಂದ ಒತ್ತಡ ಕೇಳಿ ಬಂದರೂ ಪೊಲೀಸರು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದರು. ಎರಡು ಸಾವಿನ ನಂತರ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.
ನಗರದ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಗುರುವಾರ ಡಿಸಿಪಿ ಪಿ.ವಿ. ಸ್ನೇಹ ಅವರು ಕ್ಯಾಂಪ್ ಪ್ರದೇಶದ ನಿವಾಸಿಗಳು ಹಾಗೂ ನಗರದ ಸಾರ್ವಜನಿಕರೊಂದಿಗೆ ಸಭೆ ನಡೆಸಿದರು. ಇನ್ನು ಮುಂದೆ ಇಂಥ ಘಟನೆಗಳು ಸಂಭವಿಸಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ಶಾಲೆಗೆ ತೆರಳುವ ಸಮಯದಲ್ಲಿ ಭಾರೀ ವಾಹನಗಳ ಪ್ರವೇಶ ನಿಷೇಧಿಸಲಾಗುವುದು. ಆ. 3ರಂದು ಕ್ಯಾಂಪ್ ಪ್ರದೇಶದ ಅರ್ಹಾನ್ ಸಾದಿಕ ಬೇಪಾರಿ(10) ಬಾಲಕ ಸಾವನ್ನಪ್ಪಿದ್ದಾನೆ. ಹೀಗಾಗಿ ಭಾರೀ ವಾಹನಗಳ ಪ್ರವೇಶಕ್ಕೆ ಕಡಿವಾಣ ಹಾಕಲಾಗುವುದು ಎಂದು ಸ್ನೇಹ ಹೇಳಿದರು.
ಶಾಲೆಗೆ ಮಕ್ಕಳು ತೆರಳುವ ಸಮಯದಲ್ಲಿ ಭಾರಿ ವಾಹನಗಳು ಪ್ರವೇಶ ಮಾಡದಂತೆ ಎಲ್ಲ ಕಡೆಗೆ ಪಾಯಿಂಟ್ ಹಾಕಿ ತಡೆ ಹಿಡಿಯಲಾಗುವುದು. ಇದಕ್ಕಾಗಿಯೇ ಸಂಚಾರಿ ಪೊಲೀಸರನ್ನು ನಿಯೋಜಿಸಲಾಗುವುದು. ಫಿಶ್ ಮಾರ್ಕೆಟ್ ಹಾಗೂ ಕ್ಯಾಂಪ್ ಪ್ರದೇಶದ ಸುತ್ತಲೂ ಸುಮಾರು 15-20 ಶಾಲೆಗಳಿವೆ. ಶಾಲೆ ವತಿಯಿಂದಲೂ ಜವಾಬ್ದಾರಿ ತೆಗೆದುಕೊಂಡು ಒಬ್ಬೊಬ್ಬರು ಗಾರ್ಡ್‌ಗಳನ್ನು ನೇಮಿಸುವಂತೆ ಬಿಇಒಗಳಿಗೆ ಸೂಚನೆ ನೀಡಲಾಗುವುದು ಎಂದರು.
ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು. ಸಾರ್ವಜನಿಕರೂ ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕ್ಯಾಂಪ್ ಪ್ರದೇಶದ ವಿವಿಧ ಶಾಲೆಗಳಲ್ಲಿ ಸುಮಾರು 18 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಭಾಗದಲ್ಲಿ ಮಕ್ಕಳು ಶಾಲೆಗೆ ತೆರಳುವ ಸಮಯದಲ್ಲಿ ಜನ ದಟ್ಟಣೆ ಹೆಚ್ಚಿರುತ್ತದೆ. ಕೆಲ ಮಕ್ಕಳು ಸೆ„ಕಲ್‌ಗಳ ಮೇಲೂ ತೆರಳುತ್ತಾರೆ. ಅತೀ ವೇಗವಾಗಿ ವಾಹನಗಳು ಓಡಾಡುತ್ತಿರುತ್ತವೆ. ಸ್ಪೀಡ್ ಬ್ರೇಕರ್, ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಕ್ಯಾಂಪ್ ಪ್ರದೇಶದ ನಿವಾಸಿಗಳು ಹೇಳಿದರು.
ಮುಖಂಡರಾದ ರಿವಾನ್ ಬೇಪಾರಿ, ಶಕೀಲ ಮುಲ್ಲಾ, ಸಂಗೊಳ್ಳಿ, ಕಿರಣ ನಿಪ್ಪಾಣಿಕರ, ಸುನೀಲ ಜಾಧವ, ಅರುಣ ಗೋಜೆಪಾಟೀಲ್, ನದೀಮ ಫತೇಖಾನ್, ಇಮ್ರಾನ ಫತೇಖಾನ್ ಇತರರು ಇದ್ದರು.
ಮಾರ್ಗಸೂಚಿ ಬದಲು
ಪ್ರತಿ ನಿತ್ಯ ವಿದ್ಯಾರ್ಥಿಗಳು ಶಾಲೆಗೆ ತೆರಳುವ ಬೆಳಗ್ಗೆ 9ರಿಂದ 11 ಗಂಟೆವರೆಗೆ ಹಾಗೂ ಸಂಜೆ 4ರಿಂದ 8 ಗಂಟೆವರೆಗೆ ನಗರದ ಕೇಂದ್ರ ಸ್ಥಳಗಳಿಗೆ ಭಾರೀ ವಾಹನಗಳು ಪ್ರವೇಶಿಸದಂತೆ ಈಗಾಗಲೇ ಮಾರ್ಗಸೂಚಿ ಇದೆ. ಈ ಮಾರ್ಗಸೂಚಿಯನ್ನು ತುಸು ಬದಲಾವಣೆ ಮಾಡಿ 7:30 ಅಥವಾ 8ರಿಂದ 11 ಗಂಟೆವರೆಗೆ ನಿಗದಿ ಮಾಡಲಾಗುವುದು. ಈ ಬಗ್ಗೆ ಮಾಹಿತಿ ಪಡೆದು ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಾ| ಎಂ.ಬಿ. ಬೋರಲಿಂಗಯ್ಯ ತಿಳಿಸಿದರು. ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡು ದಿನಗಳ ಅಂತರದಲ್ಲಿ ಇಬ್ಬರು ವಿದ್ಯಾರ್ಥಿಗಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕೆಲ ಮಾರ್ಗಸೂಚಿಗಳು ಮೊದಲಿನಿಂದಲೂ ಇವೆ. ನಗರದಲ್ಲಿ ಅತಿ ಹೆಚ್ಚು ಶಾಲೆಗಳಿವೆ. ಎಲ್ಲ ಕಡೆ ಸ್ಟಾಫ್ ಕೊಡಲು ಕಷ್ಟವಾಗುತ್ತದೆ. ಹೀಗಾಗಿ ಡಿಡಿಪಿಐ ಹಾಗೂ ಶಿಕ್ಷಣ ಇಲಾಖೆಯನ್ನು ಸೇರಿಸಿಕೊಂಡು ಶಾಲಾ, ಕಾಲೇಜು ಆಡಳಿತ ಮಂಡಳಿಯೊಂದಿಗೆ ಸಭೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ವಿಶೇಷ ಕಾರ್ಯಾಚರಣೆ ಆರಂಭಿಸುತ್ತೇವೆ ಎಂದರು.
Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!
Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು
Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ
Belagavi: ನ್ಯಾಯಾಲಯ ವ್ಯವಸ್ಥೆಯಿಂದಲೇ ಅತ್ಯಾ*ಚಾರ, ಕೊ*ಲೆ ಹೆಚ್ಚಾಗಿದೆ: ಮುತಾಲಿಕ್
Belagavi: ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
You seem to have an Ad Blocker on.
To continue reading, please turn it off or whitelist Udayavani.