ಮೂರೂವರೆ ವರ್ಷಗಳಲ್ಲಿ 254 ಕೋ.ರೂ. ಸೈಬರ್ ಕಳ್ಳರ ಪಾಲು
ಕರ್ನಾಟಕವೇ ಕಳ್ಳರ ನೆಚ್ಚಿನ ತಾಣ ಒಟಿಪಿ, ಆನ್‌ಲೈನ್ ಫಿಶಿಂಗ್ ಹೆಚ್ಚಳ
Team Udayavani, Aug 6, 2022, 7:03 AM IST
ಬೆಂಗಳೂರು: ಸೈಬರ್ ವಂಚಕರಿಗೆ ಕರ್ನಾಟಕವೇ ನೆಚ್ಚಿನ ತಾಣ.ಇದು ಬರೀ ಆತಂಕಕಾರಿ ಎಂದು ಸುಮ್ಮನಾಗುವುದಲ್ಲ, ಪ್ರತಿಯೊಬ್ಬರೂ ಜಾಗ್ರತೆ ವಹಿಸಬೇಕಾದ ಸಂಗತಿ.
ರಾಜ್ಯದಲ್ಲಿ ಮೂರೂವರೆ ವರ್ಷ ಗಳಲ್ಲಿ ಒಟಿಪಿ, ಸಾಮಾಜಿಕ ಜಾಲತಾಣ ಹಾಗೂ ಆನ್‌ಲೈನ್ ಫಿಶಿಂಗ್ ವಂಚನೆಗೆ ಸಂಬಂಧಿಸಿ 254 ಕೋಟಿ ರೂ. ಸೈಬರ್ ಕಳ್ಳರ ಪಾಲಾಗಿದೆ. ಕನ್ನ ಹಾಕಿದ ಕೂಡಲೇ ಪೊಲೀಸರಿಗೆ ದೂರು ಕೊಟ್ಟರೂ ಜಪ್ತಿ ಯಾದದ್ದು ಕೇವಲ 87.7 ಕೋಟಿ ರೂ. ಮಾತ್ರ.
ವಂಚನೆಗೊಳಗಾದವರು ಹೀಗೆ ಮಾಡಿ
ಸೈಬರ್ ವಂಚನೆಯಾದ 1 ಗಂಟೆ ಗೋಲ್ಡನ್ ಅವರ್. ಈ ಅವಧಿಯಲ್ಲಿ ವಂಚನೆಗೊಳಗಾದವರು ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿ ನೀಡಿ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿಸ ಬಹುದು. ಹಣ ವರ್ಗಾವಣೆಯಾದ ಖಾತೆಯನ್ನು ಮುಟ್ಟುಗೋಲು ಹಾಕಿ ಸೈಬರ್ ಕಳ್ಳರ ಖಾತೆಯಿಂದ ಜಪ್ತಿ ಮಾಡಲು ಸಾಧ್ಯ. ಕೋರ್ಟ್ ಅನು ಮತಿ ಮೇರೆಗೆ ವಂಚನೆಗೊಳಗಾದ ವರಿಗೆ ಹಣ ಮರಳಿಸಲಾಗುತ್ತದೆ.
ಅಂತರ್ಜಾಲ ಇಂದಿನ ಜೀವನಶೈಲಿ ಯಲ್ಲಿ ಅನಿವಾರ್ಯ ಅವಲಂಬನೆ. ಹಾಗಾಗಿ ಅಂತರ್ಜಾಲದ ಬಳಕೆದಾ
ರರ ಸಂಖ್ಯೆ ಹೆಚ್ಚು ತ್ತಿದೆ. ಅದರ ಬೆನ್ನಿಗೇ ವಂಚನೆ ಗೊಳಗಾಗುವರ ಸಂಖ್ಯೆಯೂ ಏರಿಕೆ ಯಾಗುತ್ತಿದೆ.
ಹಾಗಾಗಿ ವಿದೇಶದಲ್ಲೋ ಅಥವಾ ಉತ್ತರ ಭಾರತದಲ್ಲೋ ಕುಳಿತು ವಂಚಿಸುತ್ತಿರುವ ಸೈಬರ್ ಕಳ್ಳರಿಗೆ ಕರ್ನಾಟಕವೇ ನೆಚ್ಚಿನ ತಾಣ. ಬಹು ಮಾನ, ಉಡು ಗೊರೆ, ಡೇಟಿಂಗ್, ಸಾಲ ನೀಡಿಕೆ, ಕೌನ್ ಬನೇಗಾ ಕರೋಡ್ ಪತಿ, ಭಾರಿ ಮೊತ್ತದ ಲಾಟರಿ ಬಹುಮಾನ-ಎಂದೆಲ್ಲಾ ಆಮಿಷ ವೊಡ್ಡಿ ವಂಚನೆಗೊಳಗಾಗುತ್ತಿರುವ ಪ್ರಕರಣಗಳು ದುಪ್ಪಟ್ಟಾಗಿವೆ.
ಪ್ರತಿ ಪ್ರಕರಣದಲ್ಲೂ ಸೈಬರ್ ಕಳ್ಳರನ್ನು ಪತ್ತೆ ಹಚ್ಚಲು ಲಕ್ಷಾಂತರ ರೂ. ಖರ್ಚಾಗುತ್ತದೆ. 3 ಲಕ್ಷ ರೂ. ವಂಚನೆಯಾದರೆ, ಆ ಕಳ್ಳರ ಪತ್ತೆಗೆ 15 ಲಕ್ಷ ರೂ. ವ್ಯಯಿಸಬೇಕು. ಹೀಗಾಗಿ ಪೊಲೀಸರು ಹಿಂದೇಟು ಹಾಕುತ್ತಾರೆ. ಸೈಬರ್ ಕ್ರೈಂ ಮಟ್ಟಹಾಕಲು ಸಿಬಂದಿಹಾಗೂ ಆಧುನಿಕ ಉಪಕರಣ ಪೊಲೀಸರಲ್ಲಿಲ್ಲ. ಜಾರ್ಖಂಡ್, ಬಿಹಾರ್, ಉತ್ತರ ಪ್ರದೇಶ, ದಿಲ್ಲಿಯಲ್ಲಿ ಕುಳಿತು ಈ ವಂಚನೆ ಎಸಗುವವರು ಹೆಚ್ಚಾಗುತ್ತಿದ್ದಾರೆ. ಸಾರ್ವಜನಿಕರು ಈ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು ಎನ್ನುತ್ತಾರೆ ಸೈಬರ್ ಕ್ರೈಂ ಪೊಲೀಸ್ ಅಧಿಕಾರಿಗಳು.
ನಾವು ಎಚ್ಚರ ವಹಿಸಬೇಕಾದದ್ದು
01 ಮೊದಲಿಗೆ ಈ ಉಡುಗೊರೆ, ನಿಮ್ಮ ಮೊಬೈಲ್ ಸಂಖ್ಯೆಗೆ ಬಹು ಮಾನ, ನನಗೆ ಕಷ್ಟವಿದೆ ಸಹಾಯ ಮಾಡಿ ಎನ್ನುವಂಥ ಆಹ್ವಾನಗಳು, ಆನ್‌ಲೈನ್ ಲಾಟರಿಯಂಥ ಯಾವುದೇ ಅನಪೇಕ್ಷಿತ ಸಂದೇಶಗಳು, ಕರೆ
ಹಾಗೂ ಇಮೇಲ್‌ಗಳನ್ನು ಪ್ರತಿಕ್ರಿಯಿಸುವ ಮೂಲಕ ಪ್ರೋತ್ಸಾಹಿಸಲೇಬಾರದು.
02 ಅಕಸ್ಮಾತ್ ಯಾವುದೇ ಸಂಬಂಧದ ವ್ಯವ ಹಾರಗಳಿಗೆ ಹೊರಗಿನವರು ಒಟಿಪಿ ಕೇಳಿದರೆ ಹಂಚಿಕೊಳ್ಳಲೇಬಾರದು. ಬ್ಯಾಂಕ್‌ಗಳು ಹೇಳುವಂತೆ ಅವರ್ಯಾರೂ (ಬ್ಯಾಂಕಿನ ಸಿಬಂದಿ) ಗ್ರಾಹಕರ ಒಟಿಪಿಗಾಗಿ ಕರೆ ಮಾಡುವುದಿಲ್ಲ.
03ಇಷ್ಟೆಲ್ಲ ಆದ ಮೇಲೂ ವಂಚನೆಗೊಳಗಾದರೆ ಕೂಡಲೇ ಹತ್ತಿರದ ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿ ನೀಡಬೇಕು.
ಸಾಕ್ಷ್ಯಾಧಾರಗಳನ್ನು ಪತ್ತೆ ಹಚ್ಚಿ ಸೈಬರ್ ಕ್ರೈಂ ಪ್ರಕರಣವನ್ನು ಭೇದಿಸುವುದು ಸುಲಭವಲ್ಲ. ಸಾರ್ವಜನಿಕರು ಈ ಬಗ್ಗೆ ಜಾಗೃತರಾದರೆ ಸೈಬ ರ್ ಕ್ರೈಂ ತಡೆಗಟ್ಟಬಹುದು.
-ಡಾ| ಎ. ಸುಬ್ರಹ್ಮಣ್ಯೇಶ್ವರ ರಾವ್, ಹೆ. ಪೊಲೀಸ್ ಆಯುಕ್ತ.
-ಅವಿನಾಶ್ ಮೂಡಂಬಿಕಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ
Karnataka Govt,.: ಸಂಪುಟ ಹುತ್ತಕ್ಕೆ ಈಗಲೇ ಕೈಹಾಕಲು ಸಿಎಂ ನಿರಾಸಕ್ತಿ?
Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್ ಭೇಟಿ ಸಾಧ್ಯತೆ
DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ
DK Shivakumar: ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.