ಮತ್ತೆ ಸಂತೋಷ್ ಥಿಯೇಟರ್ ನಲ್ಲಿ ಚಿತ್ರ ಪ್ರದರ್ಶನ?
Team Udayavani, Aug 6, 2022, 1:24 PM IST
ಬೆಂಗಳೂರಿನ ಗಾಂಧಿನಗರದ ಕೆ.ಜಿ ರಸ್ತೆಯಲ್ಲಿರುವ ಪ್ರಮುಖ ಚಿತ್ರಮಂದಿರಗಳ ಪೈಕಿ ಸಂತೋಷ್ ಚಿತ್ರಮಂದಿರ ಕೂಡ ಒಂದು. ಕೆ.ಜಿ ರಸ್ತೆಯಲ್ಲಿರುವ ಪ್ರಮುಖ ಚಿತ್ರಮಂದಿರಗಳಲ್ಲಿ ಒಂದು ಎಂದೇ ದಶಕಗಳಿಂದಲೂ ಕರೆಸಿಕೊಂಡಿದ್ದ ಸಂತೋಷ್ ಥಿಯೇಟರ್, ಕನ್ನಡ ಚಿತ್ರರಂಗದ ಅದೆಷ್ಟೋ ನಿರ್ಮಾಪಕರು, ವಿತರಕರು ಮತ್ತು ಸ್ಟಾರ್ ಗಳ ಫೇವರೆಟ್ ಥಿಯೇಟರ್.
ಕನ್ನಡ ಚಿತ್ರರಂಗದಲ್ಲಿ ಗಲ್ಲಾ ಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ್ದ, ಹತ್ತಾರು ದಾಖಲೆಗಳನ್ನು ಬರೆದಿರುವ ನೂರಾರು ಹಿಟ್ ಸಿನಿಮಾಗಳು ಬಿಡುಗಡೆಯಾಗಿದ್ದ ಮೇನ್ ಥಿಯೇಟರ್ ಎಂಬ ಖ್ಯಾತಿ ಸಂತೋಷ್ ಥಿಯೇಟರ್‌ಗಿತ್ತು. ಆದರೆ ಕೋವಿಡ್ ಬಳಿಕ ಕೆಲವು ಕಾನೂನಾತ್ಮಕ ಕಾರಣಾಂತರಗಳಿಂದ ಸಂತೋಷ್ ಥಿಯೇಟರ್‌ನಲ್ಲಿ ಸಿನಿಮಾಗಳ ಪ್ರದರ್ಶನ ರದ್ದುಗೊಂಡಿತ್ತು.
ಕೆ.ಜಿ ರಸ್ತೆಯ ಜನಪ್ರಿಯ ಥಿಯೇಟರ್‌ನಲ್ಲಿ ಸಿನಿಮಾ ಪ್ರದರ್ಶನ ಸ್ಥಗಿತಗೊಂಡಿದ್ದು, ಸಹಜವಾಗಿಯೇ ಸಿನಿಪ್ರಿಯರು, ನಟರು, ನಿರ್ಮಾಪಕರು, ವಿತರಕರು ಹೀಗೆ ಎಲ್ಲರ ಬೇಸರಕ್ಕೂ ಕಾರಣವಾಗಿತ್ತು. ಇದೀಗ ಪ್ರದರ್ಶನ ಸ್ಥಗಿತಗೊಂಡಿದ್ದ ಸಂತೋಷ್ ಥಿಯೇಟರ್‌ನಲ್ಲಿ ಮತ್ತೆ ಪ್ರದರ್ಶನ ಶುರುವಾಗಲಿದೆ ಎನ್ನಲಾಗಿದೆ.
ಸದ್ಯ ಇದೇ ಆ. 12ರಂದು ಬಿಡುಗಡೆಯಾಗಲಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ “ರವಿ ಬೋಪಣ್ಣ’ ಸಿನಿಮಾದ ಮೂಲಕ ಸಂತೋಷ್ ಥಿಯೇಟರ್ ನಲ್ಲಿ ಮತ್ತೆ ಸಿನಿಮಾ ಪ್ರದರ್ಶನ ಆರಂಭವಾಗಲಿದೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.