ಟಿ-20 ಕ್ರಿಕೆಟ್‌: ಮೈಸೂರು ವಾರಿಯರ್ಸ್‌ ತಂಡ ಪ್ರಕಟ

Team Udayavani, Aug 6, 2022, 1:33 PM IST

ಟಿ-20 ಕ್ರಿಕೆಟ್‌: ಮೈಸೂರು ವಾರಿಯರ್ಸ್‌ ತಂಡ ಪ್ರಕಟ

ಮೈಸೂರು: ಆ.7ರಿಂದ ಆರಂಭವಾಗಲಿರುವ ಮಹಾರಾಜ ಟಿ-20 ಟೂರ್ನಿಯ ಟ್ರೋಫಿಯ ಮೇಲೆ ಕಣ್ಣಿಟ್ಟಿರುವ ಮೈಸೂರು ವಾರಿಯರ್ಸ್‌ ತಂಡ ತನ್ನ 20 ಮಂದಿ ಆಟಗಾರರ ಹೆಸರನ್ನು ಪ್ರಕಟಿಸಿದೆ.

2014ರ ಕೆಪಿಎಲ್‌ ಮೊದಲ ಆವೃತ್ತಿಯಲ್ಲೇ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಮೈಸೂರು ವಾರಿಯರ್ಸ್‌ ಬಳಿಕ ಚಾಂಪಿಯನ್‌ ಆಗುವಲ್ಲಿ ವಿಫ‌ಲವಾಗಿತ್ತು. ಕೊರೊನಾ ಕಾರಣಕ್ಕಾಗಿ ಕಳೆದ ಎರಡು ವರ್ಷ ಕೆಪಿಎಲ್‌ ನಡೆದಿರಲಿಲ್ಲ. ಈ ಬಾರಿ ಕೆಪಿಎಲ್‌ ಬದಲಿಗೆ ಮಹಾರಾಜ ಟಿ-20 ಟ್ರೋಫಿ ಹೆಸರಿನಲ್ಲಿ ಟೂರ್ನಿ ನಡೆಯುತ್ತಿದ್ದು, ಪ್ರಶಸ್ತಿಗೆ ಮುತ್ತಿಕ್ಕಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಅದಕ್ಕಾಗಿ ಯುವ, ಪ್ರತಿಭಾವಂತ ಆಟಗಾರರನ್ನು ಆಯ್ಕೆ ಮಾಡಿದೆ. ತಂಡದಲ್ಲಿ ಬಿಗ್‌ ಹಿಟ್ಟರ್‌ಗಳು, ಆಲ್‌ರೌಂಡರ್‌ಗಳು, ಯುವ ವೇಗಿಗಳು ಹಾಗೂ ಉತ್ತಮ ಸ್ಪಿನ್ನರ್‌ಗಳಿದ್ದು, ಮೈಸೂರು ವಾರಿಯರ್ಸ್‌ ಪ್ರಶಸ್ತಿ ಗೆಲ್ಲುವ ಭರವಸೆ ಹೆಚ್ಚಿಸಿದೆ.

ಈ ಕುರಿತು ಮಾತನಾಡಿದ ತಂಡದ ಮಾಲೀಕ ಅರ್ಜುನ್‌ ರಂಗ, ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಟೂರ್ನಿಮೆಂಟ್‌ ಆಯೋಜನೆ ಮಾಡಲು ಸಾಧ್ಯವಾಗಿರಲಿಲ್ಲ. ಈ ವರ್ಷ ಮಹಾರಾಜ ಟ್ರೋಫಿ ಹೆಸರಿನಲ್ಲಿ ಟೂರ್ನಿಮೆಂಟ್‌ ನಡೆಯು ತ್ತಿದ್ದು, ಪ್ರಶಸ್ತಿ ಗೆಲ್ಲಲು ಸಕಲ ಸಿದ್ಧತೆ ಮಾಡಿಕೊಂಡಿ ದ್ದೇವೆ. ಕರುಣ್‌ ನಾಯರ್‌ ತಂಡವನ್ನು ಮುನ್ನಡೆ ಸಲಿದ್ದು, ಅವರ ನಾಯಕತ್ವದಡಿ ತಂಡ ಅದ್ಬುತ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸವಿದೆ. ಪಂದ್ಯ ಗಳನ್ನು ವೀಕ್ಷಿಸಲು ಕಾತರನಾಗಿದ್ದೇನೆ ಎಂದರು.

ಮೈಸೂರು ತಂಡ :

ಕರುಣ್‌ ನಾಯರ್‌ (ನಾಯಕ), ಶ್ರೇಯಸ್‌ ಗೋಪಾಲ್‌, ಪವನ್‌ ದೇಶಪಾಂಡೆ, ವಿದ್ಯಾಧರ ಪಾಟೀಲ್‌, ನಿಹಾಲ್‌ ಉಲ್ಲಾಳ್‌, ಪ್ರತೀಕ್‌ ಜೈನ್‌, ಭರತ್‌ ಧುರಿ, ಚಿರಂಜೀವಿ, ಶುಭಾಂಗ ಹೆಗ್ಡೆ, ಲೋಚನ್‌ ಅಪ್ಪಣ್ಣ, ಶಿವರಾಜ್‌, ಮೋನಿಶ್‌ ರೆಡ್ಡಿ, ವರುಣ್‌ ರಾವ್‌, ರಾಹುಲ್‌ ಪ್ರಸನ್ನ, ನಿತಿನ್‌ ಬಿಲ್ಲೆ, ಆದಿತ್ಯ ಗೋಯಲ್‌, ಅಭಿಷೇಕ್‌ ಅಲವತ್‌, ಅರುಣ್‌.ಕೆ., ತುಷಾರ್‌.ಎಚ್‌ ಮತ್ತು ನಾಗ ಭರತ್‌ ಆಟಗಾರರಿದ್ದು, ಪಿ.ವಿ.ಶಶಿಕಾಂತ್‌ ಅವರನ್ನು ತಂಡದ ಮುಖ್ಯ ತರಬೇತು ದಾರರಾಗಿ ನೇಮಕ ಮಾಡಲಾಗಿದೆ. ಸಹಾಯಕ ತರಬೇತುದಾರರಾಗಿ ಕೆ.ಎಲ್‌. ಅಕ್ಷಯ್‌, ಆಯ್ಕೆದಾರರಾಗಿ ಕೆ.ಎಲ್‌.ಅಶ್ವತ್‌, ಫಿಜಿಯೋಥೆರಪಿಸ್ಟ್‌ ಟಿ.ಮಂಜುನಾಥ್‌, ಟ್ರೇನರ್‌ ಆಗಿ ಇರ್ಫಾನ್‌ ಉಲ್ಲಾ ಖಾನ್‌ ಮತ್ತು ವಿಡಿಯೋ ವಿಶ್ಲೇಷಕರಾಗಿ ಕಿರಣ್‌.ಕೆ ಕಾರ್ಯ ನಿರ್ವಹಿಸಲಿದ್ದಾರೆ.

ಮಹಾರಾಜ ಟಿ20 ಟೂರ್ನಿಗಾಗಿ ತಂಡ ಮುನ್ನಡೆಸುವುದು ದೊಡ್ಡ ಗೌರವ. ನನ್ನ ಮೇಲೆ ನಂಬಿಕೆ ಇಟ್ಟು ಇಂತಹ ಜವಾಬ್ದಾರಿ ನೀಡಿದ ತಂಡಕ್ಕೆ ಕೃತಜ್ಞನಾಗಿರುತ್ತೇನೆ. ಅಭಿಮಾನಿ ಗಳು, ಪಾಲುದಾರರಿಗಾಗಿ ಉತ್ತಮ ಪ್ರದರ್ಶನ ನೀಡಲಿದ್ದೇವೆ ಎಂಬ ವಿಶ್ವಾಸವಿದೆ. -ಕರುಣ್‌ ನಾಯರ್‌, ಮೈಸೂರು ವಾರಿಯರ್ಸ್‌ ತಂಡದ ನಾಯಕ

ಟಾಪ್ ನ್ಯೂಸ್

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

3

Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ

3-vitla

Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.