ಕೊಳೆಗೇರಿ ಪ್ರದೇಶ ಅಭಿವೃದ್ಧಿಗೆ ಬದ್ಧ: ಕುಮಠಳ್ಳಿ
ಒಳಗಡೆ ವಾಹನ ಬರದೆ ಹೋದರೆ ರಾಟಿ ಹಚ್ಚಿ ಸ್ವಚ್ಛತೆಗೆ ಮುಂದಾಗುವಂತೆ ತಿಳಿಸಲಾಗಿದೆ.
Team Udayavani, Aug 6, 2022, 6:23 PM IST
ಅಥಣಿ: ದೀನ-ದಲಿತರ ಉದ್ಧಾರಕ್ಕಾಗಿ ನಾನು ಬದ್ಧನಿದ್ದೇನೆ. ಸರ್ಕಾರದ ಯೋಜನೆಗಳು ಕಟ್ಟ ಕಡೆಯ ವ್ಯಕ್ತಿಗೂ ಸಿಗಬೇಕು ಎನ್ನುವ ಉದ್ದೇಶ ನನ್ನದಾಗಿದೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ತಿಳಿಸಿದರು.
ಅವರು ಪಟ್ಟಣದ ವಾರ್ಡ್ ನಂ. 4,5,6 ಮತ್ತು 10 ರ ಕೊಳೆಗೇರಿ ಪ್ರದೇಶದಲ್ಲಿ ಮಂಡಳಿ ವತಿಯಿಂದ 1.13 ಕೋಟಿ ವೆಚ್ಚದಲ್ಲಿ ಸಿ.ಸಿ. ರಸ್ತೆ ಹಾಗೂ 1 ಸಾವಿರ ಮೀ. ಚರಂಡಿ ಕಾಮಗಾರಿಗೆ ಅಡಿಗಲ್ಲು ಪೂಜೆ ನೆರವೇರಿಸಿ ಮಾತನಾಡಿ, ಕೊಳೆಗೇರಿ ಪ್ರದೇಶದಲ್ಲಿ ಸುಮಾರು 11 ರಿಂದ 12 ಕೋಟಿಗಳ ಕಾಮಗಾರಿ ಮಾಡಿದ್ದು ವೈಯಕ್ತಿಕವಾಗಿ ತೃಪ್ತಿ ಇದೆ. ಅಥಣಿ ಮತಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರ ಪ್ರಯತ್ನ ಮತ್ತು ಓಡಾಟ ನಡೆದಿದೆ ಎಂದು ಹೇಳಿದರು. ಕೊಳೆಗೇರಿ ಪ್ರದೇಶದಲ್ಲಿ ಸ್ವತ್ಛತೆಗೆ ಪುರಸಭೆಗೆ ತಿಳಿಸಲಾಗಿದೆ.
ಒಳಗಡೆ ವಾಹನ ಬರದೆ ಹೋದರೆ ರಾಟಿ ಹಚ್ಚಿ ಸ್ವಚ್ಛತೆಗೆ ಮುಂದಾಗುವಂತೆ ತಿಳಿಸಲಾಗಿದೆ. ಆಗಸ್ಟ್-ಸೆಪ್ಟೆಂಬರ್ ಒಳಗೆ ಅಭಿವೃದ್ಧಿ ಒಂದು ಹಂತ ತಲುಪಿ
ನಿವಾಸಿಗಳಿಗೆ ಅನುಕೂಲ ವಾಗಲಿದೆ ಎಂದರು. ಬಿಜೆಪಿ ಮುಖಂಡ ಅನಿಲ ಸೌದಾಗರ ಮಾತನಾಡಿ, ಕೊಳೆಗೇರಿ ಅಭಿವೃದ್ಧಿಗೆ ಶಾಸಕರು ಸಾಕಷ್ಟು ಅನುದಾನ ತಂದಿದ್ದಾರೆ ಎಂದರು.
ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ಎಂ.ಎಲ್.ಲಮಾಣಿ, ಬಿ.ಎಸ್.ಶಂಭುಲಿಂಗಪ್ಪಾ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವಕುಮಾರ ಕೆ, ದಲಿತ ಮುಖಂಡ ಶಶಿಕಾಂತ ಸಾಳವಿ, ಪ್ರಕಾಶ ಚನ್ನನವರ, ಮಾಂತೇಶ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ
“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ
Council Session: ಪವರ್ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ
Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್. ರಾಜಣ್ಣ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.