ಜೀವದ ಹಂಗು ತೊರೆದು ಸೇನೆ ಸೇರಿ
ಸನ್ಮಾನ ಸಮಾರಂಭದಲ್ಲಿ ನಿವೃತ್ತ ಸೈನಿಕ ಮೋನೇಶಪ್ಪ ಮೈಸೂರ ಸಲಹೆ
Team Udayavani, Aug 7, 2022, 4:53 PM IST
ಹಂಸಭಾವಿ: ಯುವಕರು ಸೇನೆ ಸೇರಬೇಕಾದರೆ ಜೀವದ ಹಂಗು ತೊರೆದು, ದೇಶ ಸೇವೆ ಮಾಡುವ ಗುರಿ ಇಟ್ಟುಕೊಂಡು ಸೇರಬೇಕೆಂದು ನಿವೃತ್ತ ಸೈನಿಕ ಮೋನೇಶಪ್ಪ ಮೈಸೂರ ಹೇಳಿದರು.
ಸಮೀಪದ ಬೆಟಕೇರೂರ ಗ್ರಾಮದಲ್ಲಿ ಗ್ರಾಮದ ಮೋನೇಶಪ್ಪ ಮೈಸೂರ, ಬಸವರಾಜ ಮೈಸೂರ ಮತ್ತು ಭರಮಪ್ಪ ಇಂಗಳಗೊಂದಿ ನಿವೃತ್ತ ಸೈನಿಕರಿಗೆ ಗ್ರಾಮಸ್ಥರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸೈನ್ಯದಲ್ಲಿದ್ದಾಗ ಎದುರಿಸಿದ ಕಹಿ ಅನುಭವಗಳನ್ನು ಹಂಚಿಕೊಂಡರು.
ಹಿರೇಕೆರೂರಿನಲ್ಲಿ ಸೈನಿಕರ ಭವನ ನಿರ್ಮಿಸಿ ಕೊಡಿ. ತಾಲೂಕಿನ ಯುವ ಜನತೆಗೆ ಸೈನ್ಯಕ್ಕೆ ಸೇರಲು ತರಬೇತಿ ನೀಡುವ ಕೆಲಸವನ್ನು ನಾನು ಮತ್ತು ತಾಲೂಕಿನ ನಿವೃತ್ತ ಸೈನಿಕರು ಸೇರಿ ಮಾಡುತ್ತೇವೆ ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಅವರಿಗೆ ಮನವಿ ಮಾಡಿದರು.
ನಿವೃತ್ತ ಸೈನಿಕರನ್ನು ಸನ್ಮಾನಿಸಿ ಮಾತನಾಡಿದ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ನಮ್ಮ ನಾಡಿಗಾಗಿ, ದೇಶಕ್ಕಾಗಿ ಸೇವೆ ಮಾಡಿದವರನ್ನು ಸ್ಮರಿಸುವುದು ಮತ್ತು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಬೆಟಕೇರೂರ ಗ್ರಾಮದ ತ್ರಿಮೂರ್ತಿ ಸೈನಿಕರಾದ ಮೋನೇಶಪ್ಪ ಮೈಸೂರ, ಬಸವರಾಜ ಮೈಸೂರ ಮತ್ತು ಭರಮಪ್ಪ ಇಂಗಳಗೊಂದಿ ಅವರನ್ನು ಗ್ರಾಮಸ್ಥರು ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು.
ಅವರ ಬೇಡಿಕೆಯನ್ನು ಈಡೇರಿಸಲು ಕಟ್ಟಡಕ್ಕೆ ಜಾಗ ಬೇಕಾಗುತ್ತದೆ. ನಿಮ್ಮ ಸಂಘದ ವತಿಯಿಂದ ಹಿರೇಕೆರೂರ ಪಟ್ಟಣ ಪಂಚಾಯಿತಿಗೆ ಅರ್ಜಿ ಕೊಟ್ಟರೆ ಅವರ ಸಂಘಕ್ಕೆ ಜಾಗೆ ಮಂಜೂರ ಮಾಡಿಸುವ ಕೆಲಸ ಮಾಡುತ್ತೇನೆ ಮತ್ತು ಸೈನಿಕರ ಭವನ ಕಟ್ಟಿಸಲು ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.
ನಿವೃತ್ತ ಸೈನಿಕರನ್ನು ಸನ್ಮಾನಿಸಿ ಮಾತನಾಡಿದ ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ, ದೇಶ ಸೇವೆಯೇ ಈಶ ಸೇವೆ ಎಂದು ತಿಳಿದು ಸೈನ್ಯಕ್ಕೆ ಸೇರಿ, ದೇಶದ 130 ಕೋಟಿ ಜನತೆಯನ್ನು ರಕ್ಷಣೆ ಮಾಡಿ ಗ್ರಾಮಕ್ಕೆ ಮರಳಿದ ಈ ನಿವೃತ್ತರ ಸೇವೆ ಅವಿಸ್ಮರಣೀಯ ಎಂದು ಹೇಳಿದರು.
ತಾಲೂಕು ಆಡಳಿತದ ಪರವಾಗಿ ಉಪತಹಶೀಲ್ದಾರ್ ರಾಜಶೇಖರ ಎಲಿ, ಕೌರವ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪ್ರತಾಪ, ಗ್ರಾಮ ಪಂಚಾಯಿತಿ ಹಾಗೂ ಗ್ರಾಮದ ವಿವಿಧ ಸಂಘಸಂಸ್ಥೆಗಳ ಪದಾಧಿ ಕಾರಿಗಳು ನಿವೃತ್ತ ಸೈನಿಕರನ್ನು ಸನ್ಮಾನಿಸಿದರು.
ಅಲ್ಲದೇ, ತಾಲೂಕಿನ ಹಾಗೂ ಬೇರೆ ತಾಲೂಕಿನ ಸುಮಾರು 10 ಜನ ಸೈನಿಕರನ್ನು ಸಂಘಟಕರು ಸನ್ಮಾನಿಸಿದರು. ಗ್ರಾಮದ ಹಿರಿಯರಾದ ಶಿವಮೂರ್ತೆಪ್ಪ ಮತ್ತೀಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಪಂ ಅಧ್ಯಕ್ಷರು, ಸದಸ್ಯರು, ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪದಾ ಧಿಕಾರಿಗಳು ಉಪಸ್ಥಿತರಿದ್ದರು. ಶಾಂತನಗೌಡ ಹೊಂಡದ ಹಾಗೂ ಶಿವಯೋಗಿ ದ್ಯಾವಣ್ಣನವರ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ
ಹಾವೇರಿ: ನಿರ್ವಹಣೆ ಇಲ್ಲದೇ ನೀರಿನ ಘಟಕ ಬಂದ್-ಸವಾಲಾದ ಶುದ್ಧ ನೀರು ಪೂರೈಕೆ…
ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್ ರಂಗಮಂದಿರ ನಿರುಪಯುಕ್ತ
Haveri; ಪ್ರೀತಿ ವಿಚಾರಕ್ಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ
Haveri: ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.