ಜಮೀನು ಸಿಗದಿದ್ದರೆ ಸಾಮೂಹಿಕ ಆತ್ಮ ಹತ್ಯೆ ಎಚ್ಚರಿಕೆ
Team Udayavani, Aug 7, 2022, 5:30 PM IST
ಮುದ್ದೇಬಿಹಾಳ: ಗಂಗೂರ ಗ್ರಾಮದ ಮಾದಿಗ ಸಮಾಜದ ಕುಟುಂಬವೊಂದಕ್ಕೆ ಶತಮಾನದ ಹಿಂದೆ ನೀಡಿದ್ದ ಮಾರುತೇಶ್ವರ ದೇವಾಲಯದ ಚಾಕರಿ ಜಮೀನನ್ನು ಮಾದಿಗ ಸಮಾಜದ ಸ್ಮಶಾನಕ್ಕಾಗಿ ಬಳಸಲು ನೀಡಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದೊಂದಿಗೆ ವಿವಾದಿತ ಜಮೀನಿನಲ್ಲಿ ಮಾದಿಗ ಕುಟುಂಬದವರು ಶನಿವಾರದಿಂದ ಧರಣಿ ಪ್ರಾರಂಭಿಸಿದ್ದಾರೆ.
ಈ ಕುರಿತು ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದ್ದು ಈ ಜಮೀನಿಗೋಸ್ಕರ ನಡೆಸಿದ ಗಂಗೂರಿನಿಂದ ಮುದ್ದೇಬಿಹಾಳವರೆಗಿನ ಪಾದಯಾತ್ರೆ ಸೇರಿ ಕೆಲ ಹಂತದ ಹೋರಾಟಗಳನ್ನು ಉಲ್ಲೇಖೀಸಲಾಗಿದೆ. ಆ. 6ರ ಬೆಳಗ್ಗೆ 10:30ರಿಂದ ಆ. 14ರ ಮಧ್ಯರಾತ್ರಿ 12ರವರೆಗೆ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ. ಸೂಕ್ತ ಸ್ಪಂದನೆ ದೊರೆಯದಿದ್ದರೆ ಅಂದೇ ಮಧ್ಯರಾತ್ರಿ ಗ್ರಾಮದ ಮಾದಿಗ ಸಮಾಜದವರಿಂದ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಧರಣಿ ಸತ್ಯಾಗ್ರಹಕ್ಕೆ ಸೂಕ್ತ ಬಂದೋಬಸ್ತ್ ಒದಗಿಸಬೇಕು ಎಂದು ಕೋರಲಾಗಿದೆ. ಇದೇ ವಿಷಯವಾಗಿ ಆ. 10ರಿಂದ 14ರವರೆಗೆ ಗಂಗೂರ ಮತ್ತು ಮುದ್ದೇಬಿಹಾಳದಲ್ಲಿ ಏಕ ಕಾಲಕ್ಕೆ ದಲಿತ ಸಂಘಟನೆಗಳ ಒಕ್ಕೂಟದಿಂದ ಧರಣಿ ಸತ್ಯಾಗ್ರಹ ಆರಂಭಿಸಲಾಗುತ್ತದೆ. ಆ. 11ರಂದು ದಲಿತರ ಜಮೀನು ಖರೀದಿ ಕೊಟ್ಟವರಿಗೆ, ಖರೀದಿಸಿದವರಿಗೆ ಒಂದು ಹನಿ ರಕ್ತ ಸಂಗ್ರಹಿಸಿ ನೀಡಲಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಗಂಗೂರ ಗ್ರಾಮದ ರಿ.ಸ.ನಂ. 11/2, 11/3, 11/4 ಜಮೀನುಗಳನ್ನು ಸ್ಮಶಾನ ಎಂದು ಪರಿಗಣಿಸಬೇಕು. ಜಮೀನು ತೆಗೆದುಕೊಂಡವರಿಂದ ಸರ್ಕಾರ ಖರೀದಿಸಿ ಮರಳಿ ಮಾದಿಗ ಸಮಾಜಕ್ಕೆ ನೀಡಬೇಕು. ಖರೀದಿಸಿದ ವ್ಯಕ್ತಿ ಒಪ್ಪದಿದ್ದರೆ ಭೂಸ್ವಾ ಧೀನ ಮಾಡಿಕೊಂಡು ಮಾದಿಗ ಸಮಾಜಕ್ಕೆ ನೀಡಬೇಕು ಎನ್ನುವ ಹಕ್ಕೊತ್ತಾಯ ಈಡೇರಿಕೆಗೆ ಆಗ್ರಹಿಸಲಾಗಿದೆ.
ಡಿ.ಬಿ.ಮುದೂರ, ಮಂಗಳಪ್ಪ ಮುದೂರ, ಹನುಮಂತ ಮಾದರ, ಯಮನಪ್ಪ ಮಾದರ, ನಿಜವ್ವ ಮಾದರ, ಹುಲಗಪ್ಪ ಮಾದರ, ಬಸವರಾಜ ಮುದೂರ, ಹನುಮವ್ವ ಮಾದರ, ಗಂಗಪ್ಪ ಮಾದರ, ಆನಂದ ಮುದೂರ, ಕಟ್ಟಿಮನಿ ಮತ್ತಿತರರು ಗಂಗೂರಲ್ಲಿ ನಡೆದ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.