ಕಾಡಾನೆಗಳ ಹಾವಳಿ ತಡೆಗೆ ಸೌರಬೇಲಿ: ಪ್ರಥಮ ಹಂತಕ್ಕೆ ಇಂದು ಚಾಲನೆ
Team Udayavani, Aug 8, 2022, 6:30 AM IST
ಕುಂಬಳೆ: ಕಾಡಾನೆಗಳ ಹಾವಳಿಯನ್ನು ತಪ್ಪಿಸಲು ಕಾರಡ್ಕ ಬ್ಲಾಕ್ ಪಂಚಾಯತ್ ಆರಂಭಿಸಿದ ಸೌರ ವಿದ್ಯುತ್ ಆಧಾರಿತ ತಡೆಬೇಲಿ ಯೋಜನೆಯ ಪ್ರಥಮ ಹಂತದ ಕಾರ್ಯಗಳು ಆರಂಭಗೊಂಡಿವೆ.
ಕರ್ನಾಟಕದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ದೇಲಂಪಾಡಿ, ಕುತ್ತಿಕ್ಕೋಲ್ ಪಂಚಾಯತ್‌ಗಳ ಗಡಿಗಳಲ್ಲಿ 29 ಕಿ.ಮೀ. ಉದ್ದಕೆ ಸೌರಬೇಲಿ ನಿರ್ಮಿಸುವ ಯೋಜನೆ ಇದಾಗಿದೆ. ಪ್ರಥಮ ಹಂತದಲ್ಲಿ 8 ಕಿ.ಲೋ. ಮೀಟರ್ ಬೇಲಿ ನಿರ್ಮಿಸಲು ತೀರ್ಮಾನಿಸಲಾಗಿದೆ.
ದೇಲಂಪಾಡಿ ಪಂಚಾಯತ್ ವ್ಯಾಪ್ತಿಯ ಬಲ್ಲಕ್ಕಾನದಿಂದ ಒಲಿಯಕೊಚ್ಚಿಯ ವರೆಗೆ ಈಗಾಗಲೇ ಪೂರ್ಣಗೊಂಡಿರುವ 2.5 ಕಿ.ಮೀ. ವ್ಯಾಪ್ತಿಯ ಬೇಲಿಗೆ ಸೌರವಿದ್ಯುತ್ ಅನ್ನು ಸಂಪರ್ಕಿಸುವ ಕಾರ್ಯವನ್ನು ಆ. 8ರಂದು ಪೂರ್ವಾಹ್ನ 11 ಗಂಟೆಗೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್‌ವೀರ್ ಚಂದ್ ನಿರ್ವಹಿಸುವರು.
ಆ. 15ರೊಳಗೆ ಇನ್ನೂ 4 ಕಿ.ಮೀ. ಉದ್ದದ ಬೇಲಿಯ ನಿರ್ಮಾಣ ಪೂರ್ಣಗೊಳ್ಳಲಿದ್ದು, ಪರಿಸರದ ಮಂದಿ ಕಾಡಾನೆಗಳ ಹಾವಳಿಯಿಂದ ಮುಕ್ತರಾಗಬಹುದು ಎಂದು ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿಜಿ ಮಾಥ್ಯೂ, ಡಿವಿಜನಲ್ ಫಾರೆಸ್ಟ್ ಆಫೀಸರ್ ಪಿ. ಬಿಜು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbale: ಮೊಬೈಲ್ ಫೋನ್ ಕಳವು: ಆರೋಪಿ ಸೆರೆ
Kasaragodu: ಆದೂರು ಶ್ರೀಭಗವತಿ ದೈವಸ್ಥಾನ: 351 ವರ್ಷ ಬಳಿಕ ಪೆರುಂಕಳಿಯಾಟ ಸಂಭ್ರಮ
Kodagu: ಬ್ಯಾಂಕ್ ಅಧಿಕಾರಿಗಳು, ಜುವೆಲರಿ ಮಾಲಕರ ಜೊತೆ ಎಸ್‌ಪಿ ಸಭೆ
Madikeri: ಸೋಲಾರ್ ಅಂಗಡಿಯಿಂದ 2.16 ಲಕ್ಷ ರೂ. ಕಳವು: ಆರೋಪಿ ಬಂಧನ
Madikeri: ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಅಸ್ವಸ್ಥಗೊಂಡಿದ್ದ ಮಹಿಳೆ ಸಾವು