ಕೆಎಎಸ್ ಕನಸು ಕಂಡವಳಿಗೆ 59 ಲಕ್ಷ ರೂ. ವಂಚನೆ
Team Udayavani, Aug 8, 2022, 1:41 PM IST
ಬೆಂಗಳೂರು: ಕೆಎಎಸ್ ಪರೀಕ್ಷೆಯಲ್ಲಿ ಅನುಕೂಲಕರ ಅಂಕಗಳನ್ನು ನೀಡುವಂತೆ ಪರಿಚಿತ ಐಎಎಸ್ ಅಧಿಕಾರಿಗಳಿಗೆ ಶಿಫಾರಸು ಮಾಡಿಸಿ ತಹಶೀಲ್ದಾರ್ ಹುದ್ದೆ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಮಹಿಳೆಗೆ ಬರೊಬ್ಬರಿ 59.50 ಲಕ್ಷ ರೂ. ವಂಚಿಸಿದ್ದಾನೆ.
ಉತ್ತರ ಕರ್ನಾಟಕ ಮೂಲದ ಸಹಕಾರ ನಗರದ ನಿವಾಸಿ ಸವಿತಾ ಶಾಂತಪ್ಪ ಯಳಸಂಗೀಕರ್ ಕೊಟ್ಟ ದೂರಿನ ಆದಾರದ ಮೇಲೆ ವಿಜಯನಗರ ಠಾಣೆ ಪೊಲೀಸರು ಸಿದ್ದರಾಜ್ ಸುಭಾಷ್ ಚಂದ್ರ ಕಟ್ಟಿಮನಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಸ್ಫರ್ಧಾತ್ಮಕ ಪರೀಕ್ಷೆ ತರಬೇತಿಗಾಗಿ ಸವಿತಾ ವಿಜಯನಗರಕ್ಕೆ ಬಂದು ಪಿಜಿಯೊಂದರಲ್ಲಿ ವಾಸಿಸುತ್ತಿದ್ದರು. ಸ್ನೇಹಿತೆಯರ ಮೂಲಕ ಸವಿತಾಗೆ ಆರೋಪಿ ಸಿದ್ಧರಾಜು ಪರಿಚಯವಾಗಿತ್ತು. ನನಗೆ ಸಾಕಷ್ಟು ಮಂದಿ ಐಎಎಸ್ ಅಧಿಕಾರಿಗಳ ಪರಿಚಯವಿದ್ದು, ಅವರ ಮೂಲಕ ನಿಮಗೆ ಕೆಎಎಸ್ ಪರೀಕ್ಷೆಯಲ್ಲಿ ಅನುಕೂಲಕರ ಅಂಕಗಳನ್ನು ನೀಡುವಂತೆ ಶಿಫಾರಸು ಮಾಡಿಸಿ ತಹಶೀಲ್ದಾರ್ ಹುದ್ದೆ ಕೊಡಿಸುವುದಾಗಿ ನಂಬಿಸಿದ್ದ.
ಇದಕ್ಕೆ ಒಂದಿಷ್ಟು ಹಣ ಖರ್ಚಾಗುತ್ತದೆ ಎಂದು ಹೇಳಿದ್ದ. ಆತನ ಮಾತಿನ ಮೋಡಿಗೆ ಮರುಳಾದ ಸವಿತಾ ಹಣ ಕೊಡಲು ಒಪ್ಪಿದ್ದರು. ಆರೋಪಿ ಸಿದ್ದರಾಜು ಸೂಚನೆಯಂತೆ 2020 ಆಗಸ್ಟ್‌ನಿಂದ ಹಂತ-ಹಂತವಾಗಿ ಆತನ ತಂದೆ ಹಾಗೂ ಸ್ನೇಹಿತನ ಬ್ಯಾಂಕ್ ಖಾತೆಗೆ 15.50 ಲಕ್ಷ ರೂ. ವರ್ಗಾವಣೆ ಮಾಡಿದ್ದರು.
ಇಷ್ಟಕ್ಕೆ ಸುಮ್ಮನಾಗದ ಸಿದ್ದರಾಜು ಐಎಎಸ್ ಅಧಿಕಾರಿಗಳು ಇನ್ನಷ್ಟು ಹಣಕ್ಕೆ ಬೇಡಿಕೆಯಿಟ್ಟಿ ದ್ದಾರೆ. ಇನ್ನು 24 ಲಕ್ಷ ರೂ. ಕೊಟ್ಟರೆ ಕೆಲಸ ಗ್ಯಾರೆಂಟಿ ಎಂದು ಸವಿತಾಳನ್ನು ನಂಬಿಸಿದ್ದ. ಹೇಗಾದರೂ ಮಾಡಿ ಕೆಎಎಸ್ ಅಧಿಕಾರಿಯಾ ಗಬೇಕೆಂದು ಕನಸು ಕಂಡಿದ್ದ ಸವಿತಾ ಮತ್ತೆ ಆತನಿಗೆ 24 ಲಕ್ಷ ರೂ. ಕೊಟ್ಟಿದ್ದರು. ಬಳಿಕ ಹಲವು ಸಬೂಬುಗಳನ್ನು ಹೇಳಿದ್ದ ಆರೋಪಿ ಸವಿತಾ ಅವರಿಂದ ಪುನಃ 20 ಲಕ್ಷ ರೂ. ಲಪಟಾಯಿಸಿದ್ದ. ಒಟ್ಟು 59.50 ಲಕ್ಷ ರೂ. ಪಡೆದಿದ್ದ ಸಿದ್ಧರಾಜು ವರ್ಷ ಉರುಳಿದರೂ ಕೆಲಸವನ್ನೂ ಕೊಡಿಸದೆ ಹಣವನ್ನೂ ನೀಡದೆ ವಂಚಿಸಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.