ಸುಗ್ರೀವಾಜ್ಞೆಗಳನ್ನು ಪರಿಶೀಲಿಸದೇ ಸಹಿ ಹಾಕಲಾರೆ: ಕೇರಳ ರಾಜ್ಯಪಾಲ
Team Udayavani, Aug 8, 2022, 6:40 PM IST
ನವದೆಹಲಿ: ಕೇರಳ ಲೋಕಾಯುಕ್ತ (ತಿದ್ದುಪಡಿ) ಸೇರಿದಂತೆ ಹಲವಾರು ಸುಗ್ರೀವಾಜ್ಞೆಗಳ ಅವಧಿ ಸೋಮವಾರ ಮುಕ್ತಾಯಗೊಳ್ಳುತ್ತಿರುವಂತೆಯೇ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು “ಸುಗ್ರೀವಾಜ್ಞೆಗಳ ಕುರಿತು ಆಕ್ಷೇಪ’ ವ್ಯಕ್ತಪಡಿಸಿದ್ದಾರೆ.
ಒಂದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಈ ರೀತಿಯ ಆಡಳಿತ ಸರಿಯಾದುದಲ್ಲ ಎಂದು ಎಲ್‌ಡಿಎಫ್ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಅಷ್ಟೇ ಅಲ್ಲ, ನಾನು ಈ ಸುಗ್ರೀವಾಜ್ಞೆಗಳನ್ನು ಸಂಪೂರ್ಣವಾಗಿ ಪರಿಶೀಲಿಸದೇ ಅವುಗಳ ಮರು ಜಾರಿಗೆ ಒಪ್ಪಿಗೆ ನೀಡುವುದಿಲ್ಲ ಎಂದೂ ಆರಿಫ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಫೋರ್ಡ್ ಇಂಡಿಯಾ ಕಂಪನಿಯ ಸನಂದ್ ಸ್ಥಾವರ ಈಗ ಟಾಟಾ ತೆಕ್ಕೆಗೆ
ನಾನು “ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಸಮಿತಿ ಸಭೆಗೆಂದು ದೆಹಲಿಗೆ ಹೊರಟ ದಿನವೇ 13-14 ಸುಗ್ರೀವಾಜ್ಞೆಗಳನ್ನು ನನಗೆ ಕಳುಹಿಸಲಾಗಿದೆ. ಅವುಗಳನ್ನು ನೋಡಲು ನನಗೆ ಸಮಯ ಸಾಕಾಗುತ್ತಿಲ್ಲ. ಹಿಂದೆ-ಮುಂದೆ ಯೋಚಿಸದೇ ಸಹಿ ಹಾಕುವುದು ಸರಿಯೇ? ಪ್ರಜಾಪ್ರಭುತ್ವ ದೇಶದಲ್ಲಿ ಈ ರೀತಿ ಸುಗ್ರೀವಾಜ್ಞೆಗಳ ಮೂಲಕ ಆಡಳಿತ ನಡೆಸುವುದು ಸಮಂಜಸವಾದುದಲ್ಲ’ ಎಂದು ರಾಜ್ಯಪಾಲ ಖಾನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.