ಮಂಗಳವಾರದ ರಾಶಿ ಫಲ… ಇಲ್ಲಿವೆ ನಿಮ್ಮ ಗ್ರಹಬಲ
Team Udayavani, Aug 9, 2022, 7:21 AM IST
ಮೇಷ: ಆರೋಗ್ಯದಲ್ಲಿ ತೃಪ್ತಿ. ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಅವಿವಾಹಿತರಿಗೆ ವಿವಾಹ ಯೋಗ. ದೀರ್ಘ ಪ್ರಯಾಣ.ಧಾರ್ಮಿಕ ಕಾರ್ಯಗಳಲ್ಲಿ ನೇತೃತ್ವ. ಗುರು ಹಿರಿಯರಲ್ಲಿ ಪ್ರೀತಿ ವಿಶ್ವಾಸ ವೃದ್ಧಿ. ಅನಿರೀಕ್ಷಿತ ಧನ ಲಾಭ.
ವೃಷಭ: ಆರೋಗ್ಯ ವಿಚಾರದಲ್ಲಿ ಉದಾಸೀನತೆ ಸಲ್ಲದು. ಉದ್ಯೋಗ ವ್ಯವಹಾರಗಳಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಗುರು ಹಿರಿಯರ ಮಾರ್ಗದರ್ಶನದ ಲಾಭ. ವಿದ್ಯಾರ್ಥಿಗಳಿಗೆ ಆಳವಾದ ಜ್ಞಾನ ಸಂಪಾದನೆಗೆ ಅವಕಾಶ.
ಮಿಥುನ: ನೂತನ ಮಿತ್ರರ ಸಮಾಗಮ. ನಷ್ಟ ದೃವ್ಯ ಲಭಿಸುವ ಕಾಲ. ಪಾಲುದಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ದಾಂಪತ್ಯ ಸುಖ ವೃದ್ಧಿ. ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆ. ದೀರ್ಘ ಪ್ರಯಾಣ ಸಂಭವ. ಉತ್ತಮ ಧನಾರ್ಜನೆ.
ಕರ್ಕ: ಹಠ ಪ್ರವೃತ್ತಿಯಿಂದ ತೊಂದರೆ ಸಾಧ್ಯ. ಅನಗತ್ಯ ವಿಚಾರಗಳಿಗೆ ಕಿವಿಕೊಡದಿರಿ. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡಿ. ಆಸ್ತಿ ವಿಚಾರದಲ್ಲಿ ಮುನ್ನಡೆ ತೋರಿತು. ಪರಿಶ್ರಮದಿಂದ ಕೂಡಿದ ಉದ್ಯೋಗದಿಂದ ದೇಹಾಯಾಸ ಸಂಭವ.
ಸಿಂಹ: ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ನಿಖರತೆ. ಚುರುಕುತನ ಲೆಕ್ಕಾಚಾರ ಸ್ವಭಾವದಿಂದ ನಿರೀಕ್ಷಿತ ಸ್ಥಾನ ಅಧಿಕಾರ ಲಭ್ಯ. ಧನಾರ್ಜನೆ ಮಧ್ಯಮ. ಬಂಧು ಮಿತ್ರರ ಸಹಕಾರ. ಹಿರಿಯರ ಆರೋಗ್ಯ ಗಮನಿಸಿ.
ಕನ್ಯಾ: ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಸಣ್ಣ ಪ್ರಯಾಣ ಸಂಭವ. ಅವಿವಾಹಿತರಿಗೆ ಉತ್ತಮ ಸಂಬಂಧ ಒದಗುವ ಕಾಲ. ನಿರೀಕ್ಷೆಗೂ ಮೀರಿದ ಧನಾರ್ಜನೆ. ಹಿರಿಯರ ಆರೋಗ್ಯ ಸದೃಢ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ.
ತುಲಾ: ಸ್ವಂತ ಪರಿಶ್ರಮ ಬುದ್ಧಿವಂತಿಕೆಯಿಂದ ಕೂಡಿದ ಕಾರ್ಯವೈಖರಿಯಲ್ಲಿ ಸಫಲತೆ. ಗಣ್ಯರಿಂದ ಮನ್ನಣೆ. ಆತ್ಮೀಯರಿಗೆ ಪ್ರೀತಿ ಪಾತ್ರರಾಗುವ ಸಂದರ್ಭ. ಸಾಂಸಾರಿಕ ಸುಖ ವೃದ್ಧಿ. ಭೂಮ್ಯಾದಿ ವಿಚಾರಗಳಲ್ಲಿ ವಿಳಂಭ ಇತ್ಯಾದಿ ಫಲ.
ವೃಶ್ಚಿಕ: ದೈರ್ಯ ಪರಾಕ್ರಮ ಶೌರ್ಯ ಆತ್ಮಸ್ಥೆರ್ಯದಿಂದ ಕೂಡಿದ ಚಟುವಟಿಕೆ. ಸ್ವಾಭಿಮಾನ ಗುಣದಿಂದ ಗೌರವ ಆದರಾದಿ ಸುಖ ವೃದ್ಧಿ. ಸಣ್ಣ ಸಂಚಾರ ಸಂಭವ. ಗೃಹದಲ್ಲಿ ಸಂತಸದ ವಾತಾವರಣ.
ಧನು: ಪ್ರಯಾಣದಿಂದ ದೇಹಾಯಾಸ ಸಂಭವ. ದೂರದ ವ್ಯವಹಾರಗಳಿಂದ ಧನಾರ್ಜನೆ ವೃದ್ಧಿ. ದಾಂಪತ್ಯ ಸುಖ ತೃಪ್ತಿದಾಯಕ. ಅಧ್ಯಯನ ಪ್ರವೃತ್ತರಿಗೆ ಉತ್ತಮ ವಾತಾವರಣ ನಿರ್ಮಾಣ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.
ಮಕರ: ನಾಯಕತ್ವ ಗುಣ ವೃದ್ಧಿ. ಸಹೋದರ ಸಮಾನರಿಂದ ಸಂದಭೋìಚಿತ ಸಹಾಯ ಸಹಕಾರ. ಪ್ರಯಾಣದಿಂದ ಲಾಭ. ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಅವಿವಾಹಿತರಿಗೆ ಉತ್ತಮ ಸಂಬಂಧ ಒದಗುವ ಸಮಯ.
ಕುಂಭ: ಅಧ್ಯಯನಶೀಲತೆ. ಉದ್ಯೋಗ ವ್ಯವಹಾರಗಳಲ್ಲಿ ಅಧಿಕ ಧನಾರ್ಜನೆ ಆದರೂ ಪರರಿಗೆ ಸಹಾಯ ಮಾಡುವಾಗ ಪೂರ್ವಾಪರ ವಿಚಾರ ತಿಳಿದು ನಿರ್ಣಯಿಸಿ. ಗೃಹೋಪಕರಣ ವಸ್ತು ಸಂಗ್ರಹ. ಗುರು ಹಿರಿಯರ ಆರೋಗ್ಯ ವೃದ್ಧಿ. ಹೆಚ್ಚಿದ ದೈಹಿಕ ಶ್ರಮ. ಆಸ್ತಿ ವಿಚಾರದಲ್ಲಿ ಮುನ್ನಡೆ.
ಮೀನ: ಮಾನಸಿಕ ಸಂತುಷ್ಟತೆಗೆ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಿ. ಅನಗತ್ಯ ವಿಚಾರಗಳಿಗೆ ಒಲವು ತೋರದಿರಿ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ. ದೇವತಾ ಸ್ಥಳ ಸಂದರ್ಶನ. ಸಹೋದರಾಗಿ ವರ್ಗದವರಿಂದ ಸಹಾಯ. ದಾಂಪತ್ಯ ಸುಖ ವೃದ್ಧಿ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ. ಆತ್ಮೀಯರೊಂದಿಗೆ ಸಂತಸದ ಕ್ಷಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
MUST WATCH
ಹೊಸ ಸೇರ್ಪಡೆ
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.