ದೇಶವನ್ನು ಕೃಷಿ ಪ್ರಧಾನ ರಾಷ್ಟ್ರವಾಗಿಸಿ ವಿಶ್ವಕ್ಕೆ ಮಾದರಿಯಾಗಿಸಬೇಕು: ಗೋಪಾಲ್ ಶೆಟ್ಟಿ
Team Udayavani, Aug 9, 2022, 11:18 AM IST
ಮುಂಬಯಿ: ದೊಡ್ಡಮಟ್ಟದ ಕೃಷಿ ಕ್ರಾಂತಿ ಯೋಜನೆಯೊಂದಿಗೆ ಶಾಸಕ ರಘುಪತಿ ಭಟ್ ಅವರು ರಾಜ್ಯದಲ್ಲಿ ಸಮೂಹ ಕೃಷಿ ಮಾಡಿದ ಪರಿಕಲ್ಪನೆ ರಾಷ್ಟ್ರಕ್ಕೇ ಮಾದರಿಯಾಗಿದೆ. ಇವರ ಪರಿಕಲ್ಪನೆಯನ್ನು ದೇಶದ ಎಲ್ಲ ರೈತರು ಸ್ವೀಕರಿಸಿ ಭಾರತವನ್ನು ಕೃಷಿ ಪ್ರಧಾನ ರಾಷ್ಟ್ರವಾಗಿಸಿ ವಿಶ್ವಕ್ಕೆ ಮಾದರಿಯಾಗಿಸಬೇಕು. ಎಂದೆರಡು ದಶಕಗಳ ಬಳಿಕ ನಮ್ಮ ರಾಷ್ಟ್ರದ ಕೃಷಿ ಕ್ರಾಂತಿ ಬಗ್ಗೆ ಅಧ್ಯಾಯನ ಮಾಡಿದಾಗ ನಿಜವಾಗಿಯೂ ರಘುಪತಿ ಭಟ್ ಅವರ ಹೆಸರು ಮೇಲ್ಪಂಕ್ತಿಯಲ್ಲಿ ಗೋಚರಿಸುತ್ತದೆ. ದೇಶದ 75 ವರ್ಷಗಳ ಇತಿಹಾಸ ಕಂಡಾಗ ಹಿಂದೆ ನಾವು ಕೃಷಿ ಪ್ರಧಾನ ಆಹಾರಗಳನ್ನು ಆಮದು ಮಾಡುತ್ತಿದ್ದು, ಇತ್ತೀಚಿನ ವರ್ಷಗಳಿಂದ ರಫ್ರು ಮಾಡುತ್ತಿದ್ದೇವೆ. ಇದೇ ರಾಷ್ಟ್ರದ ಕೃಷಿ ಕ್ಷೇತ್ರದ ಹಸಿರು ಕ್ರಾಂತಿಯಾಗಿದೆ. ಜಾಗತಿಕ ಸಮಸ್ಯೆಗಳೇ ಕೃಷಿಕರ ಸಂಕಷ್ಟಕ್ಕೆ ಕಾರಣವಾಗಿದ್ದರೂ ಇಂದು ಭಾರತೀಯ ಕೃಷಿಕರು ಲಾಭದಲ್ಲಿದ್ದಾರೆ. ಅಂದೋಲನದಿಂದ ದೇಶವು ವಿನಾಶದತ್ತ ಸಾಗುತ್ತಿದ್ದು ಇದರ ನಿವಾರಣೆಗೆ ಕೃಷಿ ಪ್ರಧಾನ ಎಂಬುವುದು ಮದ್ದಾಗಿದೆ. ಜಾಗ ಒದಗಿಸಿದ ಜನರ ವಿಶ್ವಾಸಕ್ಕೆ ವಂದಿಸುವೆ. ಇದು ವಿಶ್ವಾಸದ ಭರವಸೆಯಾಗಿದೆ ಎಂದು ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ. ಶೆಟ್ಟಿ ತಿಳಿಸಿದರು.
ರವಿವಾರ ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಕೇದಾರೋತ್ಥಾನ ಟ್ರಸ್ಟ್ ಉಡುಪಿ ಮತ್ತು ಕೇದಾರೋತ್ಥಾನ ರೈತ ಉತ್ಪಾದಕರ ಸಂಸ್ಥೆ ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಹಮ್ಮಿಕೊಂಡಿರುವ “ಹಡಿಲು ಭೂಮಿ ಕೃಷಿ’ ಆಂದೋಲನದಡಿ ಬೆಳೆದ “ಉಡುಪಿ ಕೇದಾರ ಕಜೆ’ ಸಾವಯವ ಕುಚ್ಚಲಕ್ಕಿ ಮುಂಬಯಿ ಮಹಾನಗರದ ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಮಾತನಾಡಿ ಶುಭಹಾರೈಸಿದರು.
ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಕೇದಾರೋತ್ಥಾನ ಟ್ರಸ್ಟ್‌ನ ಅಧ್ಯಕ್ಷ ಕೆ. ರಘುಪತಿ ಭಟ್ ಸಾರಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಶಾಸಕ ರಾಜ್‌ಹಂಸ್ ಸಿಂಗ್ ಅವರು ಮಾತನಾಡಿ, ಈ ಹಸಿರು ಕ್ರಾಂತಿ ಮುಂಬರುವ ದಿನಗಳಲ್ಲಿ ರಾಷ್ಟ್ರವ್ಯಾಪ್ತಿಯಾಗಲಿದೆ. ಈ ಮೂಲಕ ರಾಷ್ಟ್ರದಲ್ಲಿನ ಬಂಜರು ಭೂಮಿ ಭವಿಷ್ಯದಲ್ಲಿ ಕೃಷಿ ಪ್ರಧಾನವಾಗಲಿವೆ. ಕೊರೊನಾ ಕಾಲದಲ್ಲಿ ಎಲ್ಲರೂ ಚಿಂತೆಯಿಂದ ಕಾಲಕಳೆದರೆ ರಘುಪತಿ ಭಟ್ ಅವರು ಹಸಿರುಕ್ರಾಂತಿಯ ಮೂಲಕ ರಾಷ್ಟ್ರದ ಸಮೃದ್ಧಿಗೆ ಶ್ರಮಿಸಿದ ಫಲವೇ ಇದಾಗಿದೆ ಎಂದು ತಿಳಿಸಿದರು.
ಕೇದಾರೋತ್ಥಾನ ಉತ್ಪಾದನೆ ತುಳುನಾಡ ಸಾಭೌಗ್ಯ. ಭೂಮಿ ವರ ಕೊಡುತ್ತಿದೆ ಎನ್ನುವಂತೆ ಈ ಕಜೆಅಕ್ಕಿ ವರವಾಗಿ ಫಲಿಸಿದೆ. ಅಂದು ಭೂಮಿ ಕಳಕೊಂಡು ಮುಂಬಯಿ ಸೇರಿ ಉದ್ಯಮಿಗಳಾದವರು ಇಂದು ಮತ್ತೆ ತವರೂರುರಲ್ಲಿ ಕೃಷಿ ಮಾಡುತ್ತಿರುವುದು ಅಭಿನಂದನೀಯ ಎಂದು ಕೃಷಿಯ ಪ್ರತ್ಯಕ್ಷದರ್ಶಿ ರತ್ನಾಕರ ಹೆಗ್ಡೆ ಮಟ್ಟಾರು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ರತ್ನಾಕರ ಹೆಗ್ಡೆ ಮಟ್ಟಾರು, ಮುಂಬಯಿಯಲ್ಲಿನ ವಿವಿಧ ಸಮುದಾಯಗಳ, ಸಂಘ ಸಂಸ್ಥೆಗಳ ಮುಖ್ಯಸ್ಥರಾದ ಹರೀಶ್ ಜಿ. ಅಮೀನ್, ಡಾ| ಸುರೇಶ್ ಎಸ್. ರಾವ್ ಕಟೀಲು, ಪದ್ಮನಾಭ ಎಸ್. ಪಯ್ಯಡೆ, ಸುಧಾಕರ್ ಎಸ್. ಹೆಗ್ಡೆ, ಡಾ| ಆರ್. ಕೆ. ಶೆಟ್ಟಿ, ರವಿ ಎಸ್. ಶೆಟ್ಟಿ ಸಾಯಿ ಪ್ಯಾಲೇಸ್, ಶಿವಾನಂದ ಡಿ. ಶೆಟ್ಟಿ ಆಹಾರ್, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ, ಉಮಾ ಕೃಷ್ಣ ಶೆಟ್ಟಿ, ಧರ್ಮಪಾಲ್ ಯು. ದೇವಾಡಿಗ, ಗುಣಪಾಲ್ ಆರ್. ಶೆಟ್ಟಿ ಐಕಳ, ಬಿಜೆಪಿ ಧುರೀಣರಾದ ಸಂತೋಷ್ ಶೆಟ್ಟಿ ಭಿವಂಡಿ, ಮಾಜಿ ನಗರ ಸೇವಕ ಶಿವಾನಾಂದ ಶೆಟ್ಟಿ, ಮುಂಡಪ್ಪ ಎಸ್. ಪಯ್ಯಡೆ, ಶಾಂತಾರಾಮ ಬಿ. ಶೆಟ್ಟಿ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ರಮೇಶ್ ಎನ್. ಶೆಟ್ಟಿ, ಎನ್. ಬಿ. ಶೆಟ್ಟಿ, ಕೆ. ಸಿ. ಶೆಟ್ಟಿ ಐಬಿಸಿಸಿ, ಕೇದಾರೋತ್ಥಾನ ಟ್ರಸ್ಟ್‌ನ ಕೋಶಾಧಿಕಾರಿ ಕೆ. ರಾಘವೇಂದ್ರ ಕಿಣಿ, ಟ್ರಸ್ಟಿಗಳಾದ ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಬಿರ್ತಿ ರಾಜೇಶ್ ಶೆಟ್ಟಿ, ಸದಸ್ಯರುಗಳಾದ ಚೇರ್ಕಾಡಿ ಉಮೇಶ್ ನಾಯಕ್, ಚೇರ್ಕಾಡಿ ಹರೀಶ್ ಶೆಟ್ಟಿ, ನಗರ ಸಭೆಯ ಸ್ಥಾು ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಾರ್ಯಕ್ರಮದ ಪ್ರಧಾನ ಸಂಘಟಕ, ತುಳು ಕನ್ನಡಿಗರ ಅಭಿಮಾನಿ ಬಳಗದ ಸಂಚಾಲಕ ಎರ್ಮಾಳ್ ಹರೀಶ್ ಶೆಟ್ಟಿ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೇದಾರೋತ್ಥಾನದ ರೈತರ ಸೇವೆ, ನಿರಂತರ ಶ್ರಮದ ಕೃಷಿ ಕಾಯಕದ ಬಗ್ಗೆ ಸಾûಾÂಚಿತ್ರ ಪ್ರದರ್ಶಿಸಿ ಉಡುಪಿ ಕೇದಾರ ಕಜೆ ಉತ್ಪಾದನೆ ಬಗ್ಗೆ ಮಾಹಿತಿ ನೀಡಲಾಯಿತು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಶಾಸಕ ಸಿ. ಟಿ. ರವಿ ಅವರ ಸಂದೇಶವನ್ನು ಭಿತ್ತರಿಸಲಾಯಿತು. ಅಂತೆಯೇ ಚಂದ್ರಹಾಸ ಕೆ. ಶೆಟ್ಟಿ ಅವರು ಕ್ಯಾಶ್ ಆನ್ ಡೆಲಿವೆರಿ ಮೂಲಕ ಮೊದಲ ಗ್ರಾಹಕರಾಗಿ ಅಮೆಝೋನ್‌ನಲ್ಲಿ ಉಡುಪಿ ಕೇದಾರ ಕಜೆ ಅಕ್ಕಿ ಖರೀದಿಸುವುದಕ್ಕೆ ಚಾಲನೆ ನೀಡಿದರು.
ಸಂಸದ ಗೋಪಾಲ್ ಶೆಟ್ಟಿ ಅವರು ಮುಂಬಯಿಯ ಹಿರಿಯಕ್ಕ ಡಾ| ಸುನೀತಾ ಎಂ. ಶೆಟ್ಟಿ ಅವರಿಗೆ ಕುಚ್ಚಲಕ್ಕಿ ನೀಡಿ ಮುಂಬಯಿ ಮಹಾನಗರದ ಮಾರುಕಟ್ಟೆ ಬಿಡುಗಡೆಗೊಳಿಸಿದರು. ಬಳಿಕ ಹೊಟೇಲ್ ಪ್ರಧಾನವಾಗಿಸಿ ಆಹಾರ್‌ನ ಅಧ್ಯಕ್ಷ ಶಿವಾನಂದ ಡಿ. ಶೆಟ್ಟಿ ಹಾಗೂ ತುಳುವರ ಅಚ್ಚುಮೆಚ್ಚಿನ ಆಹಾರ ಕಜೆ ಅಕ್ಕಿಯಾಗಿಸಿ ಅಖೀಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ ಇವರಿಗೆ ಅಕ್ಕಿಚೀಲಗಳನ್ನು ವಿತರಿಸಿ ಉಡುಪಿ ಕುಚ್ಚಲಕ್ಕಿಗೆ ಶುಭಹಾರೈಸಿದರು.
ಜಯ ಶೆಟ್ಟಿ ಮೂಡುಬೆಳ್ಳೆ ಇವರ ರೈತಗೀತೆಯೊಂದಿಗೆ ಸಮಾರಂಭ ಪ್ರಾರಂಭಗೊಂಡಿತು. ಶೈಲಜಾ ಶೆಟ್ಟಿ ಪ್ರಾರ್ಥನೆಗೈದು ಪಾಡಾªನ ಹಾಡಿದರು. ಎರ್ಮಾಳ್ ಹರೀಶ್ ಶೆಟ್ಟಿ ಸ್ವಾಗತಿಸಿದರು. ಶಾಸಕ ರಘುಪತಿ ಭಟ್ ಪ್ರಸ್ತಾವನೆಗೈದು ಅತಿಥಿಗಳನ್ನು ಶಾಲು ಹೊದೆಸಿ, ಪುಷ್ಪಗುಚ್ಚವನ್ನಿತ್ತು ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು. ಅಶೋಕ್ ಪಕ್ಕಳ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕೆ. ರಾಘವೇಂದ್ರ ಕಿಣಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲಾಜತ್ತು ಮುಂಬಯಿ ಇದರ ಕಲಾವಿದರಿಂದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ತೋನ್ಸೆ ವಿಜಯಕುಮಾರ್ ಶೆಟ್ಟಿ ಅವರ ನಿರ್ದೇಶನದಲ್ಲಿ ತುಳು ನಾಟಕ ಪ್ರದರ್ಶನಗೊಂಡಿತು. ಉಡುಪಿ ಹಡೀಲು ಭೂಮಿಯಲ್ಲಿ ಬೆಳೆಸಿದ ಕಜೆ ಅಕ್ಕಿಯ ಸ್ವಾದಿಷ್ಟ ರುಚಿಯ ಭೋಜನದೊಂದಿಗೆ ಸಮಾರಂಭ ಸಮಾಪನಗೊಂಡಿತು.
ಇಷ್ಟೊಂದು ಕಿಕ್ಕಿರಿದು ತುಂಬಿದ ಸಭಾಗೃಹವು ಕೃಷಿಗೆ ಸಂದ ಗೌರವವಾಗಿದೆ. ತುಳುನಾಡಿನ ಕೃಷಿ ಪ್ರಧಾನ್ಯತೆಗೆ ಛಾಪು ಮೂಡಿಸಿದ ಸಡಗರವೂ ಇದಾಗಿದೆ. ಪಾಡಾªನ, ರೈತ ಗೀತೆಯೊಂದಿಗೆ ಸಂಸ್ಕೃತಿಯನ್ನು ಬಿಂಬಿಸಿ ರೈತರಲ್ಲಿ ಪ್ರೇರಣೆಯ ಹುಮ್ಮಸ್ಸು ನೀಡಿದ ಕಾರ್ಯಕ್ರಮವಾಗಿದೆ. ಊರಲ್ಲಿ ಕೇಳಲು ಸಿಗದ ಪಾಡ್ದನ ಮುಂಬಯಿಯಲ್ಲಿ ಕೇಳಿ ಅಭಿಮಾನವಾಗುತ್ತಿದೆ. ಸಾವಿರಾರು ಸಂಖ್ಯೆಯ ಸಂಘಟಕರ ಶ್ರಮದ ಫಲ ಉಡುಪಿ ಕೇದಾರ ಕಜೆ ಅಕ್ಕಿಯಾಗಿದೆ. ತುಳುನಾಡ ಸಂಸ್ಕೃತಿ ಉಳಿಸಿದ ಬೆಳೆಸಿದ ಕೀರ್ತಿ ಮುಂಬಯಿ ತುಳುವರದ್ದಾಗಿದೆ. ಕೃಷಿ ಅಗತ್ಯತೆ ಅರಿತು ಬದಲಾವಣೆಯೊಂದಿಗೆ ಈ ಯೋಜನೆಯನ್ನು ಅಭಿಮಾನವಾಗಿ ಆರಂಭಿಸಿ ಇಂದು ವಿಷಮುಕ್ತ ಆಹಾರವಾಗಿಸಿ ಸಂಪೂರ್ಣ ಸಾವಯವ ಕೃಷಿಯನ್ನಾಗಿಸಿ ವಿಶ್ವಮಾನ್ಯತೆಯ ಬ್ರ್ಯಾಂಡ್ ಗೆ ಪಾತ್ರವಾಗಿರುವುದು ಕೃಷಿಗೆ ಸಂದ ಗೌರವ. ಈ ಬ್ರ್ಯಾಂಡ್ ನ ಕುಚ್ಚಲಕ್ಕಿ ಇಂದು ಅಮೆಜಾನ್‌ನಲ್ಲೂ ಲಭ್ಯವಾಗಿರುವುದು ಸುದೈವ. ಇನ್ನು ಹಡಿಲು ಭೂಮಿ ಖಾಲಿ ಬಿಡಲು ಬಿಡೆವು. ಈ ಮೂಲಕ ಕೃಷಿ ಲಾಭದಾಯಕ ಆಗುವಂತೆ ನಿರಂತರ ಪ್ರಯತ್ನ ಮುನ್ನಡೆಸಲಿದ್ದೇವೆ.-ರಘುಪತಿ ಭಟ್ ಉಡುಪಿ ಶಾಸಕರು
-ಚಿತ್ರ-ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.