ಗಿರೀಶ ಕಂಬಾನೂರ ಮನೆಗೆ ಖರ್ಗೆ ಭೇಟಿ
Team Udayavani, Aug 9, 2022, 2:55 PM IST
ಶಹಾಬಾದ: ಇತ್ತೀಚೆಗಷ್ಟೆ ನಗರದ ರೇಲ್ವೆ ನಿಲ್ದಾಣದಲ್ಲಿ ಭೀಕರ ಕೊಲೆಯಾದ ಕಾಂಗ್ರೆಸ್ ಮುಖಂಡ, ನಗರಸಭೆಯ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ ಅವರ ಮನೆಗೆ ಶುಕ್ರವಾರ ಚಿತ್ತಾಪೂರ ಶಾಸಕ ಪ್ರಿಯಾಂಕ್ ಖರ್ಗೆ ಅವರು ಭೇಟಿ ನೀಡಿ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ನನ್ನ ಗಂಡನನ್ನು, ಭಾವನನ್ನು ಕೊಂದ ಆರೋಪಿಗಳು ಮೈದುನನ್ನು ಕೊಲ್ಲುತ್ತೇವೆ ಎಂದು ಬೆದರಿಕೆ ದ್ದಾರೆ. ಇದರಿಂದ ಭಯ ಉಂಟಾಗಿ, ಮನೆಯಿಂದ ಹೊರಗಡೆ ಹೋಗದಂತಾಗಿದೆ. ಬಾಗಿಲು ಮುಚ್ಚಿಕೊಂಡು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಪ್ರಿಯಾಂಕ್ ಖರ್ಗೆ ಅವರ ಮುಂದೆ ಕಣ್ಣೀರಿಟ್ಟರು.
ನಂತರ ಮಾತನಾಡಿದ ಗಿರೀಶ ತಾಯಿ ಸರೋಜಾಬಾಯಿ, ನನ್ನ ಮಗ ಏನು ತಪ್ಪು ಮಾಡಿದ್ದ ಅಂತ ಹೀಂಗ್ ಮಾಡ್ಯಾರ್ ರೀ. ಅವನ್ ಸುತ್ತಮುತ್ತಾ ನೂರಾರು ಮಂದಿ ಇದ್ರೂ ಯಾರು ಉಳಿಸಲಿಕ್ಕ ಒಬ್ಬರೂ ಬರಲಿಲ್ಲ ರಿ. ಅವನ್ ಎತ್ತಲೂ ಯಾರೂ ಸಮೀಪ ಬಂದಿಲ್ಲರಿ. ಈಗ ಬೆದರಿಕೆ ಹೋಗ್ಯಾನ್. ಅಂಜಿಕಿ ಆಗ್ಯಾದ. ಅಂಜಿ ಅಂಜಿ ಬದುಕಬೇಕ್ಯಾದ. ರಾತ್ರಿ ನಿದ್ದಿಯಲ್ಲ. ಊಟ ಸೇರುತ್ತಿಲ್ಲ. ಹೇಂಗ್ ಮಾಡೋದು ತಿಳಿವಲುª. ನಮಗ ನ್ಯಾಯ ಕೊಡಸ್ರಿ ಎಂದು ಕಣ್ಣೀರುದರು.
ಗಿರೀಶ ಭಾವಚಿತ್ರಕ್ಕೆ ಹೂಗಳನ್ನು ಶ್ರದ್ಧಾಂಜಲಿ ಅರ್ಪಿಸಿದ ಪ್ರಿಯಾಂಕ್ ಖರ್ಗೆ, ಯಾವುದಕ್ಕೂ ಭಯಪಡಬೇಡಿ. ಈಗಾಗಲೇ ಉನ್ನತ ಅಧಿ ಕಾರಿಗಳೊಂದಿಗೆ ಮಾತನಾಡಿದ್ದೇನೆ. ಎಲ್ಲ ರೀತಿಯ ಕ್ರಮಕೈಗೊಳ್ಳಲು ತಿಳಿಸಿದ್ದೇನೆ. ಅಪರಾಧಿ ಗಳಿಗೆ ತಕ್ಕ ಶಿಕ್ಷೆ ಆಗಲಿದೆ. ಧೈರ್ಯದಿಂದ ಇರಿ ಎಂದು ಸಾಂತ್ವನದ ಮಾತುಗಳನ್ನು ಆಡಿದರು.
ತಹಶೀಲ್ದಾರ್ ಸುರೇಶ ವರ್ಮಾ, ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ ಮರತೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ| ರಶೀದ್ ಮರ್ಚಂಟ್, ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪೂರಕರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ ಹೊನಗುಂಟಿ, ಜಿಲ್ಲಾ ವಕ್ತಾರ ಪೀರಪಾಶಾ, ರಾಜೇಶ್ ಯನಗುಂಟಿಕರ್, ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ ಚವ್ಹಾಣ, ಮಲ್ಲಿಕಾರ್ಜುನ ವಾಲಿ, ಡಾ| ಅಹ್ಮದ್ ಪಟೇಲ್, ಕುಮಾರ ಚವ್ಹಾಣ, ಮಾಣಿಕ್‌ಗೌಡ, ಶಿವಕುಮಾರ ನಾಟೇಕಾರ, ದೇವೇಂದ್ರ ಕಾರೊಳ್ಳಿ, ನಾಗರಾಜ ಕರಣಿಕ್, ತಿಪ್ಪಣ್ಣ ನಾಟೇಕಾರ, ಫಜಲ್ ಪಟೇಲ್, ಸ್ನೇಹಲ್ ಜಾಯಿ, ನಾಗೇಂದ್ರ ನಾಟೇಕಾರ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.