ಚೆಸ್ ಒಲಿಂಪಿಯಾಡ್: ಮುಕ್ತ ವಿಭಾಗ: ಭಾರತ “ಬಿ’ ತಂಡಕ್ಕೆ ಕಂಚು
Team Udayavani, Aug 10, 2022, 7:55 AM IST
ಮಮಲ್ಲಪುರಂ: ಭಾರತ “ಬಿ’ ತಂಡವು 44ನೇ ಚೆಸ್ ಒಲಿಂಪಿಯಾಡ್‌ನ ಮುಕ್ತ ವಿಭಾಗದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ. ಭಾರತ “ಎ’ ವನಿತಾ ತಂಡವೂ ಮೂರನೇ ಸ್ಥಾನ ಪಡೆದಿದೆ.
ಅಂತಿಮ ಸುತ್ತಿನ ಹೋರಾಟದಲ್ಲಿ ಭಾರತ “ಬಿ’ ತಂಡವು ಜರ್ಮನಿ ತಂಡವನ್ನು 3-1 ಅಂತರದಿಂದ ಸೋಲಿಸಿದೆ. “ಬಿ’ ತಂಡವು ಒಟ್ಟಾರೆ 18 ಅಂಕ ಗಳಿಸಿ ಈ ಸಾಧನೆ ಮಾಡಿತು. ಚೆಸ್ ಒಲಿಂಪಿಯಾಡ್‌ನಲ್ಲಿ ಇದು ಭಾರತಕ್ಕೆ ಸಿಕ್ಕಿದ ಎರಡನೇ ಕಂಚಿನ ಪದಕವಾಗಿದೆ. 2014ರ ಋತುವಿನಲ್ಲೂ ಭಾರತ ಕಂಚು ಜಯಿಸಿತ್ತು.
ಮುಕ್ತ ವಿಭಾಗದಲ್ಲಿ ಉಜ್ಬೆಕಿಸ್ಥಾನ ತಂಡವು ನೆದರ್ಲೆಂಡ್ ತಂಡವನ್ನು 2-1 ಅಂತರದಿಂದ ಉರುಳಿಸಿ ಚಿನ್ನದ ಪದಕ ಗೆದ್ದು ಆಶ್ಚರ್ಯಗೊಳಿಸಿದೆ. ಈ ವಿಭಾಗದಲ್ಲಿ ಬಲಿಷ್ಠ ಅಮೆರಿಕ ತಂಡವಿದ್ದರೂ ಉಜ್ಬೆಕಿಸ್ಥಾನ ಚಿನ್ನ ಗೆದ್ದದ್ದು ವಿಶೇಷವಾಗಿದೆ. ಅಮೆರಿಕ ಅಂತಿಮ ಸುತ್ತಿನಲ್ಲಿ ಸ್ಪೇನ್ ತಂಡವನ್ನು 2.5-1.5 ಅಂತರದಿಂದ ಸೋಲಿಸಿತ್ತು. ಉತ್ತಮ ಟೈಬ್ರೇಕ್ ಅಂಕದ ಆಧಾರದಲ್ಲಿ ಉಜ್ಬೆಕಿಸ್ಥಾನವು ಅರ್ಮೆನಿಯಾ ತಂಡವನ್ನು ಹಿಂದಿಕ್ಕಿ ಚಿನ್ನ ಜಯಿಸಿದೆ. 11 ಸುತ್ತುಗಳ ಹೋರಾಟದಲ್ಲಿ ಉಜ್ಬೆಕಿಸ್ಥಾನ 19 ಅಂಕ ಗಳಿಸಿತ್ತು.
ಭಾರತ “ಎ’ ತಂಡಕ್ಕೆ 3ನೇ ಸ್ಥಾನ
ಅಗ್ರ ಶ್ರೇಯಾಂಕದ ಭಾರತ “ಎ’ ವನಿತಾ ತಂಡವು 11ನೇ ಸುತ್ತಿನಲ್ಲಿ ಅಮೆರಿಕ ವಿರುದ್ಧ 1-3 ಅಂತರದಿಂದ ಸೋತು ಆಘಾತಕ್ಕೆ ಒಳಗಾಯಿತು. ಕೊನೆರು ಹಂಪಿ ನೇತೃತ್ವದ ತಂಡ ಮೂರನೇ ಸ್ಥಾನ ಪಡೆಯಿತು. ಯುದ್ಧದಿಂದ ಜರ್ಜ ರಿತವಾಗಿರುವ ಉಕ್ರೇನ್ ತಂಡವು ಜಾರ್ಜಿಯಾ ತಂಡವನ್ನು ಸೋಲಿಸಿ ವನಿತಾ ವಿಭಾಗದಲ್ಲಿ ಚಿನ್ನ ಜಯಿಸಿತು.
ವೈಯಕ್ತಿಕ ವಿಭಾಗ
ಭಾರತಕ್ಕೆ 7 ಪದಕ
ತಂಡ ವಿಭಾಗದಲ್ಲಿ ಕಂಚು ಗೆದ್ದಿರುವ ಭಾರತ ವೈಯಕ್ತಿಕ ವಿಭಾಗದಲ್ಲಿ ಎರಡು ಚಿನ್ನ ಸಹಿತ ಏಳು ಪದಕ ಜಯಿಸಿದೆ. ಗುಕೇಶ್ ಮತ್ತು ಸರಿನ್ ಅನುಕ್ರಮವಾಗಿ ಅಗ್ರ ಮತ್ತು ಎರಡನೇ ಬೋರ್ಡ್‌ನಲ್ಲಿ ಚಿನ್ನ ಜಯಿಸಿದ್ದಾರೆ. ಅರ್ಜುನ್ ಎರಿಗೈಸಿ ಬೆಳ್ಳಿ ಗೆದ್ದರೆ ಆರ್, ಪ್ರಜ್ಞಾನಂದ, ಆರ್. ವೈಶಾಲಿ, ತನಿಯಾ ಸಚ್‌ದೇವ್ ಮತ್ತು ದಿವ್ಯಾ ದೇಶ್‌ಮುಖ್ ಕಂಚು ಗೆದ್ದಿದ್ದಾರೆ.
ಮುಕ್ತ ಮತ್ತು ವನಿತೆಯರ ವಿಭಾಗದಲ್ಲಿ ಸಂಘಟಿತ ಪ್ರದರ್ಶನ ನೀಡಿದ ಸಾಧನೆಗಾಗಿ ಭಾರತವು ಪ್ರತಿಷ್ಠಿತ ಗಪ್ರಿಂದಾಶ್ವಿಲಿ ಕಪ್ ಗೆದ್ದುಕೊಂಡಿತು. ಭಾರತವು ಇದೇ ಮೊದಲ ಬಾರಿಗೆ ವಿಶ್ವದ ಅತಿದೊಡ್ಡ ಚೆಸ್ ಪಂದ್ಯಾವಳಿಯನ್ನು ಆಯೋಜಿಸಿ ಗಮನ ಸೆಳೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.