ಚಾಮರಾಜಪೇಟೆ ಆಟದ ಮೈದಾನ ಜಮೀರ್ ಅಪ್ಪನ ಆಸ್ತಿಯಾ?: ಸಿ.ಟಿ.ರವಿ ಕಿಡಿ

ನಾವು ರಾಷ್ಟ್ರ ಧ್ವಜ ಹೋರಾಟಕ್ಕೆ ಐದು ಕಾರ್ಯಕರ್ತರನ್ನು ಕಳೆದುಕೊಂಡಿದ್ದೇವೆ...!

Team Udayavani, Aug 10, 2022, 1:59 PM IST

C-T-ravi

ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಕೂರಿಸಬೇಡಿ, ಅನುಮತಿ ಕೊಡುವುದಿಲ್ಲ ಎಂದು ಹೇಳುವುದಕ್ಕೆ ಆಟದ ಮೈದಾನ ಜಮೀರ್ ಅಹಮದ್ ಖಾನ್ ಅವರ ಅಪ್ಪನ ಆಸ್ತೀನಾ? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿ ಕಿಡಿ ಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಅನುಮತಿ ಕೊಡುವುದು ಬಿಬಿಎಂಪಿ.ಈಗ ಅದು ಕಂದಾಯ ಇಲಾಖೆಗೆ ಸೇರಿದ ಸರ್ಕಾರದ ಆಸ್ತಿ, ಅಲ್ಲಿ ಗಣೇಶೋತ್ಸವ ಅದ್ದೂರಿಯಾಗಿ ಮಾಡುತ್ತೇವೆ. ಅದೇನೋ ಗಾದೆ ಇದೆಯಲ್ಲ, ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕಾ.? ಇವನು ಯಾವ ಸೀಮೆ ದೊಣ್ಣೆ ನಾಯಕ ಎಂದರು.

ನಮ್ಮ ದೇಶದಲ್ಲಿ ಗಣಪತಿ ಇಡೋದಾ, ಬೇಡ್ವಾ ಎಂದು ಜಮೀರ್ ಅನುಮತಿ ಕೇಳಬೇಕಾ? ಜಮೀರ್ ಕೇಳಿ ಗಣೇಶೋತ್ಸವ ಮಾಡಬೇಕಾ, ನಮಗೆ ತಾಕತ್ ಇದೆ. ಗಣೇಶ ಕೂರಿಸುತ್ತೇವೆ. ಅದ್ದೂರಿಯಾಗಿ ಆಚರಣೆ ಮಾಡುತ್ತೇವೆ, ಯಾರು ತಡೆಯುತ್ತಾರೆ ಬರಲಿ ನೋಡೋಣ. ನಾವೇನು ಅರಬ್‌ನಲ್ಲಿ ಹೋಗಿ ಕೂರಿಸುತ್ತಿದ್ದೇವಾ? ಅಲ್ಲಿ ಕೂರಿಸುವುದಾ್ದಾರೆ ಜಮೀರ್ ಮತ್ತು ಅವರ ಪೂರ್ವಜರ ಅನುಮತಿ ಪಡೆಯೋಣ ಎಂದರು.

ಚಾಮರಾಜಪೇಟೆ ಮೈದಾನಕ್ಕೆ ಮೈಸೂರು ಚಾಮರಾಜೇಂದ್ರ ಒಡೆಯರ್ ಹೆಸರು ಇಡಬೇಕು ಎಂದು ಇದೆ ವೇಳೆ ಆಗ್ರಹಿಸಿದರು.

ಎಫ್ ಐ ಆರ್ ಹಾಕಬೇಕಿರುವುದು ಜಮೀರ್ ಮೇಲೆ. ರಾಷ್ಟ್ರ ಧ್ವಜ ಹಾರಿಸುವುದಕ್ಕೆ ಅನುಮತಿ ಬಗ್ಗೆ ಮಾತಾಡ್ತಾರೆ.ನಾವು ರಾಷ್ಟ್ರ ಧ್ವಜ ಹೋರಾಟಕ್ಕೆ ಐದು ಕಾರ್ಯಕರ್ತರನ್ನು ಕಳೆದುಕೊಂಡಿದ್ದೇವೆ. ರಾಷ್ಟ್ರ ಧ್ವಜದ ಬಗ್ಗೆ ಸಿದ್ದರಾಮಯ್ಯ ಪಾಠ ಮಾಡುತ್ತಾರೆ. ಅವರದ್ದೇ ಸರ್ಕಾರ ಇದ್ದಾಗ ರಾಷ್ಟ್ರ ಧ್ವಜ ಹಿಡಿದುಕೊಂಡು, ವಂದೇ ಮಾತರಂ ಗೀತೆ ಹಾಡುವಾಗ ಗೋಲಿಬಾರ್ ಮಾಡಿಸಿದರು. ಇದರಿಂದ ಎಂಟು ಜನ ಹತ್ಯೆ ಮಾಡಿದರು. ಯಾವ ಏಳು ಸಮುದ್ರಕ್ಕೆ ಹೋದರೂ ಕಾಂಗ್ರೆಸ್ ಪಾಪ ಹೋಗುವುದಿಲ್ಲ ಎಂದರು.

ಸಿದ್ದರಾಮಯ್ಯ ದತ್ತಪೀಠಕ್ಕೆ ಅನ್ಯಾಯ ಮಾಡಿದವರು
ಚುನಾವಣೆಗೆ ನಿಲ್ಲಲು ಕರ್ನಾಟಕದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿರಬೇಕು. ಹತ್ತು ಜನ ಸೂಚಿಸಿದರೆ ನಾಮಪತ್ರ ಸಲ್ಲಿಕೆ ಊರ್ಜಿತ ಆಗುತ್ತದೆ.ಗೆಲ್ಲಿಸೋದು ಜನರ ಕೈಯಲ್ಲಿದೆ.ನಾನು ಚಿಕ್ಕಮಗಳೂರು ಜಿಲ್ಲೆ ಮನೆ ಮಗ. ನನ್ನನ್ನ ನಮ್ಮ ಜನ ಗೆಲ್ಲಿಸ್ತಾರೆ.ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಲಸ ಮಾಡಿದ್ದೇನೆ.ರಸ್ತೆ, ಆಸ್ಪತ್ರೆ, ಸ್ಟೇಡಿಯಂ ಎಲ್ಲಾ ಕೆಲಸ ಯಾರು ಅಂದರೆ ಸಿ.ಟಿ ರವಿ ಹೆಸರೇಳುತ್ತಾರೆ. ಸಿದ್ದರಾಮಯ್ಯ ಅಂದರೆ ದತ್ತಪೀಠಕ್ಕೆ ಅನ್ಯಾಯ ಮಾಡಿದವರು ಅಂತಿದೆ. ನಾನು ಹೇಳಿದೆ ಸಿದ್ದರಾಮಯ್ಯ ಅವರೇ ಅನ್ಯಾಯ ಮಾಡಬೇಡಿ. ಅದು ಹಿಂದೂ ಜನರದ್ದು ಅಂತ ಮನವಿ ಮಾಡಿದೆ ಆದರೂ ಕೇರ್ ಮಾಡಲಿಲ್ಲ.ಚಿಕ್ಕಮಗಳೂರು ಜನತೆ ಅವರು ಬಂದರೆ ಪಾಠ ಕಲಿಸುತ್ತಾರೆ. ಈಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಾಲ್ಕು ಸ್ಥಾನ ಗೆದ್ದಿದ್ದೆವು. ಈಗ ಐದಕ್ಕೆ ಐದೂ ಸ್ಥಾನ ಗೆಲ್ಲುತ್ತೇವೆ ಎಂದರು.

ನಾಯಕತ್ವ ಬದಲಾವಣೆ ದಿನಾ ಸುದ್ದಿಯಲ್ಲಿರಬೇಕು ಅಂತ ಅವರ ಕನಸು. ಹಾಗಾಗಿ ಈ ವಿಚಾರ ಕೆದಕುತ್ತಿದ್ದಾರೆ. ಹೀಗಾಗಿ ಇಲ್ಲಸಲ್ಲದ ವಿಚಾರ ಪ್ರಸ್ತಾಪ ಮಾಡ್ತಿದ್ದಾರೆ.ಸಂಪುಟ ವಿಸ್ತರಣೆ ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ಅವರೇ ನಿರ್ಧರಿಸಲಿದ್ದಾರೆ. ಯಡಿಯೂರಪ್ಪ ಬದಲಾವಣೆ ಸಂದರ್ಭದಲ್ಲಿ ಮುಂಚೆಯೇ ಚರ್ಚೆ ಆಗಿತ್ತು.ಅದನ್ನ ಅವರು ಸ್ಪಷ್ಟಪಡಿಸಿದ್ದರು.ಅನುಮಾನಂ ಪೆದ್ದ ರೋಗಮ್.ಡಿ.ಕೆ ಶಿವಕುಮಾರ್ ಇತ್ತೀಚೆಗೆ ಸಂದರ್ಶನದಲ್ಲಿ ಹೇಳಿದ್ದರು. ವೀರಪ್ಪ ಯೋಯ್ಲಿ ಹೇಗೆ ಸಿಎಂ ಆದರು ಅಂತ.ಕುತಂತ್ರ ರಾಜಕಾರಣ ಇರುವುದು ಕಾಂಗ್ರೆಸ್‌ನಲ್ಲಿ ಎಂದರು.
ವೀರೇಂದ್ರ ಪಾಟೀಲರು ದಾಖಲೆ ಸೀಟು ಪಡೆದು ಗೆಲುವು ಸಾಧಿಸುತ್ತಾರೆ. ಆದರೆ ಅವರ ಆರೋಗ್ಯ ವಿಚಾರಿಸಲು ಬಂದ ಗಾಂಧಿ ಏರ್ ಪೋರ್ಟ್ ಹೋಗಿ ಬದಲಾವಣೆ ಚೀಟಿ ಕೊಟ್ಟರು. ಎಲ್ಲರ ಸಮ್ಮತದ ಮೇಲೆ  ಬೊಮ್ಮಾಯಿ ಅವರಿಗೆ ಸಿಎಂ ಸ್ಥಾನ ಕೊಡಲಾಗಿದೆ. ನಮ್ಮ ಪಕ್ಷದ ಸಿಎಂ ಬದಲಾವಣೆ ವಿಚಾರ ಚರ್ಚೆ ಮಾಡಲು ಇವರು ಯಾವ ಸೀಮೆ ದಾಸಪ್ಪ.ಈ ವಿಚಾರ ಕಪೋಲ ಕಲ್ಪಿತ. ಮಾಧ್ಯಮಗಳಲ್ಲಿ ಬರುವ ಬದಲಾವಣೆ ವಿಚಾರ ಸತ್ಯ ಆಗಿದ್ದರೆ ಹತ್ತು ಬಾರಿ ಬದಲಾವಣೆ ಆಗಬೇಕಿತ್ತು ಎಂದರು.

ನಿತೀಶ್ ಅಭ್ಯಾಸವೇ ಆ ರೀತಿ

ಬಿಹಾರದ ಪ್ರಸ್ತುತ ವಿಚಾರ ಮಾತನಾಡಿ, ನಿತೀಶ್ ಕುಮಾರ್ ಅಭ್ಯಾಸವೇ ಆ ರೀತಿ.ತೇಜಸ್ವಿ ಯಾದವ್ ಪಲ್ಲಟ್ ಚಾಚಾ ಅಂದರು. ಈ ತರದ ಸ್ವಭಾವ ಇವತ್ತಿನದ್ದು ಅಲ್ಲ.1996 ರಿಂದ ಇದೇ ರೀತಿ ಬೆಳೆಸಿಕೊಂಡು ಬಂದವರು. ಎನ್ ಡಿಎ ಬಿಟ್ಟು ಮಹಾಘಟಬಂಧನ್ ಜತೆ ಹೋಗಿ ಸಿಎಂ‌ ಆದರು, ಆರ್ ಜೆಡಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಹೇಳಿ ಹೊರ ಬಂದರು. ಇದು ಅವರ ರಾಜಕೀಯ ರೋಗ ಅನ್ನಬಹುದು.
ಬಿಜೆಪಿ ಹೆಚ್ಚು ಸ್ಥಾನ ಗಳಿಸಿದರೂ ಅವರನ್ನ ಸಿಎಂ ಮಾಡಿದ್ದೆವು. ಇದು ಬಿಹಾರಕ್ಕೆ ಒಳ್ಳೆಯದಲ್ಲ.ಆರ್ ಜೆಡಿಯೇ ಅವರ ಕಾಲೆಳೆದು ಮನೆಗೆ ಕಳಿಸಬಹುದು ಎಂದರು.

ಟಾಪ್ ನ್ಯೂಸ್

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

CT RAVI 2

C T Ravi; ಸನಾತನ ಧರ್ಮ ಉಳಿದರೆ ದೇಶದ ಉಳಿವು

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

CT RAVI 2

C T Ravi; ಸನಾತನ ಧರ್ಮ ಉಳಿದರೆ ದೇಶದ ಉಳಿವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.