ಸಾರ್ವಜನಿಕ ಸಂಸ್ಥೆ ಖಾಸಗೀಕರಣ ಬಿಜೆಪಿ ಹುನ್ನಾರ
ಎಲ್ಲ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಮುಂದಾಗುತ್ತಿರುವುದು ದೇಶದ ಜನರ ದೌರ್ಭಾಗ್ಯ
Team Udayavani, Aug 10, 2022, 6:25 PM IST
ಜಮಖಂಡಿ: ತ್ರಿವರ್ಣ ಧ್ವಜ ಮತ್ತು ಭಾರತೀಯ ಸಂವಿಧಾನ ಬದಲಾವಣೆ ಬಗ್ಗೆ ಅತಿರೇಕ ಹೇಳಿಕೆ ನೀಡುತ್ತಿರುವ ದುಷ್ಟಶಕ್ತಿಗಳನ್ನು ಹೊಡೆದೊಡಿಸಬೇಕಾಗಿದೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ಬಸವಭವನದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ನಿಮಿತ್ತ ಚಿಕ್ಕಪಡಸಲಗಿ-ಜಮಖಂಡಿ ಅಮೃತ ನಡಿಗೆ ಮತ್ತು ಸ್ವಾತಂತ್ರ ಹೋರಾಟಗಾರರ ಪತ್ನಿಯರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರನ್ನು ದೇಶದಿಂದ ಓಡಿಸಿದ ರೀತಿಯಲ್ಲಿ ದುಷ್ಟಶಕ್ತಿ ಓಡಿಸಬೇಕಾದರೆ ಕಾಂಗ್ರೆಸ್ ದಿಂದ ಮಾತ್ರ ಸಾಧ್ಯವೆಂದರು. ಕಳೆದ 75 ವರ್ಷದಲ್ಲಿ ಕಾಂಗ್ರೆಸ್ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದೆ. ರಸ್ತೆ, ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ, 14 ಸಾವಿರ ರೈಲು ಮಾರ್ಗ, ಜವಾಹರ ನೆಹರು ಪ್ರಧಾನಮಂತ್ರಿ ಆಡಳಿತದಲ್ಲಿ 33 ಸಾರ್ವಜನಿಕ ಘಟಕ ಸ್ಥಾಪಿಸಿದರು. ಸರ್ಕಾರದ ಕೆಲಸದಲ್ಲಿ ಸಂಸ್ಥೆಗಳನ್ನು ಹುಟ್ಟು ಹಾಕಿದರು ಎಂದರು.
ಬಿಜೆಪಿ ದೇಶದ ಎಲ್ಲ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಮುಂದಾಗುತ್ತಿರುವುದು ದೇಶದ ಜನರ ದೌರ್ಭಾಗ್ಯ. ಪ್ರಧಾನಿ ನರೇಂದ್ರ ಮೋದಿ ಅವರು 8 ವರ್ಷ ಅಧಿಕಾರದ ಅವಧಿಯಲ್ಲಿ ಎಲ್ಲವನ್ನು ಖಾಸಗೀಕರಣ ಮಾಡಲು ಮುಂದಾಗಿದ್ದಾರೆ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ 55 ಮಿಲಿಯನ್ ಟನ್ ಆಹಾರ ಧಾನ್ಯ ರಫ್ತು ಮಾಡಿದೆ. ಮತ್ತೇ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶ ಅಭಿವೃದ್ಧಿಯಾಗಲು ಸಾಧ್ಯ. ಭಿನ್ನ ಅಭಿಪ್ರಾಯಗಳಿದ್ದರೂ ಅವುಗಳನ್ನು ದೂರ ಮಾಡುವ ಮೂಲಕ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದರು. ಶ್ರೀದೇವಿ ಉಳಾಲಕರ ಮಾತನಾಡಿದರು.
ಚಿಕ್ಕಲಕಿ ಕ್ರಾಸ್ ಶಿವಾನಂದ ಶ್ರೀ ಸಾನ್ನಿಧ್ಯ ವಹಿಸಿದರು. ನಗರಸಭೆ ಅಧ್ಯಕ್ಷ ದಾನೇಶ ಘಾಟಗೆ, ಸ್ಥಾಯಿ ಸಮೀತಿ ಸದಸ್ಯ ಸುನೀಲ ಶಿಂಧೆ, ಸದಸ್ಯರಾದ ಸಿದ್ದು ಮೀಸಿ, ಪರಮಾನಂದ ಗೌವರೋಜಿ, ಜಿಪಂ ಮಾಜಿ ಉಪಾಧ್ಯಕ್ಷ ಈಶ್ವರ ಕರಬನ್ನವರ, ಜಿಪಂ ಮಾಜಿ ಸದಸ್ಯ ಅರ್ಜನ ದಳವಾಯಿ, ಎ.ಆರ್.ಶಿಂಧೆ, ನಿಂಗಪ್ಪ ಕಡಪಟ್ಟಿ, ಮಹೇಶ ಕೋಳಿ, ಅನ್ವರ ಮೋಮಿನ, ರμಕ ಬಾರಿಗಡ್ಡಿ, ಪ್ರಕಾಶ ಕಣಬೂರ, ಮುಬಾರಕ ಸಾರವಾನ ಇದ್ದರು. ನ್ಯಾಯವಾದಿ ರವಿ ಯಡಹಳ್ಳಿ ಸ್ವಾಗತಿಸಿದರು. ಜಮಖಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನ ನ್ಯಾಮಗೌಡ ನಿರೂಪಿಸಿದರು. ಸಾವಳಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಪ್ಪ ಗಿರಡ್ಡಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.