ಕ್ಯಾಂಪಸ್ ಪ್ಲೇಸ್‌ಮೆಂಟ್: ನೇಕಾರನ ಮಗನಿಗೆ ವಾರ್ಷಿಕ 21.35 ಲಕ್ಷ ರೂ. ಆಫರ್!
Team Udayavani, Aug 10, 2022, 7:23 PM IST
ರಬಕವಿ-ಬನಹಟ್ಟಿ: ತುತ್ತು ಊಟಕ್ಕೂ ಉದ್ಯೋಗಕ್ಕೂ ಸಮಾನವಾಗಿ ಬದುಕು ನಡೆಸುವ ಕುಟುಂಬಕ್ಕೆ ಶುಕ್ರದೆಸೆ ಬಂದಿರುವದು ನಿಜಕ್ಕೂ ಶ್ಲಾಘನೀಯ.ಹೌದು, ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯ ಅಣ್ಣಪ್ಪ ಚಾಪೀ ಎಂಬುವರ ಮಗ ಗುರು ವಿಗೆ ಸ್ಯಾಮ್‌ಸಂಗ್ ಸೆಮಿಕಂಡಕ್ಟರ್ ಇಂಡಿಯಾ ರಿಸರ್ಚ್(ಎಸ್‌ಎಸ್‌ಐಆರ್)ನಿಂದ ವಾರ್ಷಿಕ 21.35 ಲಕ್ಷ ರೂ. ಕ್ಯಾಂಪಸ್ ಪ್ಲೇಸ್‌ಮೆಂಟ್ ಆಫರ್ ಪಡೆದಿರುವದು ದಾಖಲೆಯಾಗಿದೆ.
ವಿದ್ಯಾರ್ಥಿ ಗುರು ಚಾಪೀ ಬೆಳಗಾವಿಯ ಕೆಎಲ್‌ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಎಲೆಕ್ಟ್ರಾನಿಕ್ ಆಂಡ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಯಾಗಿದ್ದು, ಕಳೆದ 43 ವರ್ಷಗಳಲ್ಲಿ ಕಾಲೇಜಿನ ಜಿಐಟಿಯ ವಿದ್ಯಾರ್ಥಿ ಪಡೆದ ಅತ್ಯಧಿಕ ಕ್ಯಾಂಪಸ್ ಉದ್ಯೋಗ ಕೊಡುಗೆಯಾಗಿದೆ.
ಜೋಡಣೆ ನೇಕಾರನ ಮಗನಾಗಿರುವ ಗುರುವಿನ ಪುಟ್ಟ ಮನೆಯವರಲ್ಲಿನ ಸಂತಸ ಮುಗಿಲು ಮುಟ್ಟಿತ್ತು. ಪ್ರತಿಭಾವಂತ ವಿದ್ಯಾರ್ಥಿಯ ಕೀರ್ತಿಗೆ ಇಡೀ ರಬಕವಿ-ಬನಹಟ್ಟಿ ನೇಕಾರ ಸಮುದಾಯ ಹಾಗು ಕುರುಹಿನಶೆಟ್ಟಿ ಸಮಾಜ ಸಿಹಿ ಹಂಚುವ ಮೂಲಕ ಸಂತಸ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಸಾಧನೆ ಮಾಡಲು ಸ್ವತಂತ್ರವಾಗಿ ಹಾಗು ಏನನ್ನೂ ಕಲಿಯಲೆತ್ನಿಸುವರೋ ಅದಕ್ಕೆ ಸಹಕಾರಿಯಾದಲ್ಲಿ ಸಾಧನೆ ನಿಶ್ಚಿತ ಎಂದು ಗುರು ಚಾಪೀ ಹೇಳಿದ್ದಾರೆ.
ಸ್ಕಾಲರ್‌ಷಿಪ್, ಶಿಕ್ಷಣ ಸಾಲವೇ ಸಹಾಯ
ಕಿತ್ತು ತಿನ್ನುವ ಬಡತನದಲ್ಲಿ ಗುರಿಯನ್ನು ಸಾಧಿಸಲು ಹಾಗು ಹಿಡಿದ ಛಲಕ್ಕೆ ಸರ್ಕಾರದ ಸ್ಕಾಲರ್‌ಷಿಪ್ ಹಾಗು ಶಿಕ್ಷಣ ಸಾಲವೇ ಸಹಕಾರಿಯಾಗಿ ಈ ಮಟ್ಟಕ್ಕೆ ಬೆಳೆಯುವಲ್ಲಿ ಕಾರಣವಾಗಿದೆ ಎಂದು ಸಾಧಕ ವಿದ್ಯಾರ್ಥಿ ಗುರು ಚಾಪೀ ತಿಳಿಸಿದರು.
ಮಾಲಿಕ ನೆರವು
ಬಿ.ಇ. ಪ್ರವೇಶಾತಿ ಪಡೆಯುವ ಸಂದರ್ಭ ಒಟ್ಟು ನಾಲ್ಕೈದು ಲಕ್ಷ ರೂ.ಗಳ ವೆಚ್ಚವಾಗುವದರಿಂದ ಕೂಲಿ ನೇಕಾರ ಮಾಡುತ್ತಿದ್ದ ವಿದ್ಯಾರ್ಥಿ ತಂದೆ ಅಣ್ಣಪ್ಪ ಚಾಪೀಗೆ ಜವಳಿ ಉದ್ಯಮಿ ಚಿದಾನಂದ ಬೆಳಗಲಿ ಆರ್ಥಿಕ ನೆರವು ನೀಡಿದರೆಂದು ವಿದ್ಯಾರ್ಥಿ ಮನದಾಳದಿಂದ ಹೇಳಿದ್ದಾನೆ.
ನೇಕಾರ ಸಮುದಾಯದಲ್ಲಿ ಅದರಲ್ಲೂ ಜೋಡಣೆದಾರರ ಕುಟುಂಬದಲ್ಲಿ ಶಿಕ್ಷಣ ಹಾಗು ಆಸ್ಪತ್ರೆಗೆಂದು ಹಣಕಾಸು ನೆರವು ನೀಡುವಲ್ಲಿ ಸಹಕಾರಿಯಾಗುವುದು ಮಾನವೀಯ ಧರ್ಮ ಎಂದು ಚಿದಾನಂದ ಬೆಳಗಲಿ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ
MUST WATCH
ಹೊಸ ಸೇರ್ಪಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.