ಚೀನದಲ್ಲಿ ಕಂಡುಬಂದಿದೆ ಲಂಗ್ಯಾ ವೈರಸ್!
Team Udayavani, Aug 11, 2022, 7:40 AM IST
ಬ್ಲೂಮ್‌ಬರ್ಗ್: ಕೊರೊನಾ ವೈರಸ್ ಅನ್ನು ಜಗತ್ತಿಗೆಲ್ಲ ಹಂಚಿದ ಚೀನದಲ್ಲೀಗ ಇನ್ನೊಂದು ವೈರಸ್ ಪತ್ತೆಯಾಗಿದೆ.
ಪೂರ್ವ ಚೀನದ ರೈತ ಪರಿವಾರವೊಂದಕ್ಕೆ ಲಂಗ್ಯಾ ಅಥವಾ ಲೇವಿ ಎನ್ನುವ ವೈರಸ್ ತಗುಲಿಕೊಂಡಿದೆ. ಒಟ್ಟು 35 ಜನರು ರೋಗಿಗಳಾಗಿದ್ದಾರೆ. ಅದರಲ್ಲಿ 26 ಜನರಲ್ಲಿ ಮೂಗಿಲಿಗಳಿಂದ ಹರಡುವ ಲಂಗ್ಯಾ ವೈರಸ್ ತಗುಲಿಕೊಂಡಿದೆ ಎಂದು ಪರಿಶೀಲನೆಯಲ್ಲಿ ಗೊತ್ತಾಗಿದೆ. ಆದರೆ ಈ ವೈರಸ್‌ಗಳು ಜನರಿಂದ ಜನರಿಗೆ ಹರಡುವ ಸಾಂಕ್ರಾಮಿಕ ಸ್ವಭಾವ ಹೊಂದಿವೆಯಾ ಎನ್ನುವುದು ಇನ್ನೂ ಖಚಿತವಾಗಿಲ್ಲ.
ಈ ಬಗ್ಗೆ ವರದಿಯೊಂದು ನ್ಯೂ ಇಂಗ್ಲೆಂಡ್ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ಸದ್ಯ ರೋಗಿಗಳಲ್ಲಿ ಜ್ವರ, ನಿಶ್ಶಕ್ತಿ, ಕಫ, ಹಸಿವು ಆಗದಿರುವುದು, ತಲೆನೋವು ಕಂಡುಬಂದಿದೆ. ಜೀವಕೋಶಗಳಲ್ಲಿ ಅಸಹಜ ಗುಣಗಳು ಕಾಣಿಸಿಕೊಂಡಿವೆ. ಲಿವರ್ ಮತ್ತು ಕಿಡ್ನಿಗೆ ಹಾನಿಯಾಗಿದೆ. ಆದರೆ ಎಲ್ಲರೂ ಬದುಕುಳಿದಿದ್ದಾರೆ.
ಇವರೆಲ್ಲರಿಗೂ ಒಂದೇ ಕಡೆಯಿಂದ ರೋಗಬಂದಿದೆಯಾ ಅಥವಾ ಯಾರದ್ದಾದರೂ ನಿಕಟ ಸಂಪರ್ಕ ಹೊಂದಿದ್ದಾರಾ ಎನ್ನುವುದಕ್ಕೆ ಖಚಿತ ಸಾಕ್ಷಿಗಳು ಸಿಕ್ಕಿಲ್ಲ. ಈ ವೈರಸ್ ಅನ್ನು ಮೂಗಿಲಿಗಳಲ್ಲಿ ಪತ್ತೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
Siddapura: ಅದೃಷ್ಟ ತಂದ ಲಾರಿ ಧರ್ಮಸ್ಥಳ ಕ್ಷೇತ್ರಕ್ಕೆ ಸಮರ್ಪಣೆ
Bengaluru: ಮಾದಾವರ ವಿಸ್ತರಿತ ಮೆಟ್ರೊದಲ್ಲಿ ಮೊದಲ ದಿನ 16000 ಜನ ಪ್ರಯಾಣ
Balaganur: ಕಾಲುವೆಯಲ್ಲಿ ನವಜಾತ ಶಿಶು ದೇಹ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.