ದೇಶದ ಪರ ಆಡಿ ಎಂದು ಬೇಡಲು ಆಗುತ್ತದೆಯೇ..?: ಅಳಲು ತೋಡಿಕೊಂಡ ವಿಂಡೀಸ್ ಕೋಚ್
Team Udayavani, Aug 11, 2022, 10:00 AM IST
ಟ್ರಿನಿಡಾಡ್: ರಾಷ್ಟ್ರೀಯ ತಂಡದ ಬದಲು ವಿದೇಶಿ ಟಿ20 ಲೀಗ್ ಗಳಲ್ಲಿ ಆಡುವ ಆಟಗಾರರ ಕುರಿತು ವೆಸ್ಟ್ ಇಂಡೀಸ್ ಕ್ರಿಕೆಟ್ ಕೋಚ್ ಫಿಲ್ ಸಿಮನ್ಸ್ ಬೇಸರಗೊಂಡಿದ್ದಾರೆ. ದೇಶದ ಪರವೇ ಆಡಿ ಎಂದು ಅವರ ಬಳಿ ಬೇಡಲು ಆಗುತ್ತದೆಯೇ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ಹೆಚ್ಚಿನ ಪ್ರಮುಖ ಆಟಗಾರರು ಫ್ರಾಂಚೈಸಿ ಕ್ರಿಕೆಟ್ ಆಡುತ್ತಿದ್ದಾರೆ ಅಥವಾ ಗಾಯಗೊಂಡಿದ್ದಾರೆ. ಹೀಗಾಗಿ ದೇಶದ ತಂಡದ ಪ್ರದರ್ಶನ ಕಡಿಮೆಯಾಗಿದೆ. ಹೀಗೆ ಮುಂದುವರಿದರೆ ಟಿ20 ವಿಶ್ವಕಪ್ ಗೆ ತಂಡ ಕಟ್ಟುವುದಾದರೂ ಹೇಗೆ ಎಂದು ಫಿಲ್ ಸಿಮನ್ಸ್ ಬೇಸರಗೊಂಡಿದ್ದಾರೆ.
“ಏನು ಮಾಡುವುದು? ದೇಶದ ತಂಡದ ಪರ ಆಡಿ ಎಂದು ನಾನು ಕೇಳಬಹುದೇ? ಅವರಾಗಿಯೇ ವೆಸ್ಟ್ ಇಂಡೀಸ್ ಪರ ಆಡಬೇಕೆಂದು ಮನಸು ಮಾಡಬೇಕು” ಎಂದು ಸಿಮನ್ಸ್ ಹೇಳಿಕೊಂಡಿದ್ದಾರೆ.
ಬದುಕು ಬದಲಾಗಿದೆ. ವಿಶ್ವದ ಮೂಲೆಮೂಲೆಗಳಲ್ಲಿ ಅವಕಾಶ ಸಿಗುತ್ತಿದೆ. ಅವರು ವೆಸ್ಟ್ ಇಂಡೀಸ್ ಬದಲಾಗಿ ಅದನ್ನು ಆಯ್ಕೆ ಮಾಡಿಕೊಂಡರೆ ಹೀಗೆ ಆಗುತ್ತದೆ ಎಂದರು.
ಇದನ್ನೂ ಓದಿ:ಚೀನದಲ್ಲಿ ಕಂಡುಬಂದಿದೆ ಲಂಗ್ಯಾ ವೈರಸ್!
ಸ್ಟಾರ್ ಆಲ್ರೌಂಡರ್ ಆಂಡ್ರೆ ರಸೆಲ್ ಮತ್ತು ಸುನಿಲ್ ನರೈನ್ ಪ್ರಸ್ತುತ ಹಂಡ್ರೆಡ್ ನಲ್ಲಿ ಆಡುತ್ತಿದ್ದಾರೆ. ಹೀಗಾಗಿ ಅವರು ದೇಶದ ತಂಡಕ್ಕೆ ಲಭ್ಯವಾಗುತ್ತಿಲ್ಲ. ಎವಿನ್ ಲೆವಿಸ್ ಮತ್ತು ಒಶೇನ್ ಥಾಮಸ್ ಫಿಟ್ನೆಸ್ ಪರೀಕ್ಷೆಗೆ ಹಾಜರಾಗಿಲ್ಲ. ಆದರೆ ಶೆಲ್ಡನ್ ಕಾಟ್ರೆಲ್, ಫ್ಯಾಬಿಯನ್ ಅಲೆನ್ ಮತ್ತು ರೋಸ್ಟನ್ ಚೇಸ್ ಅವರು ಗಾಯದಿಂದ ಹೊರಗುಳಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore: ಇಂದಿನಿಂದ ವಿಶ್ವ ಚೆಸ್: ಗುಕೇಶ್-ಲಿರೆನ್ ಮುಖಾಮುಖಿ
Australia: ಪರ್ತ್ಗೆ ಆಗಮಿಸಿದ ರೋಹಿತ್ ಶರ್ಮ
Pro Kabaddi League: ಬೆಂಗಾಲ್ ವಾರಿಯರ್ ಮೇಲೆ ಪುಣೇರಿ ಪಲ್ಟಾನ್ ಸವಾರಿ
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.