![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Aug 11, 2022, 10:50 AM IST
ಬೆಳ್ತಂಗಡಿ : ಪ್ರಧಾನಿ ನರೇಂದ್ರ ಮೋದಿಯವರಿಂದ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡು ಪ್ರಮಾಣವಚನ ಸ್ವೀಕರಿಸಿ ಈಗಾಗಲೆ ಎರಡು ಅಧಿವೇಶನಗಳಲ್ಲಿ ಭಾಗವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು (ಸಂಸದರ) ನೂತನ ಕಾರ್ಯಾಲಯ ಇಂದು ಆ.11 ರಂದು ಧರ್ಮಸ್ಥಳದಲ್ಲಿ ಮಂಜುಷಾ ವಸ್ತುಸಂಗ್ರಹಾಲಯದ ಬಳಿ ಇರುವ ಕಟ್ಟಡದಲ್ಲಿ ಶುಭಾರಂಭಗೊಂಡಿತು.
ಶಾಸಕ ಹರೀಶ್ ಪೂಂಜ ಕಚೇರಿಯನ್ನು ದೀಪ ಬೆಳಗಿ ಉದ್ಘಾಟಿಸಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಕೆ.ಹರೀಶ್ ಕುಮಾರ್, ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಸಂಸದರ ಆಪ್ತ ಕಾರ್ಯದರ್ಶಿ ಕೆ.ಎನ್ ಜನಾರ್ದನ್ ಮತ್ತು ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಮಾಜಿ ಸಚಿವ ಅಭಯಚಂದ್ರ ಜೈನ್ ಉಪಸ್ಥಿತರಿದ್ದರು.
ಬಳಿಕ ವಸಂತ ಮಹಲ್ ನಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ : ಮಾರಾಟದಲ್ಲಿ ಕುಸಿತ: ಬೃಹತ್ ಇ-ವಾಣಿಜ್ಯ ಕಂಪನಿ ಅಲಿಬಾಬಾದಿಂದ 10 ಸಾವಿರ ಉದ್ಯೋಗಿಗಳ ವಜಾ
You seem to have an Ad Blocker on.
To continue reading, please turn it off or whitelist Udayavani.