![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Aug 11, 2022, 10:38 PM IST
ಮಾದನಹಿಪ್ಪರಗಿ: ಮಹಿಳೆ ಹಾಗೂ ಆಕೆಯ ಮೂವರು ಮಕ್ಕಳ ಶವಗಳು ಇಲ್ಲಿನ ಬಾವಿಯೊಂದರಲ್ಲಿ ಪತ್ತೆಯಾಗಿವೆ.
ಅಂಬಿಕಾ ರೇವಪ್ಪ ದುಧಗಿ (38), ಆಕೆಯ ಹಿರಿಯ ಅವಳಿ ಮಕ್ಕಳಾದ ಪುತ್ರ ದಯಾನಂದ (8), ಪುತ್ರಿ ಶಿವಲೀಲಾ (8) ಮತ್ತು ಕಿರಿಯ ಪುತ್ರಿ ಸೃಷ್ಟಿ (6) ಮೃತಪಟ್ಟವರು.
ಈ ನಾಲ್ವರೂ ನಾಪತ್ತೆಯಾಗಿರುವ ಕಾರಣ ಹುಡುಕಾಡಿದಾಗ ಮೊದಲು ಅಂಬಿಕಾರ ಶವ ಬುಧವಾರ ಸಂಜೆ ಬಾವಿಯಲ್ಲಿ ಪತ್ತೆಯಾಗಿತ್ತು. ಮಕ್ಕಳಿಗಾಗಿ ಶೋಧ ಮುಂದುವರಿಸಿದ್ದ ತಂಡಕ್ಕೆ ಗುರುವಾರ ಅವರ ಶವಗಳೂ ಅದೇ ಬಾವಿಯಲ್ಲಿ ಪತ್ತೆಯಾಗಿವೆ.
ಅಂಬಿಕಾ ತನ್ನ ಮೂವರು ಮಕ್ಕಳೊಂದಿಗೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ರಾವೂರು ಗ್ರಾಮದ ತವರು ಮನೆಯಲ್ಲೇ ಈ ರೀತಿ ಸಾವಿಗೀಡಾಗಿದ್ದಾರೆ. ಕಳೆದ ಮಂಗಳವಾರ ಬೆಳಗ್ಗಿನ ಜಾವ ಅಂಬಿಕಾಳ ಸಂಬಂಧಿ ರಾವೂರಿನ ಬಸವರಾಜ ಯರಗಲ್ ಎಂಬಾತ ತಾಯಿ ಮಕ್ಕಳನ್ನು ಗ್ರಾಮದಲ್ಲಿ ಬಿಟ್ಟು ಹೋಗಿದ್ದ. ಈಕೆಯ ಪತಿ ರೇವಪ್ಪ ಶಾಂತಮಲ್ಲ ದುಧಗಿ ಕಲಬುರಗಿ, ಸೊಲ್ಲಾಪುರ, ಅಕ್ಕಲಕೋಟ ನಗರಗಳ ಹೊಟೇಲ್‌ಗಳಲ್ಲಿ ಕೆಲಸ ಮಾಡುತ್ತಿದ್ದ. ಆಗಾಗ ರಾವೂರ ಗ್ರಾಮಕ್ಕೆ ಬರುತ್ತಿದ್ದ ಎನ್ನಲಾಗಿದೆ. ಸಾವಿನ ರಹಸ್ಯ ಇನ್ನೂ ಬಯಲಾಗಿಲ್ಲ. ಮಾದನಹಿಪ್ಪರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
You seem to have an Ad Blocker on.
To continue reading, please turn it off or whitelist Udayavani.