ಬಸವಸಾಗರದಿಂದ 2.16 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ
Team Udayavani, Aug 12, 2022, 5:12 PM IST
ನಾರಾಯಣಪುರ: ಬಸವಸಾಗರ ಅಣೆಕಟ್ಟೆಯ 25 ಕ್ರಸ್ಟ್ ಗೇಟ್‌ಗಳನ್ನು ತೆರೆದು 2.16 ಲಕ್ಷ ಕ್ಯೂಸೆಕ್‌ನಷ್ಟು ನೀರನ್ನು ಕೃಷ್ಣಾ ನದಿಗೆ ಹರಿಬಿಟ್ಟಿದ್ದು, ನದಿ ತೀರದ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ದಕ್ಷಿಣ ಕಾಶಿ ಶ್ರೀ ಛಾಯಾ ಭಗವತಿ ದೇಗುಲಕ್ಕೆ ಹೊಂದಿಕೊಂಡಿರುವ ಮಂಟಪಕ್ಕೆ ನೀರು ಅಪ್ಪಳಿಸುತ್ತಿವೆ.
ಒಂದೊಮ್ಮೆ ನದಿಯಲ್ಲಿ ನೀರಿನ ಹರಿವು ಇನ್ನೂ ಹೆಚ್ಚಾದರೆ ಛಾಯಾ ಭಗವತಿ ದೇಗುಲದ ಗರ್ಭಗುಡಿ ಒಳಗೆ ನೀರು ಹೋಗುವ ಸಾಧ್ಯತೆ ಇದೆ ಎಂದು ಪ್ರವಾಸಿಗರು ಹೇಳುತ್ತಾರೆ. ಇದೇ ಸಂದರ್ಭದಲ್ಲಿ ಶ್ರೀ ಛಾಯಾ ಭಗವತಿ ಕ್ಷೇತ್ರದ ಬಳಿ ಮೈದುಂಬಿ ಹರಿಯುವ ಕೃಷ್ಣಾ ನದಿಯ ಅಬ್ಬರವನ್ನು ವೀಕ್ಷಿಸಲು ಜನರು ತಂಡೋಪ ತಂಡವಾಗಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.
ಪ್ರವಾಸಿಗರು ದೇವಸ್ಥಾನದ ಮೆಟ್ಟಿಲುಗಳಿಂದ ನದಿಗೆ ಇಳಿದು ಹತ್ತಿರದಿಂದ ರಭಸದಿಂದ ಹರಿಯುವ ನದಿ ವೀಕ್ಷಣೆಯ ಜೊತೆಗೆ ನದಿ ತೀರದಲ್ಲೆ ಸೆಲ್ಫಿ ಕ್ಲಿಕ್ಕಿಸುವ ದುಸಾಹಸ ಮಾಡುತ್ತಿದ್ದಾರೆ. ಆಗ ಏನಾದರು ಅವಘಡಗಳು ಸಂಭವಿಸಬಹುದು ಎಂದು ಅರಿತ ಪ್ರವಾಸೋದ್ಯಮ ಇಲಾಖೆಯವರಿಂದ ನಿಯೋಜಿಸಲ್ಪಟ್ಟ ಪ್ರವಾಸಿ ಮಿತ್ರರಾದ ವೆಂಕಟೇಶ ಕುಲಕರ್ಣಿ, ರಾಮಲಿಂಗಯ್ಯ ಅವರು ಮುಂಜಾಗ್ರತಾ ಕ್ರಮವಾಗಿ ದೇಗುಲಕ್ಕೆ ಇಳಿಯುವ ಮೆಟ್ಟಲುಗಳ ಮೇಲ್ಬಾಗದಲ್ಲೇ ತಾತ್ಕಾಲಿಕ ಗೇಟ್‌ಗಳನ್ನು ಅಳವಡಿಸಿ ಪ್ರವಾಸಿಗರು ನದಿಗೆ ಇಳಿಯದಂತೆ ನಿರ್ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.