ಕನ್ನಡ ಎರಡು ಸಾವಿರ ವರ್ಷಗಳ ಹಿನ್ನೆಲೆಯುಳ್ಳ ಜೀವಂತ ಭಾಷೆ: ಸಚಿವ ಕಾರಜೋಳ
Team Udayavani, Aug 12, 2022, 7:11 PM IST
ಬೆಂಗಳೂರು: ಹೃದಯವಾಹಿನಿ – ಕರ್ನಾಟಕ, ಮಂಗಳೂರು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 15ನೇ ರಾಷ್ಟ್ರೀಯ ಕನ್ನಡ ಸಂಸ್ಕ್ರತಿ ಸಮ್ಮೇಳನ ಬೆಂಗಳೂರಿನ ಬಸವ ಭವನ ಸಭಾಂಗಣದಲ್ಲಿ ನಡೆಯಿತು.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಸಮ್ಮೇಳನವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ ಎರಡುಸಾವಿರ ವರ್ಷಗಳಹಿನ್ನೆಲೆಯುಳ್ಳ ಜೀವಂತ ಭಾಷೆಯಾಗಿದೆ. ಜಗತ್ತಿನಲ್ಲಿ ಕನ್ನಡ ಭಾಷೆಗೆ ಇರುವ ಸ್ಥಾನಮಾನ ಬೇರೆ ಭಾಷೆಗಿಲ್ಲ. ಹಳೆಯ ಭಾಷೆಗಳಲ್ಲಿ ರಾಜ್ಯವೊಂದರ ಅಡಳಿತ ಭಾಷೆಯಾಗಿರುವುದು ಕನ್ನಡ ಮಾತ್ರ ಎಂದು ಹೇಳಿದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಲೇಖಕ ಡಾ.ಅಶೋಕ ನರೋಡೆ ಮಹಾಲಿಂಗಪುರ ಮಾತನಾಡಿ, ಕನ್ನಡ ಭಾಷಗೆ ಭವ್ಯ ಪರಂಪರೆ ಇದೆ. ಸಂಪದ್ಬರಿತವಾದ ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ಅರಸು ಮನೆತನಗಳು ಅಖಂಡ ಭಾರತವನ್ನು ಆಳಿವೆ. ಕದಂಬ ಮತ್ತು ಗಂಗ ರಾಜಮನೆತನಗಳು ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು ಕಲ್ಯಾಣಿ ಚಾಲುಕ್ಯರು,ವಿಜಯನಗರ ಸಾಮ್ರಾಜ್ಯ ಮುಂತಾದವುಗಳು ತುಂಬಾ ಖ್ಯಾತಿವೆತ್ತ ಸಾಮ್ರಾಜ್ಯಗಳಾಗಿದ್ದವು ಎಂದರು.
ಈ ಸಂದರ್ಭ ನಾರಾಯಣ ಸಂಯುಕ್ತ ಪದವಿಪೂರ್ವ ಕಾಲೇಜಿನ ಕಾರ್ಯದರ್ಶಿ ರೂಪಾ ಎಂ.ಎಸ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹ ಕಂದಾಯ ಆಧಿಕಾರಿ ಜಿ.ಸಿದ್ದಲಿಂಗಪ್ಪ, ಮೌಲ್ಯಮಾಪಕ ರಂಗನಾಥ್, ಮುಖ್ಯೋಪಾಧ್ಯಾಹಿನಿ ವನಿತಾ.ಕೆ, ಮುಂಬೈಯ ಸಮಾಜ ಸೇವಕಿ ಪ್ರಭಾ ಸುವರ್ಣ, ಸಮಾಜ ಸೇವಕಿ ಸತ್ಯವತಿ ಚಂದ್ರಶೇಖರ್ ರಾಜು, ಶಿಲ್ಪ ಕಿರಣ್, ಸಮಾಜ ಸೇವಕಿ ಡಾ.ಸಂಸಾದ್, ಚಲನಚಿತ್ರನಟಿಗಳಾದ ಭೃಂದಾ, ಭೂಮಿಕಾ ರವರಿಗೆ ಹೃದಯವಂತರು – 2022 ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಮಹಾಪೌರ ಎಂ.ಗೌತಮ್ ಕುಮಾರ್, ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ ಕಾರ್ಪೋರೇಶನ್ ಅಧ್ಯಕ್ಷ ಡಿ.ಎಸ್ ವೀರಯ್ಯ, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಬಿಬಿಎಂಪಿ ಮಾಜಿ ಮೇಯರ್ ಗೌತಮ್ ಕುಮಾರ್, ಕ್ಷೇಮಾಭಿವೃದ್ದಿ ಸಂಘದ ಪ್ರ.ಕಾರ್ಯದರ್ಶಿ ಕೆ.ಜಿ ರವಿ, ಕನ್ನಡ ಸಂಘದ ಅಧ್ಯಕ್ಷ ಸಾಯಿಶಂಕರ್ ಉಪಸ್ಥಿತರಿದರು.
ಹೃದಯವಾಹಿನಿ ಅಧ್ಯಕ್ಷ ಕೆ.ಪಿ ಮಂಜುನಾಥ್ ಸಾಗರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್ ಸ್ವಾಗತಿಸಿದರು.ಧನಂಜಯ ಮತ್ತು ಮುರಲಿಕೃಷ್ಣ ಎನ್ ಕಾರ್ಯಕ್ರಮ ನಿರೂಪಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.