35 ಗ್ರಾಂ ಬೆಳ್ಳಿಯಲ್ಲಿ ಪಾರ್ಲಿಮೆಂಟ್ ಭವನ ನಿರ್ಮಾಣ ಮಾಡಿದ ಮಿಲಿಂದ್ ಅಣ್ವೇಕರ್
Team Udayavani, Aug 13, 2022, 7:42 AM IST
ಕಾರವಾರ: ಅತಿ ಕಡಿಮೆ ಚಿನ್ನ ಬಳಸಿ ಪೆಂಡೆಂಟ್, ಲಾಕೆಟ್ ನಿರ್ಮಿಸಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸೇರಿದ್ದ ಕಾರವಾರ ಕಡವಾಡ ನಿವಾಸಿ ಮಿಲಿಂದ್ ಅಣ್ವೇಕರ್ ಅವರು ಈಗ 35 ಗ್ರಾಂ ಬೆಳ್ಳಿ ಬಳಸಿ ಪಾರ್ಲಿಮೆಂಟ್ ಭವನದ ಕಲಾಕೃತಿ ರೂಪಿಸಿ ದಾಖಲೆ ಬರೆದಿದ್ದಾರೆ. ಇದಕ್ಕೆ ಅವರು ತೆಗೆದುಕೊಂಡ ಸಮಯ ಕೇವಲ 5 ದಿನ ಮಾತ್ರ!
75ನೇ ಸ್ವಾತಂತ್ರ್ಯೋತ್ಸವ ಆಚರಣೆ ಸಂದರ್ಭದಲ್ಲಿ ಈ ಕಲಾಕೃತಿ ನಿರ್ಮಿಸಿದ್ದಾರೆ. 2 ಇಂಚು ಅಗಲ, 1.5 ಇಂಚು ಎತ್ತರ ಇರುವ ಈ ಪಾರ್ಲಿಮೆಂಟ್ ಭವನದ ಮೇಲೆ ರಾಷ್ಟ್ರಧ್ವಜ ಹಾರಾಡುವ ಕಲಾಕೃತಿ ರೂಪಿಸಿದ್ದಾರೆ.
ಹಿಂದೆ ಅವರು 0.960 ಗ್ರಾಂ ಚಿನ್ನದಲ್ಲಿ ತೆಂಡೂಲ್ಕರ್ ಚೈನ್ ತಯಾ ರಿಸಿ ಲಿಮ್ಕಾ ದಾಖಲೆ ಮಾಡಿ ದ್ದರು. ತಿರುಗುವ ಪೆಂಡೆಂಟ್, 1.3 ಸೆಂ.ಮೀ.ನ ಚಿನ್ನದ ಫ್ಯಾನ್, ಎಂಟು ಗ್ರಾಂ ಚಿನ್ನದಲ್ಲಿ ಉಂಗು ರದ ಮೇಲೆ ತಾಜ್ ಮಹಲ್, ಕಟ್ಟಿಗೆಯ ಆಕೃತಿಯಲ್ಲಿ ಬಂಗಾರದ ಪೆಂಡೆಂಟ್, ಕೇವಲ 12 ಗ್ರಾಂ ಚಿನ್ನದಲ್ಲಿ ಹಂಪಿಯ ಕಲ್ಲಿನ ರಥ, 54 ಗ್ರಾಂ ತೂಕದಲ್ಲಿ ಬೆಳ್ಳಿ, ಬಂಗಾರ, ತಾಮ್ರ ಮಿಶ್ರಿತ ಕೇದಾರನಾಥ ದೇವಾಲಯದ ಪುಟ್ಟ ಕೃತಿ, 36 ಗ್ರಾಂ ಬೆಳ್ಳಿ ಬಳಸಿ ವಿಜಯ ರಥ, ರಥವನ್ನು ಹೋಲುವ ಆಕಾಶ ಬುಟ್ಟಿಯನ್ನೂ ರಚಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.