ವಿವಾದದ ಹೇಳಿಕೆಯೇ ʼಲಾಲ್‌ ಸಿಂಗ್‌ ಚಡ್ಡಾʼ ಕ್ಕೆ ಮುಳುವಾಯಿತೇ? : ಟ್ರೋಲ್‌ ಆದ್ರು ಬೇಬೋ

ಖಾನ್‌ ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿ ಅವರ ಚಿತ್ರಗಳನ್ನು ನೋಡಬಾರದೆನ್ನುವ ಅಭಿಯಾವನ್ನೇ ಶುರು ಮಾಡಿದ್ದರು.

Team Udayavani, Aug 13, 2022, 3:29 PM IST

tdy-7

ಮುಂಬಯಿ: ಮಿಸ್ಟರ್‌ ಪರ್ಫೆಕ್ಟ್‌ ಆಮಿರ್‌ ಖಾನ್‌ ನಟನೆಯ ಬಹು ನಿರೀಕ್ಷಿತ ʼಲಾಲ್‌ ಸಿಂಗ್‌ ಚಡ್ಡಾʼ ಸಿನಿಮಾ ರಿಲೀಸ್‌ ಆಗಿ ದೊಡ್ಡ ಮಟ್ಟದ ಸದ್ದು ಮಾಡುತ್ತದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ.  ಸಿನಿಮಾದ ಮೊದಲ ದಿನದ ಗಳಿಕೆಯಿಂದ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಕಮಾಲ್‌ ಮಾಡಿಲ್ಲ ಎನ್ನುವುದು ಸಾಬೀತಾಗಿದೆ.

1994 ರಲ್ಲಿ ಬಂದ ʼಫಾರೆಸ್ಟ್‌ ಗಂಪ್‌ʼ ರಿಮೇಕ್‌ ಚಿತ್ರವಾಗಿರುವ ʼಲಾಲ್‌ ಸಿಂಗ್‌ ಚಡ್ಡಾʼದಲ್ಲಿ ಬಹು ಸಮಯದ ಬಳಿಕ ಆಮಿರ್‌ ಖಾನ್‌ ಹಾಗೂ ಕರೀನಾ ಕಪೂರ್‌ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರ ಸಟ್ಟೇರಿದ ದಿನದಿಂದ ಒಂದಲ್ಲ ಒಂದು ಕಾರಣಕ್ಕೆ ಚರ್ಚೆಯಲ್ಲಿತ್ತು. ಇದೀಗ ಚಿತ್ರ ಬಿಡುಗಡೆಯಾದ ಬಳಿಕವೂ ಚಿತ್ರದ ಬಗ್ಗೆ ಪಾಸಿಟಿವ್‌ – ನೆಗೆಟಿವ್‌ ರೆಸ್ಪಾನ್ಸ್‌ ಜೋರಾಗಿ ಸುದ್ದಿಯಾಗುತ್ತಿದೆ.

ವಿವಾದದ ಹೇಳಿಕೆಯೇ ಬಹಿಷ್ಕಾರಕ್ಕೆ ಕಾರಣವಾಯಿಯೇ? :  ಆಮಿರ್‌ ಖಾನ್‌ ಈ ಹಿಂದೆ ಕೊಟ್ಟ ಕೆಲವೊಂದು ಹೇಳಿಕೆಗಳು ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿತ್ತು. ಪದೇ ಪದೇ ಈ ರೀತಿಯ ಹೇಳಿಕೆ ಕೊಟ್ಟ ಆಮಿರ್‌ ಖಾನ್‌ ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿ ಅವರ ಚಿತ್ರಗಳನ್ನು ನೋಡಬಾರದೆನ್ನುವ ಅಭಿಯಾವನ್ನೇ ಶುರು ಮಾಡಿದ್ದರು.

ಈ ಘಟನೆಗೆ ತುಪ್ಪ ಹಾಕಿದಂತೆ ನಟಿ ಕರೀನಾ ಕಪೂರ್‌ ಕೂಡ ಕೆಲ ದಿನಗಳ ಹಿಂದೆ, ʼಬಾಯ್ಕಾಟ್ ಲಾಲ್ ಸಿಂಗ್‌ ಚಡ್ಡಾʼ ಟ್ವಿಟರ್‌ ಅಭಿಯಾನದ ವಿರುದ್ಧ ಹರಿಹಾಯ್ದು ನಮ್ಮ ಚಿತ್ರಗಳನ್ನು ಇಷ್ಟಪಡದವರು, ನಮ್ಮ ಚಿತ್ರವನ್ನು ನೋಡುವ ಅಗತ್ಯವಿಲ್ಲ, ನಮ್ಮ ಸಿನಿಮಾ ನೋಡಿ ಎಂದು ಯಾರು ಹೇಳುವುದಿಲ್ಲ ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆ ಉರಿಯುತ್ತಿದ್ದ ವಿವಾದಕ್ಕೆ ಮತ್ತಷ್ಟು ಕಿಚ್ಚು ಹಚ್ಚುವಂತೆ ಮಾಡಿತ್ತು. ಆ ಬಳಿಕ ಕರೀನಾ ಕಪೂರ್‌ ತಮ್ಮ ಮಾತು ಬದಲಾಯಿಸಿ, ಚಿತ್ರ ರಿಲೀಸ್‌ ಗೆ ಹತ್ತಿರವಾಗುತ್ತಿದ್ದಂತೆ ʼದಯವಿಟ್ಟು ಲಾಲ್‌ ಸಿಂಗ್‌ ಚಡ್ಡಾವನ್ನು ಬಾಯ್‌ ಕಾಟ್‌ ಮಾಡಬೇಡಿ, ನೀವು ಉತ್ತಮವಾದ ಸಿನಿಮಾವನ್ನು ಬಾಯ್‌ ಕಾಟ್‌ ಮಾಡುತ್ತಿದ್ದೀರಿ, ನಾವು 250 ಮಂದಿ ಈ ಸಿನಿಮಾಕ್ಕಾಗಿ ತುಂಬಾ ಶ್ರಮಪಟ್ಟಿದ್ದೇವೆ. ದಯವಿಟ್ಟು ನಮ್ಮ ಸಿನಿಮಾವನ್ನು ನೋಡಿ ಎಂದಿದ್ದರು..

ಸದ್ಯ ಈ ಮಾತುಗಳು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್‌ ಆಗುತ್ತಿವೆ. ಕರೀನಾ ಕಪೂರ್‌ ಪರೋಕ್ಷವಾಗಿ ಸಿನಿಮಾದ ಸೋಲಿಗೆ ಕಾರಣವೆಂದು ಹೇಳಿ ಟ್ರೋಲ್‌ ಮಾಡುತ್ತಿದ್ದಾರೆ.

ಟ್ರೇಡ್‌ ವರದಿಯ ಪ್ರಕಾರ ಲಾಲ್‌ ಸಿಂಗ್‌ ಚಡ್ಡಾ ಮೊದಲ ದಿನ 11.70 ಕೋಟಿ ಕಲೆಕ್ಷನ್‌ ಮಾಡಿದೆ. ಇದು ಆಮಿರ್‌ ಖಾನ್‌ ವೃತ್ತಿ ಜೀವನದಲ್ಲಿ ಅತ್ಯಂತ ಕಡಿಮೆ ಗಳಿಕೆ ಕಂಡ ಸಿನಿಮಾ ಎನ್ನಲಾಗಿದೆ.

ಟಾಪ್ ನ್ಯೂಸ್

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

police crime

Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

1-dee

Maha Kumbh; 7 ಕೋಟಿ ರುದ್ರಾಕ್ಷಿಗಳಿಂದ 12 ಜ್ಯೋತಿರ್ ಲಿಂಗಗಳ ರಚನೆ

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ

4

Blue City Of Blue Color:ಇದು ಭಾರತದಲ್ಲಿರುವ ಜಗತ್ತಿನ ಏಕೈಕ ನೀಲಿ ನಗರ! ಏನಿದರ ವಿಶೇಷತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragedy: ರಸ್ತೆ ಅಪಘಾತ.. ಆಡಿಷನ್ ಗೆ ತೆರಳುತ್ತಿದ್ದ ಕಿರುತೆರೆ ನಟ ಅಮನ್ ಜೈಸ್ವಾಲ್ ದುರ್ಮರಣ

Tragedy: ರಸ್ತೆ ಅಪಘಾತ.. ಆಡಿಷನ್ ಗೆ ತೆರಳುತ್ತಿದ್ದ ಕಿರುತೆರೆ ನಟ ಮೃತ್ಯು…

1-sss

Saif Ali Khan ಇರಿತ: 2 ದಿನ ಕಳೆದರೂ ಸಿಗದ ಆರೋಪಿ!

kangana-2

Emergency; ಪಂಜಾಬ್ ನಲ್ಲಿ ಬ್ಯಾನ್ ಗೆ ಒತ್ತಾಯ: ಸಂಪೂರ್ಣ ದೌರ್ಜನ್ಯ ಎಂದ ಕಂಗನಾ

Bollywood: ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಕಂಗನಾ ʼಎಮರ್ಜೆನ್ಸಿʼ ಫುಲ್‌ ಮೂವಿ ಲೀಕ್

Bollywood: ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಕಂಗನಾ ʼಎಮರ್ಜೆನ್ಸಿʼ ಫುಲ್‌ ಮೂವಿ ಲೀಕ್

Saif Ali Khan: ಬಂಧಿತ ವ್ಯಕ್ತಿಗೂ ಸೈಫ್‌ ಅಲಿಖಾನ್‌ ಪ್ರಕರಣಕ್ಕೂ ಸಂಬಂಧವಿಲ್ಲ – ಪೊಲೀಸರು

Saif Ali Khan: ಬಂಧಿತ ವ್ಯಕ್ತಿಗೂ ಸೈಫ್‌ ಅಲಿಖಾನ್‌ ಪ್ರಕರಣಕ್ಕೂ ಸಂಬಂಧವಿಲ್ಲ – ಪೊಲೀಸರು

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

puttige-8-

Puthige Matha: ವಿಶ್ವ ಗೀತಾ ಪರ್ಯಾಯಕ್ಕೆ‌ ಇಂದಿಗೆ ವರ್ಷ ಪೂರ್ಣ

police crime

Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.