ಲಸಿಕೆಗೆ ತಿರಸ್ಕಾರ: ನೊವಾಕ್ ಜೊಕೊವಿಕ್ ಸಿನ್ಸಿನಾಟಿಯಲ್ಲೂ ಆಡಲ್ಲ
Team Udayavani, Aug 13, 2022, 9:45 PM IST
ಸಿನ್ಸಿನಾಟಿ: ಖ್ಯಾತ ಆಟಗಾರ ನೊವಾಕ್ ಜೊಕೊವಿಕ್ಇನ್ನೂ ಕೊರೊನಾ ಸೋಂಕಿಗೆ ಯಾವುದೇ ಲಸಿಕೆ ಹಾಕಿಸಿಕೊಂಡಿಲ್ಲ. ಈ ಕಾರಣಕ್ಕಾಗಿ ಅವರಿಗೆ ಅಮೆರಿಕಕ್ಕೆ ಪ್ರಯಾಣಿಸಲು ಅನುಮತಿ ನೀಡಲಾಗಿಲ್ಲ.
ಹೀಗಾಗಿ ಮುಂದಿನ ವಾರದಿಂದ ಸಿನ್ಸಿನಾಟಿಯಲ್ಲಿ ಆರಂಭವಾಗುವ ಹಾರ್ಡ್ಕೋರ್ಟ್ ಕೂಟದಿಂದ ಅವರು ಹಿಂದೆ ಸರಿದಿದ್ದಾರೆ. ಇದೇ ಕಾರಣಕ್ಕಾಗಿ ಆ.29ರಿಂದ ನ್ಯೂಯಾರ್ಕ್ನಲ್ಲಿ ಪ್ರಾರಂಭವಾಗುವ ವರ್ಷದ ಕೊನೆಯ ಗ್ರ್ಯಾನ್ಸ್ಲಾಮ್ ಕೂಟವಾದ ಯುಎಸ್ ಓಪನ್ನಲ್ಲೂ ಅವರು ಆಡಲು ಸಾಧ್ಯವಿಲ್ಲ.
ಸರ್ಬಿಯದ 35ರ ಹರೆಯದ ಜೊಕೊವಿಚ್ ಇಷ್ಟರವರೆಗೆ 21 ಗ್ರ್ಯಾನ್ಸ್ಲಾಮ್ ಕೂಟದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಪುರುಷರ ವಿಭಾಗದಲ್ಲಿ ಗರಿಷ್ಠ ಗ್ರ್ಯಾನ್ಸ್ಲಾಮ್ ಗೆದ್ದ ರಫಾಯೆಲ್ ನಡಾಲ್ ಸಾಧನೆಯನ್ನು ಸಮಗಟ್ಟಲು ಜೊಕೊವಿಚ್ ಅವರಿಗಿನ್ನು ಒಂದು ಪ್ರಶಸ್ತಿ ಬೇಕಾಗಿದೆ.
ಕೊರೊನಾ ಸೋಂಕು ಬಾರದಿರಲು ಲಸಿಕೆ ಹಾಕಿಸಿಕೊಳ್ಳಲು ನನಗೆ ಇಷ್ಟವಿಲ್ಲ. ಲಸಿಕೆ ಹಾಕದಿದ್ದರೆ ಕೆಲವು ಕೂಟಗಳಲ್ಲಿ ಆಡಲು ಬಿಡದಿದ್ದರೂ ನನಗೇನೂ ಚಿಂತೆಯಲ್ಲ ಎಂದವರು ಹೇಳಿದ್ದಾರೆ. ಈ ಕಾರಣಕ್ಕಾಗಿ ಈ ವರ್ಷದ ಆಸ್ಟ್ರೇಲಿಯನ್ ಓಪನ್ನಲ್ಲೂ ಅವರು ಆಡಿರಲಿಲ್ಲ. ಮಾತ್ರವಲ್ಲದೇ ಈ ವಾರ ಮಾಂಟ್ರಿಯಲ್ನಲ್ಲಿ ನಡೆದ ಕೂಟ ಸಹಿತ ಅಮೆರಿಕದಲ್ಲಿ ಈ ಹಿಂದೆ ನಡೆದ ಎರಡು ಕೂಟಗಳಲ್ಲಿ ಅವರು ಆಡಿರಲಿಲ್ಲ. ಮೂರು ಬಾರಿಯ ಯುಎಸ್ ಚಾಂಪಿಯನ್ ಆಗಿರುವ ಜೊಕೊವಿಚ್ ಕಳೆದ ವರ್ಷ ಡ್ಯಾನಿಲ್ ಮೆಡ್ವೆಡೇವ್ ಅವರಿಗೆ ಶರಣಾಗಿ ರನ್ನರ್ ಅಪ್ ಸ್ಥಾನ ಪಡೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20; ಸ್ಯಾಮ್ಸನ್ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ
Pro Kabaddi: ಜೈಪುರ್ ಮೇಲೆ ಪಾಟ್ನಾ ಸವಾರಿ
ODI; ಹ್ಯಾರಿಸ್ ರೌಫ್ ಗೆ ಹೆದರಿದ ಆಸೀಸ್ : 9 ವಿಕೆಟ್ಗಳಿಂದ ಗೆದ್ದ ಪಾಕಿಸ್ಥಾನ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.