ಮುಗಿಲೆತ್ತರಕ್ಕೆ ಹಾರಲಿ ಕೀರ್ತಿಪತಾಕೆ


Team Udayavani, Aug 14, 2022, 6:00 AM IST

ಮುಗಿಲೆತ್ತರಕ್ಕೆ ಹಾರಲಿ ಕೀರ್ತಿಪತಾಕೆ

ಬಲಿಷ್ಠ ಭಾರತದ ಅಡಿಪಾಯ ಇರುವುದೇ ಈ ದೇಶದ ಶೈಕ್ಷಣಿಕ, ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಷೇತ್ರದ ಬೆಳವಣಿಗೆಯಲ್ಲಿ. ಕೇವಲ ಆರ್ಥಿಕ ಅಭಿವೃದ್ಧಿಯೊಂದೇ ಸದೃಢ ದೇಶದ ಸಂಕೇತವಲ್ಲ. ಹಿಂದಿನಿಂದಲೂ ಭಾರತ ಸಾಂಸ್ಕೃತಿಕವಾಗಿ ಉತ್ತಮ ಸ್ಥಿತಿಯಲ್ಲೇ ಇದೆ. ಆದರೆ ಶಿಕ್ಷಣ ಮತ್ತು ಕ್ರೀಡೆಯ ವಿಚಾರಕ್ಕೆ ಬಂದರೆ ನಾವು ಇನ್ನಷ್ಟು ಬೆಳೆಯಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ನಾವು ಶೈಕ್ಷಣಿಕ ರಂಗದಲ್ಲೂ ಗಣನೀಯ ಸಾಧನೆ ಮಾಡಿದ್ದೇವೆ. ಇಂದು ಭಾರತದ ಬಹಳಷ್ಟು ಮಂದಿ ಜಾಗತಿಕ ಸಂಸ್ಥೆಗಳಲ್ಲಿ ಸಿಇಒಗಳಂಥ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆದರೆ ಕ್ರೀಡೆಯಲ್ಲಿ ಈಗ ಸಾಧಿಸುತ್ತಿರುವುದು ಏನೇನೂ ಅಲ್ಲ. ದೇಶ ಶತಮಾನೋತ್ಸವ ಆಚರಿಸಿಕೊಳ್ಳುವ ಹೊತ್ತಿಗೆ ಕ್ರೀಡೆಯಲ್ಲಿ ನಾವು ಇನ್ನಷ್ಟು ಬೆಳಗಬೇಕಿದೆ.

ಶಿಕ್ಷಣ ಅಭಿವೃದ್ಧಿಯಲ್ಲ; ಅಭಿವೃದ್ಧಿ ಶಿಕ್ಷಣವಾಗಲಿ
ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಸಾಕ್ಷಿಯಾಗುತ್ತಿದೆ. ಈ ಸಂದರ್ಭದಲ್ಲಿ ಇಲ್ಲಿಯವರೆಗೂ ಹೇಗೆ ನಡೆದುಕೊಂಡು ಬಂದೆವು ಎಂಬುದನ್ನು ಮನನ ಮಾಡಿಕೊಳ್ಳುವ ಜತೆಗೆ ಭವಿಷ್ಯದ ದಿನಗಳು ಹೇಗಿರಬೇಕು ಎಂಬ ಪರಿಕಲ್ಪನೆಯ ಬಗ್ಗೆ ಪ್ರತಿಯೊಬ್ಬರೂ ಚಿಂತನೆ ಮಾಡಬೇಕಿದೆ.

ಮುಂದಿನ ದಿನಗಳು ಎಂದಾಕ್ಷಣ ಪ್ರತಿಯೊಬ್ಬರಲ್ಲಿಯೂ ಅಭಿವೃದ್ಧಿ, ಶಿಕ್ಷಣ, ಆರೋಗ್ಯ…. ಹೀಗೆ ಹಲವಾರು ಕ್ಷೇತ್ರ ಗಳು ಮೊದಲ ಆದ್ಯತೆಯಾಗಿ ನಿಲ್ಲುತ್ತವೆ. ಅದರಲ್ಲಿ ಪ್ರಮುಖವಾಗಿ ಅತ್ಯಗತ್ಯವಾಗಿ ಬೇಕಾಗಿರುವ ಶಿಕ್ಷಣ ಮುಂದಿನ 20-25 ವರ್ಷಗಳಲ್ಲಿ ಹೇಗಿರಬೇಕು ಎಂದರೆ, ಅದು “ಭಾರತೀಯ ವಿಚಾರಧಾರೆಗಳ ಮೇಲೆ ನಿಂತರಬೇಕು’. ಮೌಲ್ಯಯುತ ಹಾಗೂ ಪ್ರಸ್ತುತವಾಗಿರಬೇಕು.

ಭಾರತೀಯ ವಿಚಾರಗಳೆಂದಾಕ್ಷಣ ರಾಮಾಯಣ, ಮಹಾಭಾರತವನ್ನು ತರುವುದಲ್ಲ. ಅದರಲ್ಲಿರುವ ಯಾವ ವಿಚಾರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಸೂಕ್ಷ್ಮತೆ ಯನ್ನು ಅರಿತು, ಚರ್ಚಿಸಬೇಕು. ಇದಾದ ಅನಂತರ ಭಾರತೀಯ ವಿಚಾರಗಳನ್ನು ಮುಕ್ತ ಮನಸ್ಸಿನಿಂದ ನೋಡುವಂತಾಗಬೇಕು. ಸತ್ಯ- ಅಸತ್ಯಗಳನ್ನು ತಿಳಿದು, ಚರ್ಚಿಸಿ, ಇವತ್ತಿನ ಜಮಾನಕ್ಕೆ ಯಾವುದು ಅವಶ್ಯ ಎನಿಸುತ್ತದೆಯೇ ಅದನ್ನು ಭಾವನಾತ್ಮಕವಾಗಿ ತಿಳಿಯದೆ, ವಸ್ತು ನಿಷ್ಠವಾಗಿ ಆಯ್ಕೆ ಮಾಡಿಕೊಳ್ಳುವುದು ಸವಾಲಿನ ವಿಷಯವಾಗಿದೆ.

ಅದಕ್ಕೂ ಮೊದಲು ಭಾರತೀಯ ವಿಚಾರಗಳನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡ ಬಳಿಕ ಆಯ್ಕೆ, ಅನುಷ್ಠಾನ ಮಾಡಬೇಕು. ಅನಂತರವಷ್ಟೇ ಅದನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯಲು ಸಾಧ್ಯವಾಗಲಿದೆ.
ಈ ವಿಚಾರವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮುಂದಿನ 20ರಿಂದ 25 ವರ್ಷಗಳಲ್ಲಿ ಯಾವ ರೀತಿಯ ಶಿಕ್ಷಣವಿರಬೇಕು, ಹೇಗೆ ಪರಿವರ್ತನೆ ಮತ್ತು ಯಾವ್ಯಾವ ವರ್ಷಗಳಲ್ಲಿ ಏನೇನು ಆಗಬೇಕು ಎಂಬ ದೃಷ್ಟಿಕೋನವನ್ನು ವಿವರವಾಗಿ ಹಾಗೂ ಸ್ಪಷ್ಟವಾಗಿ ತಿಳಿಸಿದೆ. ನೀತಿ ಪ್ರಕ್ರಿಯೆ ಸಿದ್ಧಪಡಿಸುವ ವೇಳೆಯಲ್ಲಿಯೇ ಮುಂದಿನ 25 ವರ್ಷ ಗಳಲ್ಲಿ ಏನೇನು ಆಗಬೇಕು ಎಂದು ವೃದ್ಧರು, ವಯಸ್ಕರು, ಮಕ್ಕಳು, ಪೋಷಕರು, ಶಿಕ್ಷಕರು, ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರ ಆಶೋತ್ತರಗಳನ್ನು ಪರಿಗಣಿಸಲಾಗಿದೆ.

ಶಿಕ್ಷಣ ಅಭಿವೃದ್ಧಿಯಲ್ಲ, ಅಭಿವೃದ್ಧಿ ಶಿಕ್ಷಣವಾಗಲಿ:
ಶಿಕ್ಷಣವು ಸಮಾಜದಲ್ಲಿ ಹೇಗೆ ಅಭಿವೃದ್ಧಿಯ ಸಂಕೇತ ಮತ್ತು ಪೂರಕವಾಗಿರಲಿದೆ. “ಶಿಕ್ಷಣದ ಮೂಲಕವೇ ಅಭಿವೃದ್ಧಿ ಸಾಧ್ಯ’ ಎಂಬ ಪರಿಕಲ್ಪನೆಯನ್ನು ಸ್ವಾತಂತ್ರ್ಯದ ಶತಮಾನದ ಹೊತ್ತಿಗೆ ಶಿಕ್ಷಣ ಕ್ಷೇತ್ರದ ತಜ್ಞರು, ಸರಕಾರ ಮತ್ತು ನಾಗರಿಕರಿಗೆ ತಿಳಿಸಬೇಕಿದೆ.

ಅದಕ್ಕಾಗಿ ಶಿಕ್ಷಣದ ಸಂರಚನೆಯನ್ನು ಅಭಿವೃದ್ಧಿಯ ಸಂಕೇತವಾಗಿ ಪರಿಗಣಿಸಬೇಕು. ಇದು ಕೇವಲ ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣಕ್ಕೆ ಸೀಮಿತವಾಗದೆ, ಇವೆರ ಡನ್ನೂ ಸಮಾಗಮಗೊಳಿಸುವ ಸಮಗ್ರ ದೃಷ್ಟಿಕೋನ ಹೊಂದಿರಬೇಕು. ವಿದ್ಯಾರ್ಥಿ ಜೀವನಕ್ಕೆ ಮಾತ್ರ ಕಲಿಕೆ ನಿಲ್ಲಿಸದೆ, ಜೀವನಪರ್ಯಂತ ಕಲಿಯುವಂತಿರಬೇಕು. ಪಠ್ಯಕ್ಕೆ ಸೀಮಿತವಾಗದೆ, ಜೀವನದ “ಕಲಿಕೆಯಿಂದ ಕಲಿಕೆ’ ಎಂಬ ಸಮಗ್ರ ಶಿಕ್ಷಣ ನೀಡಿದಾಗ ಅಮೂಲಾಗ್ರ ಅಭಿವೃದ್ಧಿ ಸಾಧ್ಯವಾಗಲಿದೆ.

ಪ್ರಸ್ತುತ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣವು ಸಂಬಂಧವಿಲ್ಲದಂತಾಗಿದೆ. ಶಾಲಾ ಶಿಕ್ಷಣ ಮುಗಿಸಿದ ಅನಂತರ ವಿದ್ಯಾರ್ಥಿಗಳು ಮುಂದೆ ಯಾವ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ ನಿರ್ಮಾಣವಾಗುವ ಸ್ಥಿತಿ ಇದೆ. ಶಾಲಾ ಶಿಕ್ಷಣದಲ್ಲಿ ಸೃಜನಾತ್ಮಕ ಶಿಕ್ಷಣಕ್ಕೆ ಬೇಕಾದ ಸಿದ್ಧತೆಗಳು ದೊರೆತಾಗ ಗುಣಮಟ್ಟದ ಉನ್ನತ ಶಿಕ್ಷಣ ದೊರೆಯಲು ಸಾಧ್ಯವಾಗ ಲಿದೆ. ಆದ್ದರಿಂದ ಒಂದಕ್ಕೊಂದು ಕೊಂಡಿಯಾಗಿ ಕಾರ್ಯನಿರ್ವಹಿಸುವಂತೆ ಮಾಡ ಬೇಕು. ಶಾಲಾ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ, ಕೌಶಲ, ವೈದ್ಯಕೀಯ, ತಾಂತ್ರಿಕ ಸೇರಿ ಎಲ್ಲ ಶಿಕ್ಷಣವು ಅಂತರ ಕಾಯ್ದುಕೊಳ್ಳದೆ, ಸಮಗ್ರ ಮತ್ತು ಸೃಜನಾತ್ಮಕವಾಗಿರಬೇಕು.

ಮೌಲ್ಯ ಬೆಳೆಸುವ ಶಿಕ್ಷಣ ಅಗತ್ಯ: ಜಗತ್ತಿನ ನಾಗರಿಕತೆ ಯಲ್ಲಿ ಭಾರತೀಯ ಶಿಕ್ಷಣ ಮತ್ತು ಸಂಸ್ಕೃತಿಗೆ ವಿಶೇಷ ಸ್ಥಾನ ವಿರುವ ಕಾರಣ ಇವೆಲ್ಲವೂ “ಭಾರತೀಯ ಶಿಕ್ಷಣದ ಅಡಿಪಾಯದಲ್ಲಿಯೇ ನಡೆಯಬೇಕು. ಮಗುವಿನ ಕಲಿಕೆಯ ಆರಂಭದ ಹಂತ ವಾದ 3ರಿಂದ 5 ವರ್ಷದಲ್ಲಿ ಭದ್ರ ಬುನಾದಿ ಹಾಕ ಬೇಕು. ಈ ಅವಧಿಯಲ್ಲಿ ಮಕ್ಕಳಲ್ಲಿ ಮೌಲ್ಯ ವನ್ನು ಬೆಳೆಸುವ ಹಾಗೂ ಪರಿಸರ ಸಂರಕ್ಷಣೆ ಯಂತಹ ವಿಷಯಗಳನ್ನು ಆಟ-ಪಾಠದ ಮೂಲಕ ತುಂಬಾ ಸುಲಭವಾಗಿ ಕಲಿಸ ಬೇಕು. ಈ ಶಿಕ್ಷಣವು ಮಗುವಿನ ಬೌದ್ಧಿಕ, ಶಾರೀರಿಕ, ಮಾನಸಿಕ, ಆಂತರಿಕ, ಕಲಾತ್ಮಕ ಮತ್ತು ತಾಂತ್ರಿಕ ವಾಗಿ ಜೀವನದ ಎಲ್ಲ ಆಯಾಮ ಗಳಲ್ಲಿ ಸರ್ವಾಂಗೀಣ ವಿಕಾಸವಾಗುವಂತಿರಬೇಕು.

ಪ್ರಮುಖ ಸವಾಲುಗಳು: ಹೊಸ ಯುಗಕ್ಕೆ ನಾವು ಬದಲಾಗಬೇಕಾದರೆ ಅದಕ್ಕೂ ಮೊದಲು ಹತ್ತಾರು ದಶಕಗಳಿಂದ ನಡೆದುಕೊಂಡು ಬಂದಿರುವ ಶಿಕ್ಷಣ ಕ್ಷೇತ್ರ ದಲ್ಲಿನ ನೀತಿ ಮತ್ತು ಮನಃಸ್ಥಿತಿ ಬದಲಾಗಬೇಕು.

ಪ್ರಸ್ತುತ ಶಿಕ್ಷಣದಲ್ಲಿ ವಾಣಿಜ್ಯ ವಿದ್ಯಾರ್ಥಿ ಮನಃಶಾಸ್ತ್ರ, ಕಲೆ, ವಿಜ್ಞಾನ ಏಕೆ ಓದಬೇಕು ಎಂಬ ಮನಃಸ್ಥಿತಿ ಬಿಟ್ಟು ಎಲ್ಲವನ್ನೂ ಕಲಿಯುವ ಮನಃಸ್ಥಿತಿ ಬೆಳೆಸಿಕೊಂಡಾಗ ಬಹು ವಿಷಯಗಳನ್ನು ಒಳಗೊಂಡ ಶಿಕ್ಷಣ ಸಿಗಲಿದೆ.
ಈಗಿನ ವ್ಯವಸ್ಥೆಯಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳು ಮೇಲಧಿಕಾರಿಗಳಿಂದ ನಿಯಂತ್ರಣಗೊಳ್ಳುತ್ತಿವೆ. ಹೇಳಿ ದಷ್ಟನ್ನು ಮಾಡುವುದು ಕೆಳಗಿರುವವವರ ಕೆಲಸವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರತೀ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಿಗೆ ಸ್ವಾಯತ್ತೆ ಸಿಗಲಿದೆ. ಪಠ್ಯಕ್ರಮ, ಕಲಿಸುವ ವಿಧಾನಗಳಲ್ಲಿ ಸ್ವಾತಂತ್ರ್ಯ ಸಿಗಲಿದೆ. ಇದರಿಂದ ಸಂಬಂಧಪಟ್ಟ ವಿ.ವಿ., ಕಾಲೇಜುಗಳಲ್ಲಿ ಸ್ವತಂತ್ರವಾಗಿ ಯೋಚಿಸುವ, ಆಲೋಚಿಸುವ ಕ್ರಮ ಬರಲಿದೆ.

ವಿದ್ಯಾರ್ಥಿಯು ಜಗತ್ತನ್ನು ವಿಸ್ತಾರವಾಗಿ ನೋಡಿದಾಗ ಹಾಗೂ ಹೆಚ್ಚಿನ ವಿಷಯಗಳನ್ನು ತಿಳಿದಾಗ ವಿಶ್ವಾಸ ಬರಲಿದೆ. ನಮ್ಮ ಪ್ರಾದೇಶಿಕತೆಯ ಜತೆಗೆ ಬೇರೆಯದನ್ನೂ ಕಲಿತಾಗ ಮುಕ್ತ ಅವಕಾಶಗಳು ದೊರೆಯಲಿವೆ. ಆದ್ದರಿಂದ ನಮ್ಮ ಶೈಕ್ಷಣಿಕ ಸಂಸ್ಥೆಯನ್ನು ನಿರ್ವಹಣೆ ಮಾಡುವ ರೀತಿ ಬದಲಾಗ ಬೇಕು. ಗುಣಮಟ್ಟ, ನಿರ್ವಹಣೆ, ಸಿಬಂದಿ ಎಲ್ಲ ವಿಷಯಗ ಳಲ್ಲಿಯೂ ಗುಣಾತ್ಮಕತೆ ಕಾಯ್ದುಕೊಳ್ಳಬೇಕು. ಕೇವಲ ಪ್ರಮಾಣಪತ್ರ ವಿತರಣೆಗಾಗಿ ಮಾತ್ರ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದಲ್ಲ, ಸವಾಲುಗಳನ್ನು ಎದುರಿ ಸುವಂತಹ ಶಿಕ್ಷಣವನ್ನು ಅಗತ್ಯಗಳಿಗೆ ತಕ್ಕಂತೆ ರೂಪಿಸುವ ಶಿಕ್ಷಣ ಸಂಸ್ಥೆಗಳು ಬೇಕಿದೆ.

ವಿದ್ಯಾರ್ಥಿಗಳ ಅಗತ್ಯ ಮತ್ತು ಅಪೇಕ್ಷೆಗೆ ತಕ್ಕಂತೆ ಶಿಕ್ಷಣ ನೀಡಬೇಕು. ವಿದ್ಯಾರ್ಥಿಗಳ ಅಗತ್ಯ ಏನು ಎಂಬುದನ್ನು ತಿಳಿಯುವುದು ಮಾತ್ರವಲ್ಲ, ಅದಕ್ಕೆ ತಕ್ಕಂತೆ ನಿರಂತರವಾಗಿ ಬದಲಾಗಬೇಕು. ಬದಲಾವಣೆಯ ಪ್ರಕ್ರಿಯೆಯನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ಶಿಕ್ಷಣ ಸಂಸ್ಥೆಗಳಿಗೆ ಇರಬೇಕಾಗುತ್ತದೆ. ಮುಂದಿನ 25 ವರ್ಷಗಳಲ್ಲಿ ಈ ಸವಾಲುಗಳನ್ನು ಮೆಟ್ಟಿ ನಿಂತರೆ ಭಾರತೀಯ ಶಿಕ್ಷಣ ಪದ್ಧತಿ ಯಲ್ಲಿ ಬದಲಾವಣೆ ತರಲು ಸಾಧ್ಯವಾಗಲಿದೆ. ಇದು ಶಿಕ್ಷಣ ಪದ್ಧತಿಯಲ್ಲಿ ಮಾತ್ರವಲ್ಲ, ಭಾರತದಲ್ಲಿ ಎಲ್ಲ ರಂಗಗಳಲ್ಲಿಯೂ ಬದಲಾವಣೆಗೆ ನಾಂದಿ ಹಾಡಿದಂತಾಗುತ್ತದೆ.

-ಎಂ.ಕೆ. ಶ್ರೀಧರ್‌, ಶಿಕ್ಷಣ ತಜ್ಞರು

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

1-pro

Pro Kabaddi: ಜೈಪುರ್‌ ಮೇಲೆ ಪಾಟ್ನಾ ಸವಾರಿ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rangavaibhava

Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

Donald Trump Salry: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…

Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…

Kannada-Horata

Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

Manipal: ಸವಾಲು ಮೆಟ್ಟಿ ನಿಂತಾಗ ಸುಸ್ಥಿರ ಜೀವನ: ಡಾ| ಜಗದೀಶ್‌

Manipal: ಸವಾಲು ಮೆಟ್ಟಿ ನಿಂತಾಗ ಸುಸ್ಥಿರ ಜೀವನ: ಡಾ| ಜಗದೀಶ್‌

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.