ರವಿವಾರದ ರಾಶಿ ಫಲ… : ಇಲ್ಲಿದೆ ನಿಮ್ಮ ರಾಶಿಯ ಗ್ರಹ ಗತಿ
Team Udayavani, Aug 14, 2022, 7:18 AM IST
ಮೇಷ: ಘರ್ಷಣೆಗೆ ಅವಕಾಶ ನೀಡದೇ ಪಾರದರ್ಶಕತೆಗೆ ಆದ್ಯತೆ ನೀಡಿ ಕಾರ್ಯನಿರ್ವಹಿಸುವುದರಿಂದ ಉದ್ಯೋಗ ವ್ಯವಹಾರಗಳಲ್ಲಿ ಯಶಸ್ಸು ಲಭ್ಯ. ಧನಾಗಮನ ಅತ್ಯುತ್ತಮ. ಭೂಮ್ಯಾದಿ ವ್ಯವಹಾರಗಳಲ್ಲಿ ಪ್ರಗತಿ.
ವೃಷಭ: ಧಾರ್ಮಿಕ ಕ್ಷೇತ್ರ ಸಂದರ್ಶನ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿಯಿಂದ ಕೂಡಿದ ಬದಲಾವಣೆ. ಸಾಂಸಾರಿಕ ಸುಖ ಮಧ್ಯಮ. ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಹೆಚ್ಚಿನ ನಿರೀಕ್ಷೆ ಸಲ್ಲದು.
ಮಿಥುನ: ನಿರೀಕ್ಷೆಯಂತೆ ಉತ್ತಮ ವಾಕ್‌ಚತುರತೆಯಿಂದ ಹೆಚ್ಚಿದ ಧನಲಾಭ. ಆರೋಗ್ಯ ಗಮನಿಸಿ. ದೂರದ ವ್ಯವಹಾರಗಲ್ಲಿ ಪ್ರಗತಿ. ಸಹೋದರ ಸಮಾನರಿಂದ ಪ್ರೋತ್ಸಾಹ ಸಹಕಾರ. ವಿದ್ಯಾರ್ಜನೆಯಲ್ಲಿ ತಲ್ಲೀನತೆ. ವಿದ್ಯಾರ್ಥಿಗಳ ನಿಮಿತ್ತ ಪರಿಶ್ರಮ.
ಕರ್ಕ: ಉದ್ಯೋಗ ವ್ಯವಹಾರಗಳಲ್ಲಿ ಸಫಲತೆ ಗಳಿಸಲು ಹೆಚ್ಚು ತಾಳ್ಮೆ ಪರಿಶ್ರಮ ಅಗತ್ಯ. ಆರೋಗ್ಯ ಗಮನಿಸಿ. ಹಣಕಾಸಿನ ವಿಚಾರದಲ್ಲಿ ಜಾಗ್ರತೆಯ ನಡೆಯಿಂದ ನೆಮ್ಮದಿ ಲಭಿಸೀತು. ಗುರುಹಿರಿಯರಲ್ಲಿ ಚರ್ಚೆಗೆ ಆಸ್ಪದ ನೀಡದಿರಿ. ಆಸ್ತಿ ವಿಚಾರದಲ್ಲಿ ತಲ್ಲೀನತೆ.
ಸಿಂಹ: ಆರೋಗ್ಯದ ಬಗ್ಗೆ ಗಮನಿಸಿ. ದೀರ್ಘ ಪ್ರಯಾಣದಲ್ಲಿ ಸರಿಯಾದ ನಿಯಮ ಪಾಲಿಸಿ. ಉದ್ಯೋಗ ವ್ಯವಹಾರದಲ್ಲಿ ಅತೀ ಉದಾರತೆಯಿಂದ ತೊಂದರೆ ಸಂಭವ. ಹಣಕಾಸಿನ ಬಗ್ಗೆ ಪಾರದರ್ಶಕತೆ ಇರಲಿ. ವಿಶ್ರಾಂತಿಗೆ ಗಮನಹರಿಸಿ.
ಕನ್ಯಾ: ಸ್ವಜನರಲ್ಲಿ ವಿಶ್ವಾಸ ಪ್ರೀತಿ ಆತ್ಮೀಯತೆ ತೋರುವುದರಿಂದ ಗೌರವಾದಿ ವೃದ್ಧಿ. ಜಲೋತ್ಪನ್ನ ವಸ್ತುಗಳ ಕ್ರಯವಿಕ್ರಯದಲ್ಲಿ ಹೆಚ್ಚಿದ ವರಮಾನ. ಉತ್ತಮ ವಾಕ್ ಚತುರತೆಯಿಂದ ಜನರಂಜನೆ. ಸಾಂಸಾರಿಕ ಸುಖ ವೃದ್ಧಿ. ಮಕ್ಕಳಿಂದ ಸಂತೋಷ.
ತುಲಾ: ಬಂಧುಮಿತ್ರರ ಸಹಕಾರ. ಗೃಹದಲ್ಲಿ ಸಂತಸದ ವಾತಾವರಣ. ದೂರದ ಮಿತ್ರರ ಸಮಾಗಮ. ಪಾಲುದಾರಿಕಾ ವ್ಯವಹಾರಗಳಲ್ಲಿ ಹೆಚ್ಚಿದ ಅಭಿವೃದ್ಧಿ. ಯೋಚಿಸಿದಂತೆ ಕಾರ್ಯ ಸಫಲತೆಯಿಂದ ಮನಃ ಸಂತೋಷ. ಗುರುಹಿರಿಯರಿಂದ ಸೂಕ್ತ ಸಲಹೆ.
ವೃಶ್ಚಿಕ: ದೈರ್ಯ ಶೌರ್ಯದಿಂದ ಕೂಡಿದ ಕಾರ್ಯ ವೈಖರಿ. ಕೆಲಸ ಕಾರ್ಯಗಳಲ್ಲಿ ಕೀರ್ತಿ ಸಂಪಾದನೆ. ನಿರೀಕ್ಷಿತ ಗೌರವಾನ್ವಿತ ಧನ ಸಂಪತ್ತು ವೃದ್ಧಿ. ಧಾರ್ಮಿಕ ಕ್ಷೇತ್ರ ಸಂದರ್ಶನ. ದೂರದ ಮಿತ್ರರ ಗುರುಹಿರಿಯರ ಸಹಕಾರ. ದಂಪತಿಗಳಲ್ಲಿ ಅನ್ಯೋನ್ಯತೆ ವೃದ್ಧಿ .
ಧನು: ಸಂಪಾದನೆಯೊಂದಿಗೆ ದೀರ್ಘ ಪ್ರಯಾಣ ಸಂಭವ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಧನ ಸಮೃದ್ಧಿ. ಯಶಸ್ಸು , ಸುಖ ಸಂತೋಷ. ಉತ್ತಮ ವಾಕ್‌ಚತುರತೆಯಿಂದ ಜನರಂಜನೆ.
ಮಕರ: ಉತ್ತಮ ಆರೋಗ್ಯ. ಬಂಧುಮಿತ್ರರ ಭೇಟಿ. ಗೃಹದಲ್ಲಿ ಸಂಭ್ರಮ. ಉದ್ಯೋಗ ವ್ಯವಹಾರಗಲ್ಲಿ ಯಶಸ್ಸು ಸಂತೋಷ. ದಾಂಪತ್ಯ ತೃಪ್ತಿದಾಯಕ. ಮಕ್ಕಳಿಂದ ಅನುರಾಗ ವೃದ್ಧಿ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ.
ಕುಂಭ: ಆರೋಗ್ಯ ವಿಚಾರದಲ್ಲಿ ಉದಾಸೀನತೆ ಸಲ್ಲದು. ಸರಿಯಾದ ನಿಯಮ ಪಾಲಿಸುವುದರಿಂದ ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ದೈರ್ಯ ಶೌರ್ಯದಿಂದ ಪ್ರಗತಿ. ನಾಯಗತ್ವ ಗುಣ ವೃದ್ಧಿ. ಅಧಿಕ ಧನಾರ್ಜನೆ. ಸಾಂಸಾರಿಕ ಸುಖ ತೃಪ್ತಿದಾಯಕ.
ಮೀನ: ಆರೋಗ್ಯ ಗಮನಿಸಿ. ದಂಪತಿಗಳಲ್ಲಿ ಪರಸ್ಪರ ಸಹಕಾರ ಅಗತ್ಯ. ಧನಾರ್ಜನೆಗೆ ತೊಂದರೆಯಾಗದು. ಮಾತಿನಲ್ಲಿ ಸ್ಪಷ್ಟತೆ ತಾಳ್ಮೆ ಅಗತ್ಯ. ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ಕಾರ್ಯ ನಿರ್ವಹಿಸಿ. ದೇವತಾ ಪ್ರಾರ್ಥನೆಯಿಂದ ನೆಮ್ಮದಿ. ಗುರುಹಿರಿಯರಿಂದ ಸೂಕ್ತ ಸಲಹೆ ಮಾರ್ಗದರ್ಶನ ಲಭ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.