ಆ.15 ರಿಂದ ರಬಕವಿ ಮಲ್ಲಿಕಾರ್ಜುನ ದೇವರ ಐತಿಹಾಸಿಕ ಜಾತ್ರೆ

75ನೇ ಸ್ವಾತಂತ್ರ್ಯ ಮಹೋತ್ಸವದಂದು ಜಾತ್ರೆ

Team Udayavani, Aug 14, 2022, 10:29 AM IST

1

ಬನಹಟ್ಟಿ: 350ಕ್ಕೂ ವರ್ಷದ ಇತಿಹಾಸ ಹೊಂದಿದ ರಬಕವಿ ನಗರದ ಶ್ರೀ ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಅಡಿಯಲ್ಲಿ ಪ್ರತಿವರ್ಷ ಜರುಗುವ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೆ ಶ್ರಾವಣ ಮಾಸದ 3ನೇ ಸೋಮವಾರ ಆ.15 ರಂದು ಮುಂಜಾನೆ ಮಲ್ಲಿಕಾರ್ಜುನ ದೇವರ ಮತ್ತು ಶ್ರೀ ಭ್ರಮರಾಂಭಾ ದೇವಿಯ ಪೂಜೆ ಮತ್ತು ಸಂಜೆ 4 ಗಂಟೆಗೆ ಕರಡಿ ಮಜಲಿನೊಂದಿಗೆ ಜಾತ್ರೆಗೆ ಚಾಲನೆ ದೊರೆಯಲಿದೆ.

ಅಂದು ಸಂಜೆ 6 ರಿಂದ 8 ಗಂಟೆ ವರೆಗೆ ನೂತನ ರಥದಲ್ಲಿ ಅದ್ದೂರಿ ರಥೋತ್ಸವ ಜರುಗುವುದು. ಮರುದಿನ ಮಂಗಳವಾರ ಆ. 16 ರಂದು ಮಧ್ಯಾಹ್ನ 3ಕ್ಕೆ ಹೆಸರಾಂತ ಕುಸ್ತಿ ಪಟುಗಳಿಂದ ಜಂಗೀ ನಿಕಾಲಿ ಕುಸ್ತಿಗಳು ಜರುಗುವವು. ಆ. 17 ಬುಧವಾರ ಸಂಜೆ 6‌ ಕ್ಕೆ ಕಳಸ ಇಳಿಸುವ ಮತ್ತು ಕರಡಿ ಮಜಲು ಜರುಗುವುದು.

ಈ ಭಾಗದಲ್ಲಿ ಶ್ರಾವಣ ತಿಂಗಳಲ್ಲಿ ಜರುಗುವ ಅತಿ ದೊಡ್ಡ ಜಾತ್ರೆಗಳಲ್ಲಿ ಇದು ಮೊದಲ ಜಾತ್ರೆ ಇದಾಗಿರುವುದರಿಂದ ಲಕ್ಷಾಂತರ ಭಕ್ತರು ಜಾತ್ರೆ ವಿಕ್ಷೀಸಲು ಬರುತ್ತಾರೆ. ಪ್ರತಿ ವರ್ಷ ಶ್ರಾವಣ ಮಾಸದ ಮೂರನೆಯ ಸೋಮವಾರ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೆಯು 8 ದಿನಗಳ ಕಾಲ ನಡೆಯುತ್ತದೆ.

ಮಹಾಲಿಂಗಪೂರದ ಮಹಾಲಿಂಗೇಶ್ವರರ ಪಲ್ಲಕ್ಕಿ ಆಗಮಿಸಿದ ಬಳಿಕ ರಥೋತ್ಸವ ಜರುಗುವುದು ಜಾತ್ರೆಯ ವಿಶೇಷವಾಗಿದ್ದು, ಜಾತ್ರೆ ಮಲ್ಲಿಕಾರ್ಜುನ ದೇವರದಾದರೂ ರಥದಲ್ಲಿ ಮಾತ್ರ ಮಹಾಲಿಂಗೇಶ್ವರ ಕುಳಿತು ಕೊಳ್ಳುವುದು ಮತ್ತೊಂದು ವಿಶೇಷ. ಅಲ್ಲದೇ ಅತಿ ಹೆಚ್ಚು ಶೃಂಗರಿಸಲ್ಪಡುವುದು ಇಲ್ಲಿಯ ಮಹಾದೇವ ದೇವಸ್ಥಾನ. ಒಟ್ಟಿನಲ್ಲಿ ನಾಡಿನ ಅನೇಕ ಸಾಂಸ್ಕೃತಿಕ, ಜನಪದ ಹಾಡುಗಳು, ಗ್ರಾಮೀಣ ಕ್ರೀಡೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜರುಗುವ ಈ ಜಾತ್ರೆ ಹಲವಾರು ವಿಶೇಷತೆಗಳನ್ನು ಹೊಂದಿದೆ. ಅಲ್ಲದೇ ಈ ವರ್ಷ 75ನೇ ಸ್ವಾತಂತ್ರ್ಯ ಮಹೋತ್ಸವದಂದು ಜಾತ್ರೆ ಜರುಗುತ್ತಿರುವುದು ಮತ್ತೋಂದು ವಿಶೇಷವಾಗಿದೆ.

ಪಲ್ಲಕ್ಕಿಗಳ ಜಾತ್ರೆ: ಜಾತ್ರೆಗೆ ಬೆಳಗಾವಿ, ಬಿಜಾಪುರ ಬಾಗಲಕೋಟ ಜಿಲ್ಲೆ ಹಾಗೂ ಮಹಾರಾಷ್ಷ್ಟದ ಗಡಿ ಭಾಗ ಸೇರಿದಂತೆ ಅನೇಕ ಗ್ರಾಮಗಳಿಂದ ೫೦೦ಕ್ಕೂ ಹೆಚ್ಚು ಪಲ್ಲಕ್ಕಿಗಳು ಬರುತ್ತವೆ. ಅಂದು ಮುಂಜಾನೆ ಪಕ್ಕದ ಕೃಷ್ಣಾ ನದಿಗೆ ತೆರಳಿ ಪುಣ್ಯ ಸ್ನಾನ ಮಾಡಿ ನಗರದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜರುಗುತ್ತದೆ.

ಸಾಂಗ್ಲಿ ಸಂಸ್ಥಾಪಕರ ಭೇಟಿ: ಸಾಂಗ್ಲಿ ಸಂಸ್ಥಾನದ ಅಡಿಯಲ್ಲಿದ್ದ ರಬಕವಿ ಗ್ರಾಮಕ್ಕೆ ರಾಜ ಮನೆತನದ ಸಂಬಂಧವಿತ್ತು. ಆಗ ಗ್ರಾಮದ ಉಮದಿ ಅಣ್ಣನವರೆಂದೇ ಹೆಸರು ಮಾಡಿದ ಮಲ್ಲೇಶಪ್ಪಣ್ಣಾ ಉಮದಿ ಯವರು ರಬಕವಿ ಊರು ಕಟ್ಟಿದವರಾಗಿದ್ದು, ಅವರು ಊರಲ್ಲಿ ತಿರುಗಾಡಲು ಬಂದರೆ ಮಹಿಳೆಯರು ಯುವಕರು ಮರ್ಯಾದೆ ಕೊಟ್ಟು ಬೀದಿಯಲ್ಲಿ ನಿಲ್ಲತ್ತಿರಲಿಲ್ಲ. ಆಗಿನ ಕಾಲದಲ್ಲಿ ಹಿರಿಯರಿಗೆ ಅಷ್ಟೊಂದು ಮರ್ಯಾದೆ ಇತ್ತೆಂದು ಟ್ರಸ್ಟನ ಹಿರಿಯರು ಹೇಳುತ್ತಾರೆ. 1944 ರಲ್ಲಿ ಸಾಂಗ್ಲಿ ಸಂಸ್ಥಾನ ಸಂಸ್ಥಾಪಕರು ಮತ್ತು ಮಂತ್ರಿಮಂಡಲ ಜಾತ್ರೆಗೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿ ಹೋಗಿದ್ದರು ಎಂದು ಹೇಳಲಾಗುತ್ತದೆ. ಉಮದಿ ಅಣ್ಣನವರಿಗೊಂದು ಸಾಂಗ್ಲಿ ಸಂಸ್ಥಾನದಲ್ಲಿ ಜರುಗುವ ಮಂತ್ರಿಮಂಡಲ ಸಭೆಯಲ್ಲಿ ಪ್ರತ್ಯೇಕ ಆಸನದ ವ್ಯವಸ್ಥೆ ಕೂಡ ಮಾಡಿದ್ದರು ಎನ್ನಲಾಗುತ್ತದೆ.

ನೆಹರು ಮತ್ತು ಇಂದಿರಾ ಭೇಟಿ: ಬಣ್ಣ ಹಾಗೂ ಜವಳಿ ಉದ್ಯೋಗದಲ್ಲಿ ತನ್ನದೇ ಆದ ಕಾರ್ಯವೈಕರಿ ಹೊಂದಿದ ರಬಕವಿ ನಗರ ಛೋಟಾ ಮುಂಬೈ ಎಂದು ಹೆಸರು ಮಾಡಿತ್ತು. 1956 ಏ. 8 ರಂದು ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ ನೆಹರು ಹಾಗೂ ಇಂದಿರಾ ಗಾಂದಿಯವರು ಶಂಕರಲಿಂಗ ಟ್ರಸ್ಟ್ ಗೆ ಬೇಟಿ ನೀಡಿ ಇಲ್ಲಿಯ ನೇಕಾರಿಕೆಯ ಕುರಿತು ಮಾತನಾಡಿದ್ದನ್ನು ಕೆಲ ಹಿರಿಯರು ಹೇಳುತ್ತಾರೆ. ನಂತರ ದೇವರ ದರ್ಶನ ಪಡೆದು ಹೋದರು ಎಂದರು ಹೇಳಲಾಗುತ್ತದೆ.

ಕಳೆದೆರಡು ವರ್ಷಗಳಿಂದ ಕೋವಿಡ್‌ನಿಂದಾಗಿ ಜಾತ್ರೆ ಪೂರ್ಣ ಪ್ರಮಾಣದಲ್ಲಿ ನಡೆದಿರಲಿಲ್ಲ. ಈ ವರ್ಷ ಸಂಭ್ರಮದಿಂದ ಜಾತ್ರೆಯನ್ನು ಕೈಗೊಳ್ಳಲಾಗುವುದು.  –ಬಾಲಚಂದ್ರ ಉಮದಿ (ಅಣ್ಣನವರು) ಅಧ್ಯಕ್ಷರು ಶಂಕರಲಿಂಗ ದೇವಸ್ಥಾನ ಟ್ರಸ್ಟ್           

 -ಕಿರಣ ಶ್ರೀಶೈಲ ಆಳಗಿ

ಟಾಪ್ ನ್ಯೂಸ್

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

4-mudhol

Mudhol: ಟ್ರ್ಯಾಕ್ಟರ್ ಹಾಗೂ ಬೊಲೆರೋ ಮುಖಾಮುಖಿ ಡಿಕ್ಕಿ

1-bagalkote

Bagalkote: ಹೇರ್ ಡ್ರೈಯರ್ ಸ್ಪೋಟಗೊಂಡು ಮಹಿಳೆಯ ಎರಡು ಕೈ ತುಂಡು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

Police

Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.