ಕುಟುಂಬ ರಕ್ಷಣೆಗೆ ಮತ್ತೆ ಬಂದ್ರು ಚಾರ್ಜ್ ಕುಟ್ಟಿ? : ʼದೃಶ್ಯಂ-3ʼ ಪೋಸ್ಟರ್ ವೈರಲ್
Team Udayavani, Aug 14, 2022, 2:40 PM IST
ಕೇರಳ: ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ವೃತ್ತಿ ಬದುಕಿನಲ್ಲಿ ಹೆಸರು ತಂದುಕೊಟ್ಟ ಸಿನಿಮಾಗಳಲ್ಲಿ 2013 ರಲ್ಲಿ ಬಂದ ಕ್ರೈಂ ಥ್ರಿಲ್ಲರ್ ʼದೃಶ್ಯಂʼ ಸಿನಿಮಾ ಕೂಡ ಒಂದು.
ಜಿತ್ ಜೋಸೆಫ್ ನಿರ್ದೇಶನದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಮೊದಲ ಭಾಗದ ಯಶಸ್ಸಿನ ಬಳಿಕ ಕಳೆದ ವರ್ಷ ʼದೃಶ್ಯಂ-2ʼ ಚಿತ್ರ ಕೂಡ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿತ್ತು. ಇದೀಗ ಚಿತ್ರದ ಮೂರನೇ ಭಾಗ ತೆರೆಗೆ ಬರುವ ವಿಷಯ ಮಾಲಿವುಡ್ ನಲ್ಲಿ ಜೋರಾಗಿ ಕೇಳಿ ಬರುತ್ತಿದೆ.
ತನ್ನ ಪತ್ನಿಯಿಂದ ಆಕಸ್ಮಿಕವಾಗಿ ವ್ಯಕ್ತಿಯೊಬ್ಬನ ಕೊಲೆಯಾಗುತ್ತದೆ. ಕೊಲೆ ಸುತ್ತ ನಾಯಕನ ಕುಟುಂಬ ಆರೋಪಿ ಸ್ಥಾನದ ಶಂಕೆಯಲ್ಲಿರುತ್ತದೆ. ನಾಯಕ ಪೊಲೀಸರ ತನಿಖೆಯಿಂದ, ಪ್ರಶ್ನೆಗಳಿಂದ ತನ್ನ ಕುಟುಂಬವನ್ನು ಹೇಗೆ ರಕ್ಷಿಸಿಕೊಳ್ಳುತ್ತಾನೆ ಎನ್ನುವುದು ಚಿತ್ರದ ಕಥೆ. ಸಿನಿಮಾದ ಎರಡನೇ ಭಾಗದ ಅಂತ್ಯದಲ್ಲಿ ಚಾರ್ಜ್ ಕುಟ್ಟಿ ʼತನ್ನ ಕುಟುಂಬ ರಕ್ಷಣೆಗೆ ನಾನು ಸದಾ ಸಿದ್ದʼ ಎನ್ನುವ ಮಾತು ಮೂರನೇ ಭಾಗಕ್ಕೆ ಮುನ್ನುಡಿ ಬರೆದಂತಿತ್ತು.
ʼದೃಶ್ಯಂʼ ಚಿತ್ರ ತಮಿಳು, ತೆಲುಗು, ಕನ್ನಡ, ಚೈನೀಸ್,ಇಂಡೋನೇಷಿಯಾ ಭಾಷೆಗಳಿಗೂ ರಿಮೇಕ್ ಆಗಿ ಯಶಸ್ಸು ಗಳಿಸಿದೆ. ಕನ್ನಡದಲ್ಲಿ ರವಿಚಂದ್ರನ್, ತಮಿಳಿನಲ್ಲಿ ಕಮಲ್ ಹಾಸನ್, ತೆಲುಗಿನಲ್ಲಿ ವೆಂಕಟೇಶ್ ಹಾಗೂ ಹಿಂದಿಯಲ್ಲಿ ಅಜಯ್ ದೇವಗನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ʼದೃಶ್ಯಂ-2ʼ ನಲ್ಲಿದ್ದ ಟ್ವಿಸ್ಟ್, ಟರ್ನ್, ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ತಂದು ಕೂರಿಸಿತ್ತು. ಇದೀಗ ಚಿತ್ರದ ಮೂರನೇ ಭಾಗ ತೆರೆಗೆ ಬರಲಿದೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ.
ಟ್ವಿಟರ್ ನಲ್ಲಿ ಅಭಿಮಾನಿಯೊಬ್ಬರು ‘ದೃಶ್ಯಂ’-3 ದಿ ಕನ್‌ಕ್ಲೂಷನ್ʼ ಎನ್ನುವ ಪೋಸ್ಟರ್ ನ್ನು ಹಂಚಿಕೊಂಡಿದ್ದು, ಸದ್ಯ ಈ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆ.17 ರಂದು ದೃಶ್ಯಂ ಮೂರನೇ ಭಾಗದ ಬಗ್ಗೆ ಮಾಹಿತಿ ಹೊರ ಬೀಳಲಿದೆ ಎನ್ನಲಾಗಿದೆ.
George Kutty & Family are coming back! pic.twitter.com/VUoT6m0gLF
— Christopher Kanagaraj (@Chrissuccess) August 13, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.