![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Aug 14, 2022, 7:51 PM IST
ಬೆಂಗಳೂರು: ಪ್ರಸಕ್ತ ಸಾಲಿನ 75ನೇ ಸ್ವಾತಂತ್ರೋತ್ಸವ ಅಂಗವಾಗಿ ಉತ್ತಮ ಸೇವೆ ಸಲ್ಲಿಸಿದ ಪೊಲೀಸರಿಗೆ ಕೊಡಮಾಡುವ ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪದಕಕ್ಕೆ ರಾಜ್ಯದ 18 ಮಂದಿ ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದಾರೆ. ಹಾಗೆಯೇ ಇಬ್ಬರು ಗೃಹ ರಕ್ಷಕ ದಳ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಲಭಿಸಿದೆ.
ಚಿಕ್ಕಮಗಳೂರಿನ ಕಡೂರು ಪಿಟಿಎಸ್‌ನ ಎಸ್ಪಿ (ಪ್ರಾಂಶುಪಾಲ) ಎನ್.ಶ್ರೀನಿವಾಸ್, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಪ್ರತಾಪ್ ಸಿಂಗ್ ತೋರಟ್, ಬೆಂಗಳೂರು ಹೈಕೋರ್ಟ್ ಭದ್ರತೆ ಡಿವೈಎಸ್ಪಿ ಟಿ.ಎಂ.ಶಿವಕುಮಾರ್, ಕಲಬುರಗಿಯ ಡಿಸಿಆರ್‌ಬಿ ಡಿವೈಎಸ್ಪಿ ಜೆ.ಎಚ್.ಇನಾಂದರ್, ಬೆಂಗಳೂರು ಸಿಐಡಿ ಅರಣ್ಯ ಘಟಕ ಡಿವೈಎಸ್ಪಿ ಎನ್.ಟಿ.ಶ್ರೀನಿವಾಸರೆಡ್ಡಿ, ಸಿಐಡಿ ಡಿವೈಎಸ್ಪಿ ನರಸಿಂಹಮೂರ್ತಿ, ಬೆಂಗಳೂರಿನ ಎಫ್ಪಿಬಿ ಎಸಿಪಿ ರಾಘವೇಂದ್ರ ರಾವ್ ಶಿಂಧೆ, ಬೆಂಗಳೂರು ಎಸಿಬಿ ಡಿವೈಎಸ್ಪಿ ಆರ್.ಪ್ರಕಾಶ್, ಧಾರವಾಡ ಜಿಲ್ಲೆಯ ನವಲಗುಂದ ವೃತ್ತ ಸಿಪಿಐ ಧೃವರಾಜ್ ಬಿ. ಪಾಟೀಲ್, ಬೆಂಗಳೂರು ಎಸಿಬಿ ಇನ್‌ಸ್ಪೆಕ್ಟರ್ ಎಸ್. ಮೊಹಮ್ಮದ್ ಅಲಿ, ಮೈಸೂರು ನಗರದ ವಿದ್ಯಾರಣ್ಯಪುರ ಠಾಣೆಯ ಇನ್‌ಸ್ಪೆಕ್ಟರ್ ಜೆ.ಸಿ.ರಾಜ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಠಾಣೆಯ ಇನ್‌ಸ್ಪೆಕ್ಟರ್ ಬಿ.ಎಸ್.ರವಿ, ಬೆಂಗಳೂರಿನ ಕೆಎಸ್‌ಆರ್‌ಪಿ 1ನೇ ಪಡೆಯ ವಿಶೇಷ ಆರ್‌ಪಿಐ ಮುಫೀದ್ ಖಾನ್, 4ನೇ ಪಡೆಯ ವಿಶೇಷ ಎಆರ್‌ಎಸ್‌ಐ ಮಹದೇವಯ್ಯ, 3ನೇ ಪಡೆಯ ವಿಶೇಷ ಎಆರ್‌ಎಸ್‌ಐ ಆರ್.ಮುರಳಿ, ಬೆಂಗಳೂರು ರಾಜ್ಯ ಗುಪ್ತವಾರ್ತೆ ವಿಭಾಗ ಸಹಾಯಕ ಗುಪ್ತಚರ ಬಸವರಾಜ ಬಿ.ಅಂಡೆಮೈನವರ್, ಬೆಳಗಾವಿ ಡಿಎಸ್‌ಬಿ ಎಎಸ್‌ಐ ಬಾಲಕೃಷ್ಣ ಡಿ. ಶಿಂಧೆ, ಬೆಂಗಳೂರಿನ ಕೆಂಪೇಗೌಡನಗರ ಪೊಲೀಸ್ ಠಾಣೆ ಎಎಸ್‌ಐ ರಂಜಿತ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.
ಹಾಗೆಯೇ ಕರ್ನಾಟಕ ಗೃಹ ರಕ್ಷಕ ದಳದ ಪ್ಲಟೂನ್ ಕಮಾಂಡರ್‌ಗಳಾದ ಜಿ.ಇ. ಶಿವಾನಂದಪ್ಪ ಮತ್ತು ಹರಿಜನ ಲಕ್ಷ್ಮೀನಾರಾಯಣ ಆಯ್ಕೆಯಾಗಿದ್ದಾರೆ.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
You seem to have an Ad Blocker on.
To continue reading, please turn it off or whitelist Udayavani.