ವಿಭಜನೆ ಸ್ಮರಣಾ ದಿನ: ಟಾಕ್‌ವಾರ್ : ನೆಹರೂ ವಿಚಾರದಲ್ಲಿ ಬಿಜೆಪಿ-ಕಾಂಗ್ರೆಸ್ ಆರೋಪ
Team Udayavani, Aug 15, 2022, 6:50 AM IST
ಹೊಸದಿಲ್ಲಿ: ಭಾರತ-ಪಾಕಿಸ್ಥಾನ ವಿಭಜನೆ ನೆನಪಿಗೆ ಈ ವರ್ಷದಿಂದ ಆಚರಿಸಲಾಗುತ್ತಿರುವ “ವಿಭಜನೆ ಸ್ಮರಣಾ ದಿನ’ವಾದ ರವಿವಾರ, ಬಿಜೆಪಿ, ಕಾಂಗ್ರೆಸ್ ನಡುವೆ ವಾಕ್ಸಮರ ನಡೆದಿದೆ.
ದೇಶ ವಿಭಜನೆಗೆ ಜವಾಹರ್‌ಲಾಲ್ ನೆಹರೂ ಕಾರಣ ಎಂದು ಬಿಜೆಪಿ ಆರೋಪಿಸಿದೆ. ಅದಕ್ಕೆ ಪೂರಕವೆಂಬಂತೆ ನೆಹರೂ ಮಾಡಿದ್ದ ಭಾಷಣದ ವೀಡಿಯೋವನ್ನು ಟ್ವೀಟ್ ಮಾಡಿದೆ.
ಮೊಹಮ್ಮದ್ ಅಲಿ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್‌ನ ಒತ್ತಡದಿಂದಾಗಿ ನೆಹರೂ, ಪಾಕಿಸ್ಥಾನ ರಚನೆಗೆ ಒಪ್ಪಿದ್ದರು ಎಂದು ಟ್ವೀಟ್‌ನಲ್ಲಿ ಆರೋಪಿಸಲಾಗಿದೆ. 1947ರಲ್ಲಿ ಉಂಟಾಗಿದ್ದ ಬೆಳವಣಿಗೆಗಳ ಬಗ್ಗೆ ಹಿಂದಿಯಲ್ಲಿ ಹಿನ್ನೆಲೆ ಧ್ವನಿ ಹೊಂದಿರುವ ವೀಡಿಯೋವನ್ನು ಬಿಜೆಪಿ ಅಪ್‌ಲೋಡ್ ಮಾಡಿದೆ.
ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಅದಕ್ಕೆ ತಿರುಗೇಟು ನೀಡಿ ಟ್ವೀಟ್ ಮಾಡಿದ್ದಾರೆ. “ಇತಿಹಾಸದ ಅತ್ಯಂತ ನೋವಿನ ಕ್ಷಣಗಳನ್ನು ಮತ್ತೆ ನೆನಪಿಸುವ ಮೂಲಕ ಸದ್ಯದ ರಾಜಕೀಯ ವಿಚಾರಗಳಿಗೆ ಆಹಾರವನ್ನಾಗಿ ಪರಿವರ್ತಿಸುವುದು ಪ್ರಧಾನಿಯವರ ಉದ್ದೇಶ. ಆಧುನಿಕ ಸಾವರ್ಕರರು ಮತ್ತು ಜಿನ್ನಾಗಳು ದೇಶವನ್ನು ಒಡೆಯುವ ಪ್ರಯತ್ನ ಮುಂದುವರಿಸಿದ್ದಾರೆ. ವಿಭಜನೆ ಸಮಯದಲ್ಲಿ ಲಕ್ಷಾಂತರ ಜನರು ಜೀವ ಕಳೆದುಕೊಂಡರು ಮತ್ತು ದಿಕ್ಕಾ ಪಾಲಾದರು. ದೇಶ ವಿಭಜನೆ ಯೋಜನೆ ಸಾವರ್ಕರ್ ಅವರದ್ದೇ ಆಗಿತ್ತು. ಆ ಯೋಜನೆಗೆ ಜಿನ್ಹಾ ರೂಪು ಕೊಟ್ಟರಷ್ಟೇ’ ಎಂದು ದೂರಿದ್ದಾರೆ.
ಮೋದಿ, ಅಮಿತ್ ಶಾ ಗೌರವ: ಪ್ರಧಾನಿ ಮೋದಿ ಸೇರಿ ಅನೇಕ ಗಣ್ಯರು ವಿಭಜನೆ ವೇಳೆ ಹೋರಾಡಿದ ವೀರರನ್ನು ಸ್ಮರಿಸಿದ್ದಾರೆ. “ವಿಭಜನೆ ಸಮಯದಲ್ಲಿ ಪ್ರಾಣ ಬಲಿಕೊಟ್ಟ ವೀರರಿಗೆ ಗೌರವ ಸಮರ್ಪಿಸುತ್ತೇನೆ. ಹಾಗೆಯೇ ಆ ಕರಾಳ ಸಮಯ ದಲ್ಲಿಯೂ ಹೋರಾಡಿದವರನ್ನು ನಾನು ಶ್ಲಾಘಿಸು ತ್ತೇನೆ’ ಎಂದು ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಟ್ವೀಟ್ ಮಾಡಿದ್ದು, “1947ರ ವಿಭಜನೆಯು ಇತಿಹಾಸದಲ್ಲಿಯೇ ಮರೆಯಲಾಗದ ಅಮಾನ ವೀಯ ಅಧ್ಯಾಯ. ಹಿಂಸೆ, ದ್ವೇಷವು ಲಕ್ಷಾಂತರ ಜನರ ಜೀವನವನ್ನು ಕಿತ್ತುಕೊಂಡಿತು ಮತ್ತು ಅವರನ್ನು ದಿಕ್ಕಾಪಾಲಾಗಿಸಿತು. ಈ ಘಟನೆಯು ದೇಶದ ಯುವ ಸಮಾಜಕ್ಕೆ ಶಾಂತಿಯಿಂದ ಇರಲು ಸ್ಫೂರ್ತಿ ತುಂಬುತ್ತದೆ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assembly Election: ಮಹಾರಾಷ್ಟ್ರಕ್ಕೆ ಫಡ್ನವೀಸ್ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ
Maha Election: ಡಿಕೆಶಿ ಸೇರಿ ಕಾಂಗ್ರೆಸ್ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ
Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ
Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
Assembly Election: ಮಹಾರಾಷ್ಟ್ರಕ್ಕೆ ಫಡ್ನವೀಸ್ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ
BJP: ಇಂದು ಅಶೋಕ್ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.