ಅಪ್ಪು ಹೆಸರಿನಲ್ಲಿ ಸೂರಿನ ಕೊಡುಗೆ

ರಾಜಶೇಖರರೆಡ್ಡಿ ಮಲ್ಲಾಪುರ ಮರಳು, ಕಿಟಕಿ, ಬಾಗಿಲಿಗೆ ತಗಲುವ ವೆಚ್ಚ ಭರಿಸಿದರು

Team Udayavani, Aug 15, 2022, 6:25 PM IST

ಅಪ್ಪು ಹೆಸರಿನಲ್ಲಿ ಸೂರಿನ ಕೊಡುಗೆ

ಸಿಂಧನೂರು: ಗುಡಿಸಲು ವಾಸಿಯಾಗಿರುವ ಪ್ರತಿಯೊಬ್ಬರಿಗೂ ಸೂರು ಕಲ್ಪಿಸಬೇಕೆನ್ನುವುದು ಸರ್ಕಾರದ ಉದ್ದೇಶ. ಆದರೆ, ಸರ್ಕಾರ ಸೂರು ಕೊಟ್ಟರೂ ತಾಂತ್ರಿಕ ಕಾರಣದಿಂದ ಈಡೇರದಿದ್ದಾಗ ಸಮುದಾಯವೇ ಸಹಕಾರ ನೀಡಿ, ಇಬ್ಬರು ಅನಾಥ ಮಕ್ಕಳಿಗೆ ನೆರಳು ಕಲ್ಪಿಸುವಲ್ಲಿ ಯಶಸ್ವಿಯಾಗಿದೆ.

ದಿ.ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬ (ಮಾ.17)ದಂದು ಕೈಗೊಂಡ ಸ್ನೇಹಿತರ ಸಂಕಲ್ಪ ಕೊನೆಗೂ ಈಡೇರಿದೆ. ತಾಲೂಕಿನ ಹೊಸಳ್ಳಿ ಕ್ಯಾಂಪಿನ ಹುಸೇನಮ್ಮ (35), ಬುದ್ಧಿಮಾಂದ್ಯ ಆಗಿರುವ ರೇಣುಕಮ್ಮ (30) ಎರಡು ವರ್ಷದ ಹಿಂದೆ ಪಾಲಕರನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದರು. ಅವರ ತಂದೆ ಹುಸೇನಪ್ಪ ಹಾಗೂ ಲಕ್ಷ್ಮಮ್ಮ ನಿಧನದ ಬಳಿಕ ಇಬ್ಬರೂ ತಬ್ಬಲಿಯಾಗಿದ್ದರು.

ಅಪ್ಪನ ಕನಸು ಈಡೇರಿರಲಿಲ್ಲ: ಹುಸೇನಪ್ಪ ತನ್ನಿಬ್ಬರು ಮಕ್ಕಳಿಗೆ ಸೂರು ಕಲ್ಪಿಸಲು ನಿರ್ಣಯಿಸಿ ಆಶ್ರಯ ಯೋಜನೆಯಡಿ ಮನೆ ಪಡೆದಿದ್ದರು. ಆದರೆ ತಾಂತ್ರಿಕ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ 2 ಬಿಲ್‌ ಪಾವತಿಯಾದ ಮನೆಗೆ ಮತ್ತೆ ಅನುದಾನ ಬಂದಿರಲಿಲ್ಲ. ಕೋವಿಡ್‌ ವೇಳೆ ಹುಸೇನಪ್ಪ ಮೃತಪಟ್ಟ ಹಿನ್ನೆಲೆಯಲ್ಲಿ ನಿರ್ಮಾಣ ಹಂತದ ಮನೆ ಪೂರ್ಣಗೊಂಡಿರಲಿಲ್ಲ.

ಅಕ್ಷಯ ಆಹಾರ ಜೋಳಿಗೆ, ಜೀವಸ್ಪಂದನ ಟ್ರಸ್ಟ್ ನ ಅಶೋಕ ನಲ್ಲಾ, ಅವಿನಾಶ್‌ ದೇಶಪಾಂಡೆ, ನಟ ಪುನೀತ್‌ ಅವರ ಜನ್ಮದಿನ ಆಚರಿಸುವ ಸಂದರ್ಭ ಈ ವಿಷಯ ತಿಳಿದು ಮನೆಗೆ ಧಾವಿಸಿ, ಅಪ್ಪು ಹೆಸರಿನಲ್ಲಿ ಅನಾಥರಿಗೆ ಸೂರು ಕಟ್ಟುವ ನಿರ್ಣಯ ಕೈಗೊಂಡು ಅದನ್ನು ಸಾಕಾರಗೊಳಿಸಿದ್ದಾರೆ.

ಹಲವರ ನೆರವು: ಪುನೀತ್‌ ರಾಜ್‌ಕುಮಾರ್‌ ಹೆಸರಿನಲ್ಲಿ ಜನ್ಮದಿನವನ್ನು ಈ ರೀತಿ ಬಡವರಿಗೆ ನೆರವಾಗುವುದರ ಮೂಲಕ ಆಚರಿಸಬೇಕೆಂಬ ಅಶೋಕ ನಲ್ಲಾ ಆಶಯಕ್ಕೆ ಹಲವರು ಕೈ ಜೋಡಿಸಿದ್ದಾರೆ. ಜೀವಸ್ಪಂದನಾ ಟ್ರಸ್ಟ್‌ನ ಅವಿನಾಶ್‌ ದೇಶಪಾಂಡೆ, ಕಾಲಕಾಲೇಶ್ವರ ಕಲರ್‌ ಕ್ರಿಯೇಶ್ಚನ್‌ ಸಂಸ್ಥೆಯವರು ಮನೆ ಪೂರ್ಣಗೊಳಿಸಲು ಸಿಮೆಂಟ್‌ ಪೂರೈಸಿದರು. ವೆಂಕಟೇಶ್ವರ ಆಗ್ರೋ ಮಾಲೀಕ ನೆಕ್ಕಂಟಿ ಸುರೇಶ್‌ ನೆಲಹಾಸು ಕೊಡಿಸಿದರು.

ಮೆಡಿಕಲ್‌ ಮಾಲೀಕ ರಾಜಶೇಖರರೆಡ್ಡಿ ಮಲ್ಲಾಪುರ ಮರಳು, ಕಿಟಕಿ, ಬಾಗಿಲಿಗೆ ತಗಲುವ ವೆಚ್ಚ ಭರಿಸಿದರು. ಅಕ್ಷಯ ಆಹಾರ ಜೋಳಿಗೆ ಟ್ರಸ್ಟ್‌ನಿಂದ ಮೇಷನ್‌ ಕೆಲಸ ಉಚಿತವಾಗಿ ಮಾಡಿಸಿಕೊಟ್ಟರು. ಕಾರುಣ್ಯಾಶ್ರಮದ ಚನ್ನಬಸಯ್ಯಸ್ವಾಮಿ ಕೂಡ ಸಾಥ್‌ ನೀಡಿದರು. ಇದರ ಫಲವಾಗಿ ಸುಸಜ್ಜಿತ ಸೂರು ನಿರ್ಮಾಣವಾಗಿದ್ದು, ವಿದ್ಯುತ್‌ ವ್ಯವಸ್ಥೆ ಕಲ್ಪಿಸಿ, ಮನೆಗೆ ಸುಣ್ಣ-ಬಣ್ಣ ಬಳಿಯಲಾಗಿದೆ. ಅನಿಲ್‌ ದಾಪತ್ತೆ ಎಂಬುವವರು ಫ್ಯಾನ್‌ ಉಚಿತವಾಗಿ ಕೊಡಿಸಿ ನೆಮ್ಮದಿ ಗಾಳಿ ಬೀಸಿದ್ದಾರೆ.

ಅಪ್ಪು ಮನೆ ಎಂದೇ ಹೆಸರುವಾಸಿ
ಸ್ನೇಹಿತರ ಬಳಗ ಮನಸ್ಸು ಮಾಡಿದರೆ ಸಂಕಷ್ಟದಲ್ಲಿರುವ ಬಡವರಿಗೆ ನೆರವಾಗಬಹುದು ಎಂಬುದಕ್ಕೆ ಈ ಪ್ರಯತ್ನ ಸಾಕ್ಷಿಯಾಗಿದೆ. ಸೂರಿಲ್ಲವೆಂದು ಕೊರಗುತ್ತಿದ್ದ ಇಬ್ಬರು ಮಹಿಳೆಯರು, ಸ್ವಂತ ಸೂರು ಹೊಂದಿದ್ದಾರೆ. ಅವರಿಗೆ ಉಚಿತವಾಗಿ ಗ್ರಾಪಂ ಹೊಸಳ್ಳಿಯ ಅಧಿಕಾರಿಗಳು ಶೌಚಾಲಯ ಕಟ್ಟಿಸಿಕೊಡಬೇಕಿದೆ. ಈ ಹಿಂದೆ ತಾಂತ್ರಿಕ ಕಾರಣಕ್ಕೆ ಬಾಕಿ ಉಳಿದ ಆಶ್ರಯ ಯೋಜನೆ ಬಿಲ್‌ಗ‌ಳನ್ನು ಪಾವತಿಸಬೇಕಿದೆ ಎನ್ನುತ್ತಾರೆ ಸ್ಥಳೀಯರು.

ನಮ್ಮದೇನೂ ಕೊಡುಗೆಯಿಲ್ಲ. ಎಲ್ಲ ದಾನಿಗಳು, ಕಾಣದ ಕೈಗಳ ನೆರವಿನಿಂದ ಇದು ಸಾಧ್ಯವಾಗಿದೆ. ಅಪ್ಪು ಜನ್ಮದಿನಾಚರಣೆ ಸಂದರ್ಭ ಇಂತಹ ಕುಟುಂಬವೊಂದಕ್ಕೆ ನೆರವಾಗುವ ಇಚ್ಛೆ ವ್ಯಕ್ತಪಡಿಸಿದಾಗ ಹಲವರು ಕೈ ಜೋಡಿಸಿ, ಮನೆ ಪೂರ್ಣಗೊಳಿಸಲು ಸಾಥ್‌ ನೀಡಿದ್ದಾರೆ.
ಅಶೋಕ ನಲ್ಲಾ, ಕಾರ್ಯದರ್ಶಿ
ಅಕ್ಷಯ ಆಹಾರ ಜೋಳಿಗೆ ಟ್ರಸ್ಟ್‌

ನಮ್ಮ ತಂದೆ ಹುಸೇನಪ್ಪ ಮನೆ ಕಟ್ಟಿಸಬೇಕೆಂಬ ಕನಸು ಕಂಡಿದ್ದರು. ಅದು ಪೂರ್ಣಗೊಳ್ಳಲೇ ಇಲ್ಲ. ಅವರು ನಿಧನರಾದ ಮೇಲೆ ದಿಕ್ಕು ತೋಚದಂತಾಯಿತು. ಊರ್ಮಿಳಾ ನಲ್ಲಾ ಹಾಗೂ ಅವರ ಪತಿ, ಸಾರ್ವಜನಿಕರ ಸಹಕಾರದೊಂದಿಗೆ ನಮಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ.
ಹುಸೇನಮ್ಮ, ಹೊಸಳ್ಳಿ ಕ್ಯಾಂಪಿನ
ನಿವಾಸಿ, ಸಿಂಧನೂರು ತಾಲೂಕು

ಯಮನಪ್ಪ ಪವಾರ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-maski

Maski: ಸರ್ಕಾರಿ ಕಾಮಗಾರಿಗೆ ಅಡ್ಡಿ: ವ್ಯಕ್ತಿ ಜೈಲುಪಾಲು

BowSpring-Bridge-RCH

ಕೃಷ್ಣಾ ನದಿಗೆ “ಬಿಲ್ಲಿನ ಹೆದೆ ಮಾದರಿ’ ಸೇತುವೆ; ಈ ವರ್ಷ ಸಂಚಾರಕ್ಕೆ ಮುಕ್ತ?

1-desss

Raichur; ಮನೆಯಲ್ಲಿ ಅಗ್ನಿ ಅವಘಡ: ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು, ಪೇಂಟಿಂಗ್ ಭಸ್ಮ

7-

Raichur: ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ನಾಪತ್ತೆ

Raichur: ಎರಡನೇ ತರಗತಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಬಂಧನ

Raichur: ಎರಡನೇ ತರಗತಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.